Rohit Sharma: ಮೊನ್ನೆ ಕಾರ್ತಿಕ್​ ಕುತ್ತಿಗೆ ಹಿಡಿದಿದ್ದ ರೋಹಿತ್ 2ನೇ ಟಿ20ಯಲ್ಲಿ ಗೆದ್ದಾಗ ಏನು ಮಾಡಿದ್ರು ನೋಡಿ

Dinesh Karthik, IND vs AUS: ಡೆನಿಯಲ್ ಸ್ಯಾಮ್ಸ್ ಅವರ ಮೊದಲ ಎಸೆತದಲ್ಲೇ ದಿನೇಶ್ ಕಾರ್ತಿಕ್ ಚೆಂಡನ್ನು ಸಿಕ್ಸರ್​ಗೆ ಅಟ್ಟಿ ಗೆಲುವು ಖಚಿತ ಪಡಿಸಿದರು. ಎರಡನೇ ಎಸೆತದಲ್ಲಿ ಫೋರ್ ಬಾರಿಸಿ ಗೆಲುವಿಗೆ ಕಾರಣರಾದರು. ಈ ಸಂದರ್ಭ ರೋಹಿತ್ ಶರ್ಮಾ ಏನು ಮಾಡಿದರು ನೋಡಿ.

Rohit Sharma: ಮೊನ್ನೆ ಕಾರ್ತಿಕ್​ ಕುತ್ತಿಗೆ ಹಿಡಿದಿದ್ದ ರೋಹಿತ್ 2ನೇ ಟಿ20ಯಲ್ಲಿ ಗೆದ್ದಾಗ ಏನು ಮಾಡಿದ್ರು ನೋಡಿ
Dinesh Karthik and Rohit Sharma
Edited By:

Updated on: Sep 24, 2022 | 10:45 AM

ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20ಯ ಎಂಟು ಓವರ್​ಗಳ ಪಂದ್ಯದಲ್ಲಿ ಭಾರತ (India vs Australia) ರೋಚಕ ಜಯ ಸಾಧಿಸಿ ಸರಣಿ ಸಮಬಲ ಸಾಧಿಸಿದೆ. ಅಕ್ಷರ್ ಪಟೇಲ್, ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಮಿಂಚಿದರೆ, ನಾಯಕ ರೋಹಿತ್ ಶರ್ಮಾ (Rohit Sharma) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ದಿನೇಶ್ ಕಾರ್ತಿಕ್ (Dinesh Karthik) ಒಂದು ಫೋರ್, ಸಿಕ್ಸರ್ ಸಿಡಿಸಿ ಪಂದ್ಯವನ್ನು ಫಿನಿಶ್ ಮಾಡಿದರು. ಕೊನೆಯ ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 9 ರನ್​ಗಳ ಅವಶ್ಯಕತೆಯಿತ್ತು. ಹಿಂದಿನ ಓವರ್​ನ ಅಂತಿಮ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟಾದ ಕಾರಣ ಕಾರ್ತಿಕ್ ಕ್ರೀಸ್​ಗೆ ಬಂದು ಸ್ಟ್ರೈಕ್​ನಲ್ಲಿದ್ದರು. ಡೆನಿಯಲ್ ಸ್ಯಾಮ್ಸ್ ಅವರ ಮೊದಲ ಎಸೆತದಲ್ಲೇ ಕಾರ್ತಿಕ್ ಚೆಂಡನ್ನು ಸಿಕ್ಸರ್​ಗೆ ಅಟ್ಟಿ ಗೆಲುವು ಖಚಿತ ಪಡಿಸಿದರು. ಎರಡನೇ ಎಸೆತದಲ್ಲಿ ಫೋರ್ ಬಾರಿಸಿ ಗೆಲುವಿಗೆ ಕಾರಣರಾದರು. ಈ ಸಂದರ್ಭ ರೋಹಿತ್ ಶರ್ಮಾ ಏನು ಮಾಡಿದರು ನೋಡಿ.

ದಿನೇಶ್ ಕಾರ್ತಿಕ್ ತಾನು ಎದುರಿಸಿದ ಮೊದಲ ಎರಡು ಎಸೆದಲ್ಲಿ ಸಿಕ್ಸ್, ಫೋರ್ ಬಾರಿಸಿ ಗೆಲುವು ತಂದುಕೊಟ್ಟ ಸಂದರ್ಭ ನಾನ್ ಸ್ಟ್ರೈಕರ್​ನಲ್ಲಿದ್ದ ರೋಹಿತ್ ಶರ್ಮಾ ಅವರು ಕಾರ್ತಿಕ್ ಬಳಿ ಓಡಿ ಬಂದು ನಗುತ್ತಾ ಖುಷಿಯಲ್ಲಿ ತಬ್ಬಿಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಯಾಕೆಂದರೆ ಹಿಂದಿನ ಮೊದಲ ಟಿ20 ಯಲ್ಲಿ ರೋಹಿತ್ ಹಾಗೂ ಕಾರ್ತಿಕ್ ನಡುವಣ ವಿಡಿಯೋ ಕೂಡ ವೈರಲ್ ಆಗಿತ್ತು.

ಇದನ್ನೂ ಓದಿ
Dinesh Karthik: ಆಡಿದ ಎರಡು ಬಾಲ್​ನಲ್ಲಿ ಸಿಕ್ಸ್, ಫೋರ್: ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಏನಂದ್ರು ಗೊತ್ತೇ?
Rohit Sharma: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ: ಹಿಟ್​ಮ್ಯಾನ್ ಮುಡಿಗೆ ವಿಶೇಷ ದಾಖಲೆ
IND vs AUS: ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್‌; ನಿರ್ಣಾಯಕ ಪಂದ್ಯದಲ್ಲಿ ಆಸೀಸ್ ಮಣಿಸಿದ ಭಾರತ..!
Ind vs Aus Playing XI: 48 ಎಸೆತಗಳ ಪಂದ್ಯ.. ಟಾಸ್ ಗೆದ್ದ ಭಾರತ; ಉಭಯ ತಂಡಗಳ ಪ್ಲೇಯಿಂಗ್ XI

 

ಹಿಂದಿನ ಪಂದ್ಯದಲ್ಲಿ ಏನಾಗಿತ್ತು?:

ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಡಿಆರ್​ಎಸ್ ಮನವಿ ವಿಫಲವಾಗಿದ್ದಕ್ಕೆ ರೋಹಿತ್ ಸಿಟ್ಟಾಗಿ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಕುತ್ತಿಗೆ ಹಿಡಿದ ಘಟನೆ ನಡೆದಿತ್ತು. ಆದರೆ ಇದೆಲ್ಲಾ ರೋಹಿತ್ ಮಾಡಿದ್ದು ತಮಾಷೆಯಾಗಿ. ಮೊದಲು ಚಹಲ್ ಬೌಲಿಂಗ್ ನಲ್ಲಿ ಸ್ಟೀವ್ ಸ್ಮಿತ್ ಪ್ಯಾಡ್​ಗೆ ತಗುಲಿದ ಬಾಲ್ ಸ್ಟಂಪ್ ಹಾದು ಹೋಗುತ್ತಿತ್ತು. ಆದರೆ ವಿಕೆಟ್ ಕೀಪರ್ ಆಗಲೀ ಬೌಲರ್ ಆಗಲೀ ಅಪೀಲ್ ಮಾಡಿಲ್ಲ.

ಬಳಿಕ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಪ್ಯಾಡ್​ಗೆ ಬಾಲ್ ಬಡಿದಿತ್ತು. ಆದರೆ ಕಾರ್ತಿಕ್​ಗೆ ಇದು ಖಚಿತವಿರಲಿಲ್ಲ. ಹೀಗಾಗಿ ರೋಹಿತ್ ಡಿಆರ್​ಎಸ್​ಗೆ ಮನವಿ ಮಾಡಿದರು. ಬಳಿಕ ಕಾರ್ತಿಕ್ ತಮಾಷೆಯಾಗಿ ಬೈದು ಅವರ ಕುತ್ತಿಗೆ ಹಿಡಿದು ರೋಹಿತ್ ಸಿಟ್ಟು ತೀರಿಸಿಕೊಂಡರು. ಇದೀಗ ಮೊನ್ನೆ ಕುತ್ತಿಗೆ ಹಿಡಿದಿದ್ದ ರೋಹಿತ್ ಇಂದು ತಬ್ಬಿಕೊಂಡು ಸಂಭ್ರಮಿಸುತ್ತಿರುವ ವಿಡಿಯೋ ಎರಡೂ ಹೊಂದಾಣಿಕೆ ಮಾಡಿ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಕಾರ್ತಿಕ್, ”ನನಗೆ ಎರಡು ಬಾಲ್ ಆಡಲು ಸಿಕ್ಕಿತಷ್ಟೆ. ನಾನು ನನ್ನ ಬೆಸ್ಟ್ ಅನ್ನು ಅಲ್ಲಿ ನೀಡಬೇಕಿತ್ತು. ಅದನ್ನು ಪ್ರಯತ್ನಿಸಿದೆ. ಹೊಸ ಚೆಂಡಿನಲ್ಲಿ ವಿಶ್ವದ ಶ್ರೇಷ್ಠ ಬೌಲರ್​ಗಳ ಎದುರು ಆ ಸಂದರ್ಭ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ನಾನು ಬ್ಯಾಟಿಂಗ್​ಗೆ ಬಂದಾಗ ಬೌಲರ್ ಏನು ಮಾಡುತ್ತಾರೆ ಎಂದು ರೋಹಿತ್ ನನಗೆ ಹೇಳಿದರು. ನಾನು ನನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದೆ. ನಾನು ಈ ರೀತಿಯ ಸಂದರ್ಭದಲ್ಲಿ ಆಡಲು ಅನೇಕ ಸಮಯದಿಂದ ಅಭ್ಯಾಸ ನಡೆಸುತ್ತಿದ್ದೇನೆ. ಇದನ್ನು ಆರ್​ಸಿಬಿ ತಂಡದಲ್ಲಿ ಇದ್ದಾಗಲೂ ಮಾಡಿದ್ದೇನೆ. ಈಗ ರಾಷ್ಟ್ರೀಯ ತಂಡಕ್ಕೆ ಕೊಡುಗೆ ನೀಡಲು ಖುಷಿ ಆಗುತ್ತಿದೆ,” ಎಂದು ಹೇಳಿದ್ದಾರೆ.

Published On - 10:44 am, Sat, 24 September 22

TV9 Web

TV9 Kannada

Read More
Loading...
Unable to load recommendations.
Follow Us