Rishabh Pant: ಸತತ 2ನೇ ಸೋಲಿನ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ರಿಷಭ್ ಪಂತ್: ಏನಂದ್ರು ಗೊತ್ತೇ?

| Updated By: Vinay Bhat

Updated on: Jun 13, 2022 | 9:08 AM

IND vs SA 2nd T20I: ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್‌ಗೆ 148 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ 18.2 ಓವರ್‌ಗಳಲ್ಲಿ 6 ವಿಕೆಟ್‌ಗೆ 149 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ನಾಯಕ ರಿಷಭ್ ಪಂತ್ ಏನು ಹೇಳಿದರು ಕೇಳಿ.

Rishabh Pant: ಸತತ 2ನೇ ಸೋಲಿನ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ರಿಷಭ್ ಪಂತ್: ಏನಂದ್ರು ಗೊತ್ತೇ?
rishabh pant in post match IND vs SA 2nd T20I
Follow us on

ಕಟಕ್​ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲೂ ಭಾರತ (India vs South Africa) ಸೋಲು ಕಂಡಿದೆ. ಬ್ಯಾಟಿಂಗ್ ವೈಫಲ್ಯದಿಂದ ಸವಾಲಿನ ಟಾರ್ಗೆಟ್ ನೀಡುವಲ್ಲಿ ಎಡವಿದ ಟೀಮ್ ಇಂಡಿಯಾ (Team India) ಬೌಲಿಂಗ್​ನಲ್ಲೂ ಪರಿಣಾಮಕಾರಿಯಾಗಿ ಗೋಚರಿಸಲಿಲ್ಲ. 4 ವಿಕೆಟ್​ಗಳ ಜಯದೊಂದಿಗೆ ಹರಿಣಗಳ ಪಡೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಇದೀಗ ಸರಣಿ ಜಯಿಸಬೇಕಾದರೆ ಪಂತ್ ಪಡೆ ಉಳಿದಿರುವ ಮೂರೂ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್‌ಗೆ 148 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ 18.2 ಓವರ್‌ಗಳಲ್ಲಿ 6 ವಿಕೆಟ್‌ಗೆ 149 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ನಾಯಕ ರಿಷಭ್ ಪಂತ್ (Rishabh Pant) ಏನು ಹೇಳಿದರು ಕೇಳಿ.

“ನಾವು 10 ರಿಂದ 15 ರನ್​ಗಳನ್ನು ಕಡಿಮೆ ಹೊಡೆದೆವು. ಮೊದಲ 7-8 ಓವರ್​ಗಳಲ್ಲಿ ಭುವನೇಶ್ವರ್ ಕುಮಾರ್ ಸೇರಿದಂತೆ ವೇಗಿದ ಬೌಲರ್​ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ, ನಂತರ ನಾವು ಅಂದುಕೊಂಡಂತೆ ಪಂದ್ಯ ಸಾಗಲಿಲ್ಲ. ಮೊದಲ ಹಂತದಲ್ಲಿ ನಾವು ಚೆನ್ನಾಗಿ ಬೌಲಿಂಗ್ ಮಾಡಿದೆವು, ದ್ವಿತೀಯ ಹಂತದಲ್ಲಿ ವಿಕೆಟ್ ಪಡೆಯಬೇಕಾಯಿತು. ಆದರೆ, ನಮಗೆ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ,” ಎಂದು ಮತ್ತೊಮ್ಮೆ ಬೌಲರ್​ಗಳನ್ನು ಸೋಲಿಗೆ ಹೊಣೆ ಮಾಡಿದ್ದಾರೆ.

IND vs SA: ಟೀಮ್ ಇಂಡಿಯಾ ಸೋಲಿಗೆ ಕಾರಣವಾಗಿದ್ದೇ ಈ ಮೂರು ಅಂಶಗಳು

ಇದನ್ನೂ ಓದಿ
IPL 2023: ಐಪಿಎಲ್​ ಪ್ರತಿ ಪಂದ್ಯದ ಪ್ರಸಾರ ಹಕ್ಕು 105 ಕೋಟಿಗೆ ಮಾರಾಟ: ಇನ್ನೂ ಮುಗಿದಿಲ್ಲ..!
Team India: ಟೀಮ್ ಇಂಡಿಯಾದ ಅತ್ಯಂತ ಕಿರಿಯ ನಾಯಕ ಯಾರು ಗೊತ್ತಾ?
India vs South Africa 2nd T20 Highlights: ಮತ್ತೆ ಎಡವಿದ ಭಾರತ; 2ನೇ ಟಿ20ಯಲ್ಲೂ ಆಫ್ರಿಕಾಗೆ ಸುಲಭ ಜಯ
IND vs SA: ನಾಲ್ವರು ಶೂನ್ಯಕ್ಕೆ ಔಟ್, ಮಿಕ್ಕವರಿಗೆ 10 ರನ್ ಬಾರಿಸಲಾಗಲಿಲ್ಲ! ಕಟಕ್​ನಲ್ಲಿ ಟೀಂ ಇಂಡಿಯಾದ ಪ್ರದರ್ಶನವಿದು

“ಕ್ಲಾಸೆನ್ ಮತ್ತು ಬವುಮಾ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಾವು ಇನ್ನೂ ಚೆನ್ನಾಗಿ ಬೌಲಿಂಗ್ ಮಾಡಬಹುದಿತ್ತು. ಮುಂದಿನ ಪಂದ್ಯದಿಂದ ಈ ವಿಭಾಗದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡುತ್ತೇವೆ. ಮುಂದಿನ ಮೂರು ಪಂದ್ಯಗಳನ್ನು ಗೆಲ್ಲಬೇಕಿರುವುದರಿಂದ ಕಮ್​ಬ್ಯಾಕ್ ಮಾಡುತ್ತೇವೆ,” ಎಂದು ಹೇಳಿ ಪಂತ್ ಮಾತು ಮುಗಿಸಿದರು.

ಇನ್ನು ದ. ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಮತನಾಡಿ, “ಟಾರ್ಗೆಟ್ ಚೇಸ್ ಮಾಡಿದ್ದು ತುಂಬಾ ವಿಶೇಷವಾಗಿತ್ತು. ಭುವನೇಶ್ವರ್ ಕುಮಾರ್ ಬೌಲಿಂಗ್ ಅದ್ಭುತವಾಗಿತ್ತು. ನಮಗೆ ಬ್ಯಾಟಿಂಗ್ ಕಷ್ಟವಾಯಿತು. ಅವರ ಬೌಲಿಂಗ್ ಅನ್ನು ಎದುರಿಸಲು ಯಾರಾದರು ಒಬ್ಬ ಬ್ಯಾಟರ್ ನಮಗೆ ಬೇಕಾಗಿತ್ತು. ಅದನ್ನು ನಾನು ಮಾಡಿದೆ. ನಾನು ಈ ಪಂದ್ಯದಿಂದ ಕೆಲ ವಿಚಾರಗಳನ್ನು ಕಲಿತಿದ್ದೇನೆ. ಇಲ್ಲಿ ಚೇಸ್ ಮಾಡುವುದು ಸುಲಭ ಅಲ್ಲ ಎಂಬುದು ತಿಳಿದಿತ್ತು. ಆದರೆ, ನಮ್ಮಲ್ಲಿ ನಂಬಿಕೆಯಿತ್ತು. ಡೇವಿಡ್ ಮಿಲ್ಲರ್ ಅವರನ್ನು 5 ಅಥವಾ 6ನೇ ಕ್ರಮಾಂಕದಲ್ಲಿ ಆಡಿಸುವ ಬಗ್ಗೆ ಪ್ಲಾನ್ ಮಾಡಲಾಗಿತ್ತು. ಆದರೆ, ಕ್ಲಾಸೆನ್ ಬ್ಯಾಟಿಂಗ್ ಅಮೋಘವಾಗಿತ್ತು. ನಮ್ಮ ಬ್ಯಾಟಿಂಗ್ ಶಕ್ತಿಗೆ ಅವರು ಉತ್ತಮ ಕೊಡುಗೆ ನೀಡಿದರು. ನಮ್ಮ ಪಾತ್ರ ಏನೇ ಇರಬಹುದು, ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ,” ಎಂದು ಹೇಳಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಕ್ಲಾಸೆನ್ ಮಾತನಾಡಿ, “ನಾನು ಈ ಪಂದ್ಯವನ್ನು ಆಡುತ್ತೇನೆ ಎಂದು ನನಗೆ ಒಂದು ದಿನದ ಹಿಂದೆಯಷ್ಟೆ ತಿಳಿಯಿತು. ಹೊಸ ಬಾಲ್​ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟವಾಯಿತು. ಹೀಗಾಗಿ ಸ್ಪಿನ್ನರ್​ಗಳನ್ನು ಟಾರ್ಗೆಟ್ ಮಾಡಿದೆ. ಭಾರತ ವಿರುದ್ಧ ಆಡಿದ್ದಕ್ಕೆ ತುಂಬಾ ಸಂತಸವಿದೆ. ನಮ್ಮ ಸ್ಟಾಫ್ ಸಿಬ್ಬಂದಿಗಳು ನನಗೆ ಅನೇಕ ಸಹಾಯ ಮಾಡಿದ್ದಾರೆ. ತುಂಬಾ ಸಂತಸವಾಗಿದೆ,” ಎಂಬುದು ಕ್ಲಾಸೆನ್ ಮಾತು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:08 am, Mon, 13 June 22