
ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಸೋಲನುಭವಿಸಿತು. ಆದರೆ, ಟೀಮ್ ಇಂಡಿಯಾದ ಯುವ ಫಿನಿಶರ್ ರಿಂಕು ಸಿಂಗ್ (Rinku Singh) ಆರ್ಭಟ ಹರಿಣಗಳ ನಾಡಲ್ಲೂ ಮುಂದುವರೆಯಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ರಿಂಕು ಕೇವಲ 39 ಎಸೆತಗಳಲ್ಲಿ 9 ಫೋರ್, 2 ಸಿಕ್ಸರ್ನೊಂದಿಗೆ ಅಜೇಯ 68 ರನ್ ಚಚ್ಚಿದರು. ಈ ಮೂಲಕ ತಂಡದ ಮೊತ್ತವನ್ನು 180ರ ಅಂಚಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದರು. ರಿಂಕು ಸಿಡಿಸಿದ ಎರಡು ಸಿಕ್ಸ್ ಕೂಡ ಅದ್ಭುತವಾಗಿತ್ತು. ಅದರಲ್ಲೂ ಒಂದು ಸಿಕ್ಸ್ ಮಾಧ್ಯಮ ಬಾಕ್ಸ್ನ ಗಾಜನ್ನು ಒಡೆಯಿತು.
ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಾಮ್ ಅವರ ಬೌಲಿಂಗ್ನಲ್ಲಿ ರಿಂಕು ಎರಡು ಸ್ಫೋಟಕ ಸಿಕ್ಸರ್ಗಳನ್ನು ಸಿಡಿಸಿದರು. ಅವುಗಳಲ್ಲಿ ಒಂದು ಪ್ರೆಸ್ ಬಾಕ್ಸ್ನ ಗಾಜಿಗೆ ತಾಗಿ ಒಡೆದು ಹೋಯಿತು. ಇದು ಆಫ್ರಿಕಾಕ್ಕೆ ಭಾರೀ ನಷ್ಟ ಉಂಟು ಮಾಡಿದೆ. ಈ ಘಟನೆಯು 19 ನೇ ಓವರ್ನಲ್ಲಿ ಸಂಭವಿಸಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಭಾರತ 19.3 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದಾಗ ಮಳೆ ಮಧ್ಯಪ್ರವೇಶಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ದಕ್ಷಿಣ ಆಫ್ರಿಕಾಕ್ಕೆ 15 ಓವರ್ಗಳಲ್ಲಿ 152 ರನ್ಗಳ ಗುರಿಯನ್ನು ನೀಡಲಾಯಿತು. ಪ್ರೋಟಿಯಸ್ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಭಾರತೀಯ ಬೌಲರ್ಗಳ ಬೆವರಿಳಿಸಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದರು. 27 ಎಸೆತಗಳಲ್ಲಿ 49 ರನ್ ಗಳಿಸಿದರು. ನಾಯಕ ಏಡೆನ್ ಮಾರ್ಕ್ರಾಮ್ ಕೂಡ ಚೇಸಿಂಗ್ನಲ್ಲಿ 17 ಎಸೆತಗಳಲ್ಲಿ 30 ರನ್ ಗಳಿಸಿದರು.
ಸೆಹ್ವಾಗ್-ದ್ರಾವಿಡ್ ಪುತ್ರರ ಮುಖಾಮುಖಿಯಲ್ಲಿ ಮಿಂಚಿದ್ದು ಯಾರು?
ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಫ್ರಿಕಾನ್ನರು 1-0 ಮುನ್ನಡೆ ಪಡೆದುಕೊಂಡಿದ್ದಾರೆ. ಕೊನೆಯ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಸರಣಿಯ ನಿರ್ಣಾಯಕ ಕದನಕ್ಕಾಗಿ ಉಭಯ ತಂಡಗಳು ಜೋಹಾನ್ಸ್ಬರ್ಗ್ಗೆ ಪ್ರಯಾಣಿಸಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 am, Wed, 13 December 23