ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಐದು ಪಂದ್ಯಗಳ ಸರಣಿಯ 2ನೇ ಪಂದ್ಯವು ಸೋಮವಾರ ಸೇಂಟ್ ಕಿಟ್ಸ್ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ವೆಸ್ಟ್ ಇಂಡೀಸ್ ತಂಡ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ (Team India) ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ರೋಹಿತ್ ಶರ್ಮಾ (Rohit Sharma) ಪಂದ್ಯದ ಮೊದಲ ಎಸೆತದಲ್ಲೇ ಒಬೆಡ್ ಮೆಕಾಯ್ಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಈ ಡಕ್ ಔಟ್ನೊಂದಿಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಅತ್ಯಂತ ಕೆಟ್ಟ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು. ಅಂದರೆ ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಮೊದಲ ಎಸೆತಕ್ಕೆ ಔಟಾದ ಆರಂಭಿಕ ಆಟಗಾರ ಎನ್ನುವ ಹೀನಾಯ ದಾಖಲೆಯೊಂದು ಇದೀಗ ಹಿಟ್ಮ್ಯಾನ್ ಪಾಲಾಗಿದೆ.
ಹಿಟ್ಮ್ಯಾನ್ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ 6 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಈ ಮೂಲಕ ಕೆಟ್ಟ ದಾಖಲೆಯೊಂದನ್ನು ರೋಹಿತ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕೆಎಲ್ ರಾಹುಲ್ ಹೆಸರಿನಲ್ಲಿತ್ತು. ಆದರೀಗ ರಾಹುಲ್ಗಿಂತ ಮತ್ತೆರಡು ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಹಿಟ್ಮ್ಯಾನ್ ಕೆಟ್ಟ ದಾಖಲೆಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಶೂನ್ಯಕ್ಕೆ ಅತೀ ಹೆಚ್ಚು ಬಾರಿ ಔಟಾದ ಆಟಗಾರರು:
ಹಿಟ್ಮ್ಯಾನ್ ವಿಶ್ವ ದಾಖಲೆ:
ಇದಾಗ್ಯೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಹೊಂದಿದ್ದಾರೆ. ಭಾರತ ತಂಡದ ಪರ 130 ಟಿ20 ಪಂದ್ಯಗಳನ್ನು ಆಡಿರುವ ಹಿಟ್ಮ್ಯಾನ್ 122 ಇನ್ನಿಂಗ್ಸ್‌ಗಳಲ್ಲಿ 32.17 ಸರಾಸರಿಯಲ್ಲಿ 3443 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ ನಾಲ್ಕು ಶತಕ ಮತ್ತು 27 ಅರ್ಧ ಶತಕಗಳು ಮೂಡಿಬಂದಿವೆ. ಇನ್ನು ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಎರಡನೇ ಸ್ಥಾನದಲ್ಲಿದ್ದಾರೆ. ಗಪ್ಟಿಲ್ 112 ಇನ್ನಿಂಗ್ಸ್‌ಗಳಲ್ಲಿ 32.37 ಸರಾಸರಿಯಲ್ಲಿ 3399 ರನ್ ಕಲೆಹಾಕಿದ್ದಾರೆ.