AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs CSK: ಆರ್​ಸಿಬಿ ಬ್ಯಾಟರ್​ಗಳ ಆರ್ಭಟ; ಸಿಎಸ್​ಕೆಗೆ ದಾಖಲೆಯ ಟಾರ್ಗೆಟ್

RCB's Explosive Batting, 250 Runs vs CSK: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ IPL 2026 ರ 11ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ RCB, ಕೇವಲ 3 ವಿಕೆಟ್‌ ನಷ್ಟಕ್ಕೆ 250 ರನ್ ಗಳಿಸಿ, CSK ಗೆ 251 ರನ್ ಗಳ ಬೃಹತ್ ಗುರಿ ನೀಡಿತು. RCB ಬ್ಯಾಟರ್‌ಗಳ ಅಬ್ಬರದ ಬ್ಯಾಟಿಂಗ್ ತಂಡಕ್ಕೆ ಈ ಮೊತ್ತ ತಲುಪಲು ನೆರವಾಯಿತು.

RCB vs CSK: ಆರ್​ಸಿಬಿ ಬ್ಯಾಟರ್​ಗಳ ಆರ್ಭಟ; ಸಿಎಸ್​ಕೆಗೆ ದಾಖಲೆಯ ಟಾರ್ಗೆಟ್
Rcb
ಪೃಥ್ವಿಶಂಕರ
|

Updated on:Apr 05, 2026 | 9:34 PM

Share

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 11 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ,  ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು (RCB vs CSK) ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗಳನ್ನು ಕಳೆದುಕೊಂಡು 250 ರನ್ ಕಲೆಹಾಕಿದೆ. ಈ ಮೂಲಕ ಸಿಎಸ್​ಕೆಗೆ ದಾಖಲೆಯ 251 ರನ್​ಗಳನ್ನು ಗುರಿಯಾಗಿ ನೀಡಿದೆ. ಇಂದು ಆರ್​ಸಿಬಿ ಪರ ಬ್ಯಾಟಿಂಗ್ ಮಾಡಿದ ಪ್ರತಿಯೊಬ್ಬ ಬ್ಯಾಟರ್ ಕೂಡ ಅಬ್ಬರದ ಇನ್ನಿಂಗ್ಸ್ ಆಡಿದರು. ಇದರ ಫಲವಾಗಿ ಆರ್​ಸಿಬಿ ಐಪಿಎಲ್ ಇತಿಹಾಸದಲ್ಲಿ ಸಿಎಸ್​ಕೆ ವಿರುದ್ಧ ಅತ್ಯಧಿಕ ಮೊತ್ತ ಕಲೆಹಾಕಿದ ಮೊದಲ ತಂಡವೆಂಬ ದಾಖಲೆಯನ್ನು ಬರೆಯಿತು.

ಆರ್​ಸಿಬಿ ಉತ್ತಮ ಆರಂಭ

ಬ್ಯಾಟಿಂಗ್‌ ಆರಂಭಿಸಿದ ಆರ್​ಸಿಬಿಗೆ ಅಬ್ಬರದ ಆರಂಭ ಸಿಗಲಿಲ್ಲ. ಮೊದಲ 3 ಓವರ್​ಗಳಲ್ಲಿ ತಂಡ ಯಾವುದೇ ಬೌಂಡರಿ ಕಲೆಹಾಕಲಿಲ್ಲ. ಆದಾಗ್ಯೂ ಉತ್ತಮ ಅಡಿಪಾಯ ಹಾಕುವಲ್ಲಿ ಕೊಹ್ಲಿ ಹಾಗೂ ಸಾಲ್ಟ್ ಯಶಸ್ವಿಯಾದರು. ಕೊಹ್ಲಿ 28 ರನ್ ಗಳಿಸಿ ಔಟಾದರೆ, ಸಾಲ್ಟ್ ಹಾಗೂ ಪಡಿಕ್ಕಲ್ ಅರ್ಧಶತಕದ ಜೊತೆಯಾಟ ಕಟ್ಟಿದರು. ಸಾಲ್ಟ್ 30 ಎಸೆತಗಳಲ್ಲಿ 46 ರನ್ ಬಾರಿಸಿ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.

ಪಡಿಕ್ಕಲ್ ಅರ್ಧಶತಕ

ಸಾಲ್ಟ್ ಬಳಿಕ ಬಂದ ನಾಯಕ ರಜತ್ ಪಾಟಿದರ್ ಕೂಡ ಬರಿ ಸಿಕ್ಸರ್​ಗಳಲ್ಲೇ ಆಟ ಮುಂದುವರೆಸಿದರು. ಇದರ ಲಾಭ ಪಡೆದ ಪಡಿಕ್ಕಲ್ ಈ ಆವೃತ್ತಿಯಲ್ಲಿ ಸತತ ಎರಡನೇ ಅರ್ಧಶತಕ ಪೂರೈಸಿದರು. ಪಡಿಕ್ಕಲ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಬಾರಿಸಿ ಔಟಾದರು. ಹಾಗೆಯೇ ಪಾಟಿದರ್ ಜೊತೆಗೂಡಿ ಅರ್ಧಶತಕದ ಜೊತೆಯಾಟವನ್ನು ಕಟ್ಟಿ ತಂಡವನ್ನು 150 ರನ್​ಗಳ ಗಡಿ ದಾಟಿಸಿದರು.

RCB vs CSK IPL 2026 Live Score: ಆರ್​ಸಿಬಿ ಅಬ್ಬರ; ಸಿಎಸ್​ಕೆ 251 ರನ್ ಗುರಿ

ಡೇವಿಡ್ ಸ್ಫೋಟಕ ಬ್ಯಾಟಿಂಗ್

ರಜತ್ ವಿಕೆಟ್ ಬಳಿಕ ಬಂದ ಟಿಮ್ ಡೇವಿಡ್ ಪಂದ್ಯದ ದಿಕ್ಕನೇ ಬದಲಿಸಿದರು. ಆರ್​ಸಿಬಿಯ ಸ್ಕೋರ್ ಬೋರ್ಡ್​ ವೇಗವನ್ನು ಹೆಚ್ಚಿಸಿದ ಟಿಮ್ ಡೇವಿಡ್ ಕೇವಲ 21 ಎಸೆತಗಳಲ್ಲಿ 6 ಸಿಕ್ಸರ್ ಸಹಿತ ಅರ್ಧಶತಕ ಬಾರಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಡೇವಿಡ್ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇತ್ತ ನಾಯಕ ರಜತ್ ಪಾಟಿದರ್ ಕೂಡ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 48 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಜೋಡಿ ಕೊನೆಯ 5 ಓವರ್​​ಗಳಲ್ಲಿ ಬರೋಬ್ಬರಿ 97 ರನ್ ಕಲೆಹಾಕಿದ್ದು, ಇವರಿಬ್ಬರ ಸ್ಫೋಟಕ ಬ್ಯಾಟಿಂಗ್​ಗೆ ಹಿಡಿದ ಕೈಗನ್ನಡಿಯಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Sun, 5 April 26

Follow Us
ಪೃಥ್ವಿ-ಕಾರ್ತಿಕ್​ಗೆ ‘ಗ್ಯಾಸ್ ಟ್ರಬಲ್’: ಇಬ್ಬರಲ್ಲಿ ಯಾರು ಹೀರೊ?
ಪೃಥ್ವಿ-ಕಾರ್ತಿಕ್​ಗೆ ‘ಗ್ಯಾಸ್ ಟ್ರಬಲ್’: ಇಬ್ಬರಲ್ಲಿ ಯಾರು ಹೀರೊ?
1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆಯಲ್ಲಿ ಜಮೀರ್ ಅಚ್ಚರಿ ಮಾತು!
1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆಯಲ್ಲಿ ಜಮೀರ್ ಅಚ್ಚರಿ ಮಾತು!
ಕಿಶನ್ ವಿಕೆಟ್ ಬಿದ್ದ ಕೂಡಲೇ ದೇವರಿಗೆ ಕೈಮುಗಿದ ಲಕ್ನೋ ಮಾಲೀಕ
ಕಿಶನ್ ವಿಕೆಟ್ ಬಿದ್ದ ಕೂಡಲೇ ದೇವರಿಗೆ ಕೈಮುಗಿದ ಲಕ್ನೋ ಮಾಲೀಕ
ಏಕವಚನದಲ್ಲಿ ಬೈದಿದ್ದ ಸಚಿವ ಮಲ್ಲಿಕಾರ್ಜುರನ್ನು ಕ್ಷಮಿಸಿದ ಜಮೀರ್
ಏಕವಚನದಲ್ಲಿ ಬೈದಿದ್ದ ಸಚಿವ ಮಲ್ಲಿಕಾರ್ಜುರನ್ನು ಕ್ಷಮಿಸಿದ ಜಮೀರ್
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ
ದೆಹಲಿಯಲ್ಲಿ ನಕಲಿ ಔಷಧಿಗಳ ತಯಾರಿಸುವ ದಂಧೆ
ದೆಹಲಿಯಲ್ಲಿ ನಕಲಿ ಔಷಧಿಗಳ ತಯಾರಿಸುವ ದಂಧೆ
ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ
ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಟ್ರಾಫಿಕ್ ಜಾಮ್ ಫುಲ್ ಕ್ಲಿಯರ್
ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಟ್ರಾಫಿಕ್ ಜಾಮ್ ಫುಲ್ ಕ್ಲಿಯರ್
ಈ ವಾರ ಈ ರಾಶಿಗೆ ಆದಾಯದಲ್ಲಿ ಏರಿಕೆ ಮತ್ತು ಅದೃಷ್ಟ ಕೂಡಿಬರಲಿದೆ
ಈ ವಾರ ಈ ರಾಶಿಗೆ ಆದಾಯದಲ್ಲಿ ಏರಿಕೆ ಮತ್ತು ಅದೃಷ್ಟ ಕೂಡಿಬರಲಿದೆ
ದಾವಣಗೆರೆ ಬೈಎಲೆಕ್ಷನ್​​: ಅಸಮಾಧಾನ ಆರೋಪಕ್ಕೆ ಜಮೀರ್​​ ಫಸ್ಟ್​​ ರಿಯಾಕ್ಷನ್
ದಾವಣಗೆರೆ ಬೈಎಲೆಕ್ಷನ್​​: ಅಸಮಾಧಾನ ಆರೋಪಕ್ಕೆ ಜಮೀರ್​​ ಫಸ್ಟ್​​ ರಿಯಾಕ್ಷನ್