ಆಸ್ತಿ ಮಾರಾಟ; ತೆರಿಗೆ ಉಳಿಸಲು ಸೆಕ್ಷನ್ 54 ಮತ್ತು 54ಎಫ್ ಅವಕಾಶ ಬಳಸಿ
Use sections 54 and 54f when selling assets for buying a home: ಚಿನ್ನ, ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಆಸ್ತಿಗಳನ್ನು ಮಾರಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದನ್ನು ತಪ್ಪಿಸಲು ಸೆಕ್ಷನ್ 54 ಮತ್ತು ಸೆಕ್ಷನ್ 54ಎಫ್ ಅವಕಾಶ ಕೊಡುತ್ತದೆ. ನೀವು ಆಸ್ತಿ ಮಾರಿದ ಹಣವನ್ನು ಮನೆ ಖರೀದಿಸಲು ಅಥವಾ ನಿರ್ಮಿಸಲು ಬಳಸಿದರೆ ಆಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ನಿಂದ ವಿನಾಯಿತಿ ಪಡೆಯಬಹುದು.

ಕಳೆದ ಕೆಲ ವರ್ಷಗಳಲ್ಲಿ ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇದರ ಮೇಲಿನ ಹೂಡಿಕೆ ಬಹಳ ಆಕರ್ಷಕ ಎನಿಸಿದೆ. ಚಿನ್ನದಂತಹ ಆಸ್ತಿಯನ್ನು ಮಾರಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ (Capital Gain tax) ಅನ್ವಯ ಆಗುತ್ತದೆ. ಶೇ. 20ರವರೆಗೂ ತೆರಿಗೆ ಇದೆ. ದೀರ್ಘಾವಧಿ ಲಾಭ ಗಳಿಕೆ ತೆರಿಗೆ (Long term capital gain tax) ಶೇ. 12.5 ಇದೆ. ಅಲ್ಪಾವಧಿ ಲಾಭ ಗಳಿಕೆ ತೆರಿಗೆ ಶೇ. 20 ಇದೆ. ಇಷ್ಟು ದೊಡ್ಡ ಮೊತ್ತದ ಟ್ಯಾಕ್ಸ್ ಅನ್ನು ಕಟ್ಟುವುದನ್ನು ತಪ್ಪಿಸಲು ಇನ್ಕಮ್ ಟ್ಯಾಕ್ಸ್ (Income Tax) ಕಾನೂನಿನಲ್ಲಿ ಒಂದು ಅವಕಾಶ ಕೊಡಲಾಗಿದೆ. ಅದು ಸೆಕ್ಷನ್ 54ಎಫ್ ಮಾರ್ಗ.
ಏನಿದು ಸೆಕ್ಷನ್ 54ಎಫ್?
ಈ ಸೆಕ್ಷನ್ನಲ್ಲಿ ಜನರು ಮನೆ ಖರೀದಿಸಲಾಗುವಂತೆ ಪ್ರೋತ್ಸಾಹಿಸಲಾಗುತ್ತದೆ. ನೀವು ಒಂದು ಆಸ್ತಿಯನ್ನು ಮಾರಿ ಅದರಿಂದ ಬಂದ ಹಣವನ್ನು ವಾಸದ ಮನೆ ಖರೀದಿಸಲು ಅಥವಾ ಕಟ್ಟಲು ಬಳಸಿದರೆ ಆಗ ಆ ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಅಂದರೆ, ಆಸ್ತಿ ಮಾರಿ ಸಿಕ್ಕ ಲಾಭಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುವುದಿಲ್ಲ.
ಚಿನ್ನ, ಷೇರುಗಳು, ಮ್ಯೂಚುವಲ್ ಫಂಡ್ಗಳು ಇತ್ಯಾದಿ ಆಸ್ತಿಗಳಿಗೆ ಸೆಕ್ಷನ್ 54ಎಫ್ ಅನ್ವಯ ಆಗುತ್ತದೆ. ಕಮರ್ಷಿಯಲ್ ಆಸ್ತಿಯ ಮಾರಾಟದಿಂದ ಬಂದ ಹಣಕ್ಕೂ ಈ ವಿನಾಯಿತಿ ಸಿಗುತ್ತದೆ.
ಸೆಕ್ಷನ್ 54ಎಫ್ನಂತೆ ಸೆಕ್ಷನ್ 54 ಕೂಡ ಇದೆ. ನೀವು ಮನೆಯನ್ನು ಮಾರಿ ಆ ಹಣವನ್ನು ಬೇರೊಂದು ಮನೆ ಖರೀದಿಸಲು ಅಥವಾ ನಿರ್ಮಿಸಲು ಬಳಸಿದರೆ ಆಗ ಸೆಕ್ಷನ್ 54 ನೆರವಿಗೆ ಬರುತ್ತದೆ. ಆದರೆ, ನೀವು ಮನೆ ಖರೀದಿಸಿ ಕನಿಷ್ಠ ಎರಡು ವರ್ಷ ಆದ ಬಳಿಕವಷ್ಟೇ ಮಾರಿ, ಅದನ್ನು ಎರಡು ವರ್ಷದೊಳಗೆ ಬೇರೆ ಮನೆ ಖರೀದಿಗೆ ಬಳಸಬೇಕು. ಅಥವಾ ಮೂರು ವರ್ಷದೊಳಗೆ ಹೊಸ ಮನೆ ಕಟ್ಟಬೇಕು. ಆಗ ಹಿಂದಿನ ಮನೆ ಮಾರಾಟದಿಂದ ಬಂದ ಲಾಭಕ್ಕೆ ನೀವು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟುವ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?
ಒಂದು ವೇಳೆ ನೀವಿರುವ ವಾಸದ ಮನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು, ಅದಕ್ಕೆ ಪರಿಹಾರ ಹಣ ಕೊಟ್ಟರೆ ಅದಕ್ಕೂ ಟ್ಯಾಕ್ಸ್ ಬೆನಿಫಿಟ್ ಇರುತ್ತದೆ. ಆ ಕಾಂಪೆನ್ಸೇಶನ್ ಹಣವನ್ನು ಬೇರೆ ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಬಳಸಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




