AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಪಂದ್ಯ ಮುಗಿದ ಬಳಿಕ ಬ್ಯಾಟರ್​ಗಳಿಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ: ಏನಂದ್ರು ನೋಡಿ

India vs Bangladesh 1st ODI: ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಮೊತ್ತ 200ರ ಗಡಿ ದಾಟಲಿಲ್ಲ. ಇದರಿಂದ ಕೋಪಗೊಂಡ ನಾಯಕ ರೋಹಿತ್ ಶರ್ಮಾ ಪಂದ್ಯ ಮುಗಿದ ಬಳಿಕ ಸೋಲಿಗೆ ಬ್ಯಾಟರ್​ಗಳೇ ಕಾರಣ ಎಂದಿದ್ದಾರೆ.

Rohit Sharma: ಪಂದ್ಯ ಮುಗಿದ ಬಳಿಕ ಬ್ಯಾಟರ್​ಗಳಿಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ: ಏನಂದ್ರು ನೋಡಿ
Rohit Sharma Post Match IND vs BAN
TV9 Web
| Edited By: |

Updated on: Dec 05, 2022 | 8:11 AM

Share

ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ (India vs Bangladesh) ಪ್ರವಾಸವನ್ನು ಅತ್ಯಂತ ಕೆಟ್ಟದಾಗಿ ಆರಂಭಿಸಿದೆ. ಭಾನುವಾರ ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಳಪೆ ಆಟವಾಡಿದ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದ್ದು ಕೇವಲ 186 ರನ್​ಗಳಿಗೆ ಆಲೌಟ್ ಆಯಿತು. ಬೌಲಿಂಗ್​ನಲ್ಲಿ ರೋಹಿತ್ ಪಡೆ ಹೊರಾಟ ನಡೆಸಿದರೂ ಪೀಲ್ಡಿಂಗ್​ನಲ್ಲಿ ಮಾಡಿದ ಎಡವಟ್ಟಿನಿಂದ ಗೆಲುವಿನ ಆಸೆ ನುಚ್ಚುನೂರಾಯಿತು. ಬಾಂಗ್ಲಾದೇಶ 1 ವಿಕೆಟ್​ಗಳ ರೋಚಕ ಜಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಭಾರತ ಮಾನ ಉಳಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಟೀಮ್ ಇಂಡಿಯಾದಲ್ಲಿ (Team India) ವಿಶ್ವಶ್ರೇಷ್ಠ ಬ್ಯಾಟರ್​ಗಳಿದ್ದರೂ ತಂಡದ ಮೊತ್ತ 200ರ ಗಡಿ ದಾಟಲಿಲ್ಲ. ಇದರಿಂದ ಕೋಪಗೊಂಡ ನಾಯಕ ರೋಹಿತ್ ಶರ್ಮಾ (Rohit Sharma) ಪಂದ್ಯ ಮುಗಿದ ಬಳಿಕ ಸೋಲಿಗೆ ಬ್ಯಾಟರ್​ಗಳೇ ಕಾರಣ ಎಂದಿದ್ದಾರೆ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ರೊಹಿತ್ ಶರ್ಮಾ, ”ಈ ಪಂದ್ಯ ತುಂಬಾ ರೋಚಕತೆಯಿಂದ ಕೂಡಿತ್ತು. ನಾವು ಒಂದು ಸಂದರ್ಭದಲ್ಲಿ ಅತ್ಯುತ್ತಮ ಕಮ್​ಬ್ಯಾಕ್ ಮಾಡಿದೆವು. ಆದರೆ, ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. 184 ರನ್ ಗಳಿಸಿದ್ದು ಎಲ್ಲಿಗೂ ಸಾಲದು. ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಆದರೆ, ಬೌಲರ್​ಗಳಿಂದ ಉತ್ತಮ ಪ್ರದರ್ಶನ ಮೂಡಿಬಂತು. ಕೊನೆಯಲ್ಲಿ ಮಾತ್ರ ಯಶಸ್ಸು ಅವರು ಸಾಧಿಸಿದರು. ಆರಂಭದಿಂದ ಉತ್ತಮ ಬೌಲಿಂಗ್ ಮಾಡಿದ್ದನ್ನು ನೋಡಿದಾಗ ಕೊನೆಯಲ್ಲಿ ಕೂಡ ಅದೇ ಲಯದಲ್ಲಿ ಬೌಲಿಂಗ್ ಮಾಡಬೇಕು ಎಂದಿರುತ್ತದೆ. ಆದರೆ ನಮ್ಮ ಬೌಲಿಂಗ್ 40 ಓವರ್‌ಗಳವರೆಗೆ ಮಾತ್ರ ಚೆನ್ನಾಗಿತ್ತು. ನಂತರ ಹಿಂದೆ ಮಾಡಿದಂತೆ ಚೆಂಡು ಎಸೆಯಲಿಲ್ಲ,” ಎಂದು ಹೇಳಿದ್ದಾರೆ.

KL Rahul: ಮೊದಲು ಹೀರೋ, ಆಮೇಲೆ ವಿಲನ್ ಆದ ಕೆಎಲ್ ರಾಹುಲ್

ಇದನ್ನೂ ಓದಿ
Image
KL Rahul: ಕೆಎಲ್ ರಾಹುಲ್ ಮತ್ತೆ ವಿಕೆಟ್ ಕೀಪರ್: ರಿಷಭ್ ಪಂತ್​ಗೆ ಚಿಂತೆ ಶುರು..!
Image
IPL 2023: 10 ತಂಡಗಳು ಮಿನಿ ಹರಾಜಿನಲ್ಲಿ ಯಾರನ್ನು ಖರೀದಿಸಬಹುದು? ಇಲ್ಲಿದೆ ಡಿಟೇಲ್ಸ್
Image
ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಆಟಗಾರರನ್ನು ಕಣಕ್ಕಿಳಿಸಿದ ತಂಡ ಯಾವುದು ಗೊತ್ತಾ?
Image
VIDEO: ಸುಲಭ ಕ್ಯಾಚ್ ಹಿಡಿಯದ ಸುಂದರ್: ಅಶ್ಲೀಲವಾಗಿ ಬೈದ ರೋಹಿತ್ ಶರ್ಮಾ

”ನಮ್ಮ ಬತ್ತಳಿಕೆಯಿಂದ ರನ್ ಬರಲಿಲ್ಲ. ಇನ್ನೂ 25 ರಿಂದ 30 ರನ್ ಹೊಡೆದಿದ್ದರೆ ನಮಗೆ ಸಹಾಯ ಆಗುತ್ತಿತ್ತು. 25 ಓವರ್ ಆಗುವ ಹೊತ್ತಿಗೆ ನಾವು 240-250 ರನ್ ಗಳಿಸುವ ಬಗ್ಗೆ ಎದುರು ನೋಡುತ್ತಿದ್ದೆವು. ಸತತವಾಗಿ ವಿಕೆಟ್ ಕಳೆದುಕೊಂಡು ಸಾಗಿದಾಗ ಇದು ಸಾಧ್ಯವಿಲ್ಲ. ಇಂಥಹ ವಿಕೆಟ್​ನಲ್ಲಿ ಯಾವರೀತಿ ಬ್ಯಾಟಿಂಗ್ ಮಾಡಬೇಕೆಂದು ಕಲಿಯಬೇಕಿದೆ. ಈ ವಿಕೆಟ್ ಬಗ್ಗೆ ನಮಗೆ ತಿಳಿದಿದ್ದರೂ ಈರೀತಿ ಆಡಿದ್ದಕ್ಕೆ ಕ್ಷಮೆಯಿಲ್ಲ. ಮುಂದಿನ ಅಭ್ಯಾಸದಲ್ಲಿ ಅವರು ಹೇಗೆ ಸುಧಾರಿಸಿಕೊಳ್ಳುತ್ತಾ ನನಗೆ ತಿಳಿದಿಲ್ಲ. ಈ ಸೋಲಿನಿಂದ ನಮ್ಮವರು ಪಾಠ ಕಲಿಯುತ್ತಾರೆ ಹಾಗೂ ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೆ ಎಂಬ ನಂಬಿಕೆಯಿದೆ. ಕೆಲವೊಂದು ಬದಲಾವಣೆ ಅನಿವಾರ್ಯವಾಗಿದೆ. ಹೀಗಿದ್ದರೂ ಇಲ್ಲಿನ ಪರಿಸ್ಥಿತಿ ಬಗ್ಗೆ ನಾವು ಚೆನ್ನಾಗಿ ಅರಿತುಕೊಂಡಿದ್ದೇವೆ,” ಎಂಬುದು ರೋಹಿತ್ ಮಾತು.

ಗೆದ್ದ ತಂಡದ ನಾಯಕ ಲಿಟನ್ ದಾಸ್ ಮಾತನಾಡಿ, ”ತುಂಬಾ ಸಂತಸವಾಗಿದೆ. ಡ್ರೆಸ್ಸಿಂಗ್ ರೂಮ್​ನಲ್ಲಿ ತುಂಬಾ ಭಯದಿಂದ ಕೂತಿದ್ದೆ. ಕೊನೆಯ 6-7 ಓವರ್​ಗಳಲ್ಲಿ ಮೆಹ್ದಿ ಹಸನ್ ಇನ್ನಿಂಗ್ಸ್ ಅದ್ಭುತವಾಗಿತ್ತು. ಮೊಹಮ್ಮದ್ ಸಿರಾಜ್​ ಮತ್ತು ಶಾರ್ದೂಲ್ ಠಾಕೂರ್ ಮಧ್ಯಮ ಓವರ್​​ನಲ್ಲಿ ಮಾರಕ ದಾಳಿ ಸಂಘಟಿಸಿ ಪಂದ್ಯವನ್ನ ಅವರ ಕಡೆ ತಿರುಗಿಸಿದರು. ನಾನು ಮತ್ತು ಶಕಿಬ್ ಬ್ಯಾಟಿಂಗ್ ಮಾಡುವಾಗ ಈ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದು ಎಂದು ಮಾತನಾಡಿದ್ದೆವು. ಆದರೆ, ನಾವಿಬ್ಬರೂ ಔಟಾದ ಬಳಿಕ ಅದು ಕಷ್ಟ ಎಂಬುದು ತಿಳಿಯಿತು. ಇದಕ್ಕೆ ಕಾರಣ ಭಾರತೀಯ ಬೌಲರ್​ಗಳ ಅತ್ಯುತ್ತಮ ಪ್ರದರ್ಶನ. ಆದರೆ, ಮೆಹ್ದಿ ಉತ್ತಮ ಆಟವಾಡಿ ತಂಡಕ್ಕೆ ಜಯ ತಂದುಕೊಟ್ಟರು,” ಎಂದು ಹೇಳಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!