AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 36 ಪದಗಳಲ್ಲಿ ಆರ್​ಸಿಬಿ ಸಾಧನೆಯನ್ನು ಕೊಂಡಾಡಿದ ವಿಜಯ್ ಮಲ್ಯ

RCB's IPL 2025 Victory: ಐಪಿಎಲ್ 2025ರ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಬಗ್ಗೆ ಆರ್‌ಸಿಬಿಯ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದು, ಇದೇ ಧೈರ್ಯದಿಂದ ಮುಂದೆಯೂ ಆಟವಾಡುತ್ತಲೇ ಇರಿ ಎಂದಿದ್ದಾರೆ.

IPL 2025: 36 ಪದಗಳಲ್ಲಿ ಆರ್​ಸಿಬಿ ಸಾಧನೆಯನ್ನು ಕೊಂಡಾಡಿದ ವಿಜಯ್ ಮಲ್ಯ
Vijay Mallya
ಪೃಥ್ವಿಶಂಕರ
|

Updated on:Apr 28, 2025 | 9:49 PM

Share

ಐಪಿಎಲ್ 2025 (IPL 2025) ರ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (RCB vs DC) ಸೋಲಿಸುವ ಮೂಲಕ ತಮ್ಮ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿತು. ಇದರೊಂದಿಗೆ, ಪಾಯಿಂಟ್‌ ಟೇಬಲ್‌ನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತು. ಇದೇ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ (Virat Kohli) ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡರೆ ಈ ಸೀಸನ್‌ನಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವ ಮೂಲಕ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡರು.

ಒಂದೇ ಪಂದ್ಯದಲ್ಲಿ ಮೂರು ಮೂರು ಸಾಧನೆ ಮಾಡಿರುವ ಆರ್‌ಸಿಬಿ ತಂಡಕ್ಕೆ ಇದೀಗ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಶುಭ ಹಾರೈಸಿದಲ್ಲದೆ, ಎಲ್ಲಾ ಆಟಗಾರರನ್ನು ಅಭಿನಂದಿಸಿದ್ದಾರೆ. ಡೆಲ್ಲಿ ವಿರುದ್ಧ 6 ವಿಕೆಟ್​ಗಳಿಂದ ಗೆದ್ದ ಆರ್​ಸಿಬಿ ತಂಡವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಜಯ್ ಮಲ್ಯ 36 ಪದಗಳಲ್ಲಿ ಹಾಡಿ ಹೊಗಳಿದ್ದಾರೆ.

ದಾಖಲೆ ನಿರ್ಮಾಣವಾಗಲಿದೆ

ತಮ್ಮ ಎಕ್ಸ್ ಖಾತೆಯಲ್ಲಿ ಆರ್​ಸಿಬಿ ಆಟಗಾರರ ಪ್ರದರ್ಶನದ ಬಗ್ಗೆ ಬರೆದುಕೊಂಡಿರುವ ಮಲ್ಯ, ‘ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅದ್ಭುತ ಗೆಲುವಿಗಾಗಿ ಆರ್‌ಸಿಬಿಗೆ ಅಭಿನಂದನೆಗಳು. ತವರಿನಿಂದ ಹೊರಗೆ ಆಡಿರುವ ಆರಕ್ಕೆ 6 ಪಂದ್ಯಗಳಲ್ಲಿ ಗೆಲುವು.. ಐಪಿಎಲ್‌ನಲ್ಲಿ ಒಂದು ದಾಖಲೆ ನಿರ್ಮಾಣವಾಗಲಿದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಎರಡೂ ತಂಡಕ್ಕೆ ಬೋನಸ್. ಇಲ್ಲಿಯವರೆಗಿನ ಸಾಧನೆಗಳು ಅದ್ಭುತವಾಗಿವೆ. ಇದೇ ಧೈರ್ಯದಿಂದ ಮುಂದೆಯೂ ಆಟವಾಡುತ್ತಲೇ ಇರಿ ಎಂದಿದ್ದಾರೆ.

ಈ ಹಿಂದೆಯೂ ಅಭಿನಂದಿಸಿದ್ದ ಮಲ್ಯ

ಇದಕ್ಕೂ ಮೊದಲು, ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಗಳಿಸಿದ್ದಗಾಲೂ ವಿಜಯ್ ಮಲ್ಯ ಅವರು ತಂಡವನ್ನು ಅಭಿನಂದಿಸಿದ್ದರು. ಕೆಕೆಆರ್ ವಿರುದ್ಧದ ಅದ್ಭುತ ಗೆಲುವಿಗಾಗಿ ಆರ್‌ಸಿಬಿಗೆ ಅಭಿನಂದನೆಗಳು. ಆರ್‌ಸಿಬಿ ಚೆನ್ನಾಗಿ ಬೌಲಿಂಗ್ ಮಾಡಿದೆ ಎಂದು ವೀಕ್ಷಕ ವಿವರಣೆಗಾರರು ಕೊನೆಗೂ ಹೇಳುವುದನ್ನು ಕೇಳಿ ಸಂತೋಷವಾಯಿತು. ಬ್ಯಾಟಿಂಗ್ ಲೈನ್ಅಪ್ ಬಲಿಷ್ಠವಾಗಿರುವುದು ಕೂಡ ತಂಡಕ್ಕೆ ಬೋನಸ್ ಆಗಿದೆ ಎಂದು ಮಲ್ಯ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Mon, 28 April 25