Viral Video: ಟೀಮ್ ಇಂಡಿಯಾ ಆಟಗಾರನ ವಿರುದ್ದ ರೋಹಿತ್ ಶರ್ಮಾ ಫುಲ್ ಗರಂ
Rohit Sharma - Rishabh Pant: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು.

Asia Cup 2022: ಏಷ್ಯಾಕಪ್ನ ಸೂಪರ್-4 ಹಂತದ 2ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ (India vs Pakistan) ಟೀಮ್ ಇಂಡಿಯಾ ಸೋಲನುಭವಿಸಿದೆ. ಭಾರೀ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅಂತಿಮವಾಗಿ ಪಾಕ್ ತಂಡವು 5 ವಿಕೆಟ್ಗಳಿಂದ ಜಯಭೇರಿ ಬಾರಿಸಿತ್ತು. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಸ್ಪೋಟಕ ಆರಂಭ ಪಡೆದಿತ್ತು. ಕೇವಲ 5 ಓವರ್ಗಳಲ್ಲಿ 54 ರನ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ಭರ್ಜರಿ ಆರಂಭ ಒದಗಿಸಿದ್ದರು. ಅಷ್ಟೇ ಅಲ್ಲದೆ 10 ಓವರ್ ಮುಕ್ತಾಯದ ವೇಳೆಗೆ ಭಾರತ ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 100 ರನ್ಗಳ ಗಡಿ ತಲುಪಿತ್ತು.
ಆದರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತದಿಂದಾಗಿ 200ರ ಗಡಿದಾಟಬೇಕಿದ್ದ ಭಾರತ ತಂಡದ ಮೊತ್ತವು ಅಂತಿಮವಾಗಿ 181 ಕ್ಕೆ ಬಂದು ನಿಂತಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಬೇಗನೆ ಔಟಾಗಿದ್ದು ಭಾರತ ತಂಡದ ಪಾಲಿಗೆ ಮುಳುವಾಯಿತು. ಏಕೆಂದರೆ ವಿರಾಟ್ ಕೊಹ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸುತ್ತಿದ್ದರೂ, ಮತ್ತೊಂದು ಕಡೆಯಿಂದ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಪಾಂಡ್ಯ ಶೂನ್ಯಕ್ಕೆ ಔಟಾದರೆ, ಪಂತ್ ಸುಲಭ ಕ್ಯಾಚ್ ನೀಡಿ ಹೊರನಡೆದರು.
ವಿಶೇಷ ಎಂದರೆ ದಿನೇಶ್ ಕಾರ್ತಿಕ್ ಬದಲಿಗೆ ಈ ಪಂದ್ಯದಲ್ಲಿ ರಿಷಭ್ ಪಂತ್ಗೆ ಅವಕಾಶ ನೀಡಲಾಗಿತ್ತು. ತಂಡದಲ್ಲಿ ಏಕೈಕ ಎಡಗೈ ದಾಂಡಿಗನಾಗಿ ಸ್ಥಾನ ಪಡೆದ ಪಂತ್ 12 ಎಸೆತಗಳಲ್ಲಿ 14 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇತ್ತ ಮಹತ್ವದ ಪಂದ್ಯದಲ್ಲಿ ಪಂತ್ ಸುಲಭವಾಗಿ ಔಟಾಗುತ್ತಿದ್ದಂತೆ ಅತ್ತ ನಾಯಕ ರೋಹಿತ್ ಶರ್ಮಾ ಕೋಪಗೊಂಡಿದ್ದರು.
ಅಷ್ಟೇ ಅಲ್ಲದೆ ರಿಷಭ್ ಪಂತ್ ಡ್ರೆಸ್ಸಿಂಗ್ ರೂಮ್ಗೆ ಬರುತ್ತಿದ್ದಂತೆ ರೋಹಿತ್ ಶರ್ಮಾ ಫುಲ್ ಕ್ಲಾಸ್ ತೆಗೆದುಕೊಂಡರು. ಶಾಟ್ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾ ಹಿಟ್ಮ್ಯಾನ್ ಪಂತ್ ಅನ್ನು ತರಾಟೆಗೆ ತೆಗೆದುಕೊಂಡರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ರಿಷಭ್ ಪಂತ್ ಅವರ ಆಯ್ಕೆಯೇ ತಪ್ಪಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
All The Best @RishabhPant17 ??#RohitSharma #RishabPant #INDvsPAK pic.twitter.com/LwDu5sqInF
— ????? (@Chiku2324) September 4, 2022
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಈ ಕಠಿಣ ಟಾರ್ಗೆಟ್ ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಬಾರಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಅದರಂತೆ ಕೊನೆಯ ಓವರ್ನಲ್ಲಿ 7 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು 1 ಎಸೆತ ಬಾಕಿಯಿರುವಾಗ 182 ರನ್ಗಳ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು.




