AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಭರ್ಜರಿ ಸಿಕ್ಸ್, 8 ಫೋರ್: ಆಸ್ಟ್ರೇಲಿಯಾದಲ್ಲಿ RCB ಆಟಗಾರನ ಆರ್ಭಟ

Jacob Bethell BBL 2025: 21 ವರ್ಷದ ಜೇಕಬ್ ಬೆಥೆಲ್ ಇಂಗ್ಲೆಂಡ್ ತಂಡದ ಭರವಸೆಯ ಆಲ್​​ರೌಂಡರ್ ಆಟಗಾರ. ಈ ಬಾರಿಯ ಮೆಗಾ ಹರಾಜಿನಲ್ಲಿ ಬೆಥೆಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2.6 ಕೋಟಿ ರೂ.ಗೆ ಖರೀದಿಸಿದೆ. ಈ ಖರೀದಿ ಬೆನ್ನಲ್ಲೇ ಅಬ್ಬರ ಶುರು ಮಾಡಿರುವ ಜೇಕಬ್ ಈ ಬಾರಿಯ ಐಪಿಎಲ್​​ನಲ್ಲೂ ಸಿಡಿಲಬ್ಬರ ಪ್ರದರ್ಶಿಸುವ ನಿರೀಕ್ಷೆಯಿದೆ.

4 ಭರ್ಜರಿ ಸಿಕ್ಸ್, 8 ಫೋರ್: ಆಸ್ಟ್ರೇಲಿಯಾದಲ್ಲಿ RCB ಆಟಗಾರನ ಆರ್ಭಟ
Jacob Bethel
ಝಾಹಿರ್ ಯೂಸುಫ್
|

Updated on: Jan 15, 2025 | 8:05 AM

Share

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್​ ಲೀಗ್​ನಲ್ಲಿ ಜೇಕಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದೇ ಮೊದಲ ಬಾರಿಗೆ ಬಿಬಿಎಲ್​ ಟೂರ್ನಿ ಆಡುತ್ತಿರುವ ಬೆಥೆಲ್, ಹೊಬಾರ್ಟ್ ಹರಿಕೇನ್ಸ್ ವಿರುದ್ಧ ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಬೆಲ್ಗೆರಿವ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಹೊಬಾರ್ಟ್ ಹರಿಕೇನ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಟಾಸ್ ಗೆದ್ದ ಹೊಬಾರ್ಟ್ ಹರಿಕೇನ್ಸ್ ತಂಡದ ನಾಯಕ ನಾಥನ್ ಎಲ್ಲಿಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಮೆಲ್ಬೋರ್ನ್ ರೆನೆಗೇಡ್ಸ್ ಉತ್ತಮ ಆರಂಭ ಪಡೆದಿರಲಿಲ್ಲ.

ರೆನೆಗೇಡ್ಸ್ ತಂಡವು 23 ರನ್​ಗಳುಸುವಷ್ಟರಲ್ಲಿ ಟಾಪ್-3 ಬ್ಯಾಟರ್​ಗಳು ಪೆವಿಲಿಯನ್​ಗೆ ಮರಳಿದ್ದರು. ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೇಕಬ್ ಬೆಥೆಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಎಚ್ಚರಿಕೆಗೆ ಬ್ಯಾಟಿಂಗ್​ಗೆ ಒತ್ತು ನೀಡಿದ ಬೆಥೆಲ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇದಾದ ಬಳಿಕ ಸಿಡಿಲಬ್ಬರದ ಶುರು ಮಾಡಿದ ಜೇಕಬ್ ಬೆಥೆಲ್ ಹೋಬಾರ್ಟ್ ಹರಿಕೇನ್ಸ್ ಬೌಲರ್​ಗಳ ಬೆಂಡೆತ್ತಲು ಪ್ರಾರಂಭಿಸಿದರು. ಪರಿಣಾಮ ಬೆಥೆಲ್ ಬ್ಯಾಟ್​ನಿಂದ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್​​ಗಳು ಮೂಡಿಬಂದವು. ಈ ಫೋರ್-ಸಿಕ್ಸ್​ಗಳೊಂದಿಗೆ ಜೇಕಬ್ ಬೆಥೆಲ್ 50 ಎಸೆತಗಳಲ್ಲಿ 87 ರನ್ ಬಾರಿಸಿ ಔಟಾದರು.

ಜೇಕಬ್ ಬೆಥೆಲ್ ಬ್ಯಾಟಿಂಗ್ ವಿಡಿಯೋ:

ಇನ್ನು ಜೇಕಬ್ ಬೆಥೆಲ್ ಅವರ ಈ ಅರ್ಧಶತಕದ ನೆರವಿನಿಂದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 20 ಓವರ್​​ಗಳಲ್ಲಿ 154 ರನ್ ಕಲೆಹಾಕಿತು. 155 ರನ್​ಗಳ ಗುರಿ ಬೆನ್ನತ್ತಿದ ಹೋಬಾರ್ಟ್ ಹರಿಕೇನ್ಸ್ ತಂಡವು 19.4 ಓವರ್​ಗಳಲ್ಲಿ 155 ರನ್ ಬಾರಿಸಿ 6 ವಿಕೆಟ್​ಗಳ ಜಯ ಸಾಧಿಸಿತು.

ಈ ಸೋಲಿನ ಹೊರತಾಗಿಯೂ ಮೆಲ್ಬೋರ್ನ್ ರೆನೆಗೇಡ್ಸ್ ಪರ ದಿಟ್ಟ ಪ್ರದರ್ಶನ ನೀಡಿದ 21 ವರ್ಷ ಜೇಕಬ್ ಬೆಥೆಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಅಂದಹಾಗೆ ಬೆಥೆಲ್ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯಲಿದ್ದಾರೆ.

ಇಂಗ್ಲೆಂಡ್ ತಂಡದ ಭರವಸೆಯ ಯುವ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿರುವ ಜೇಕಬ್ ಬೆಥೆಲ್ ಭರ್ಜರಿ ಫಾರ್ಮ್​ನಲ್ಲಿದ್ದು, ಇದೇ ಲಯದೊಂದಿಗೆ ಐಪಿಎಲ್​ನಲ್ಲೂ ಅಬ್ಬರಿಸುವ ನಿರೀಕ್ಷೆಯಿದೆ.

ಹೊಬಾರ್ಟ್ ಹರಿಕೇನ್ಸ್ ಪ್ಲೇಯಿಂಗ್ 11: ಮಿಚೆಲ್ ಓವನ್ , ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಚಾರ್ಲಿ ವಕಿಮ್ , ನಿಖಿಲ್ ಚೌಧರಿ , ಕ್ಯಾಲೆಬ್ ಜ್ಯುವೆಲ್ , ಟಿಮ್ ಡೇವಿಡ್ , ಜೇಕ್ ಡೋರನ್ , ನಾಥನ್ ಎಲ್ಲಿಸ್ (ನಾಯಕ) , ಪೀಟರ್ ಹ್ಯಾಟ್ಜೋಗ್ಲೋ , ರಿಲೆ ಮೆರೆಡಿತ್ , ಬಿಲ್ಲಿ ಸ್ಟಾನ್ಲೇಕ್.

ಇದನ್ನೂ ಓದಿ: 7 ವರ್ಷಗಳ ಬಳಿಕ ರಣಜಿ ಪಂದ್ಯವಾಡಲು ಸಜ್ಜಾದ ಟೀಮ್ ಇಂಡಿಯಾ ಆಟಗಾರ

ಮೆಲ್ಬೋರ್ನ್ ರೆನೆಗೇಡ್ಸ್ ಪ್ಲೇಯಿಂಗ್ 11: ಜೋಶ್ ಬ್ರೌನ್ , ಮಾರ್ಕಸ್ ಹ್ಯಾರಿಸ್ , ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ , ಜಾಕೋಬ್ ಬೆಥೆಲ್ , ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ವಿಲ್ ಸದರ್ಲ್ಯಾಂಡ್ (ನಾಯಕ) , ಹ್ಯಾರಿ ಡಿಕ್ಸನ್ , ಥಾಮಸ್ ಸ್ಟೀವರ್ಟ್ ರೋಜರ್ಸ್ , ಫರ್ಗುಸ್ ಓ ನೀಲ್ , ಆಡಮ್ ಝಂಪಾ , ಕ್ಯಾಲಮ್ ಸ್ಟೋ.

ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ
‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ