IND vs SL: ಡೇ-ನೈಟ್ ಟೆಸ್ಟ್​ಗಾಗಿ ಸಿಲಿಕಾನ್ ಸಿಟಿಗೆ ಬಂದ ಟೀಮ್ ಇಂಡಿಯಾ: ಚಿನ್ನಸ್ವಾಮಿಯಲ್ಲಿ ಅಭ್ಯಾಸ ಶುರು

India vs Sri Lanka Pink Ball Test: ಮಾರ್ಚ್ 12 ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ ಟೆಸ್ಟ್ (Day-Night Test) ಪಂದ್ಯ ಶುರುವಾಗಲಿದ್ದು, ರೋಹಿತ್ ಪಡೆ ಮೊಹಾಲಿಯಿಂದ ನೇರವಾಗಿ ಸಿಲಿಕಾನ್ ಸಿಟಿಗೆ ಬಂದಿಳಿದಿದೆ. ಈ ಬಗ್ಗೆ ಭಾರತೀಯ ಆಟಗಾರರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

IND vs SL: ಡೇ-ನೈಟ್ ಟೆಸ್ಟ್​ಗಾಗಿ ಸಿಲಿಕಾನ್ ಸಿಟಿಗೆ ಬಂದ ಟೀಮ್ ಇಂಡಿಯಾ: ಚಿನ್ನಸ್ವಾಮಿಯಲ್ಲಿ ಅಭ್ಯಾಸ ಶುರು
IND vs SL Pink Ball Test
Follow us
TV9 Web
| Updated By: Vinay Bhat

Updated on:Mar 10, 2022 | 11:00 AM

ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ 222 ರನ್​ಗಳ ಅಮೋಘ ಜಯ ಸಾಧಿಸಿದ ಭಾರತ (India vs Sri Lanka) ವಿಶೇಷ ದಾಖಲೆ ಬರೆಯಿತು. ರೋಹಿತ್ ಶರ್ಮಾ (Rohit Sharma) ಕೂಡ ತಮ್ಮ ಚ್ಚೊಚ್ಚಲ ನಾಯಕತ್ವದ ಟೆಸ್ಟ್​ ಪಂದ್ಯ ಗೆದ್ದು ಬೀಗಿದರು. ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗಲು ಟೀಮ್ ಇಂಡಿಯಾ ಬೆಂಗಳೂರಿಗೆ ತಲುಪಿದೆ. ಮಾರ್ಚ್ 12 ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ ಟೆಸ್ಟ್ (Day-Night Test) ಪಂದ್ಯ ಶುರುವಾಗಲಿದ್ದು, ರೋಹಿತ್ ಪಡೆ ಮೊಹಾಲಿಯಿಂದ ನೇರವಾಗಿ ಸಿಲಿಕಾನ್ ಸಿಟಿಗೆ ಬಂದಿಳಿದಿದೆ. ಈ ಬಗ್ಗೆ ಭಾರತೀಯ ಆಟಗಾರರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಮೊಹಾಲಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಮೂರೇ ದಿನಗಳಲ್ಲಿ ಪಂದ್ಯ ಮುಗಿದಿತ್ತು. ಅದರಿಂದಾಗಿ ಎರಡು ದಿನ ಮೊಹಾಲಿಯಲ್ಲಿಯೇ ಇದ್ದ ತಂಡಗಳು ಪಿಂಕ್ ಬಾಲ್ ಅಭ್ಯಾಸ ಮಾಡಿದ್ದವು. ಇದೀಗ ಬುಧವಾರ ಖಾಸಗಿ ವಿಮಾನದ ಮೂಲಕ ಆಟಗಾರರು ಮತ್ತು ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಗುರುವಾರ ಮತ್ತು ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಆಟಗರರು ಮತ್ತು ಶ್ರೀಲಂಕಾ ಆಟಗರರು ಅಭ್ಯಾಸ ನಡೆಸಲಿದ್ದಾರೆ. ಕಟ್ಟುನಿಟ್ಟಾದ ಬಯೋಬಬಲ್ ನಿಯಮ ಜಾರಿ ಮಾಡಲಾಗಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ. ಕೋವಿಡ್ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಆಯೋಜನೆ ಆಗಿಲ್ಲ. ಇದೀಗ ಹೊನಲು ಬೆಳಕಿನ ಟೆಸ್ಟ್ ನಡೆಸಲು ಕ್ರೀಡಾಂಗಣ ಸಜ್ಜಾಗಿದೆ.

ಟಿಕೇಟ್ ಸೋಲ್ಡ್​ಔಟ್:

ಭಾರತ ಹಾಗೂ ಶ್ರೀಲಂಕಾ ನಡುವಣ ದ್ವಿತೀಯ ಪಿಂಕ್ ಬಾಲ್ ಟೆಸ್ಟ್ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನ ಟಿಕೆಟ್ ಕೌಂಟರ್‌ಗಳಲ್ಲಿ ಜನಸಾಗರ ಕಂಡುಬಂತು. ಕೋವಿಡ್ ಮುನ್ನೆಚ್ಚರಿಕೆಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಸನ ಸಾಮರ್ಥ್ಯವನ್ನು ಶೇ.50ಕ್ಕೆ  ಸೀಮಿತಗೊಳಿಸಿದ್ದರಿಂದ ಕೆಲವು ಅಭಿಮಾನಿಗಳಿಗೆ ಟಿಕೆಟ್ ಸಿಗಲಿಲ್ಲ. ಸುಮಾರು 10,000 ಟಿಕೆಟ್‌ಗಳು ಸಾರ್ವಜನಿಕರಿಗೆ ಲಭ್ಯವಿದ್ದು, ಉಳಿದವುಗಳನ್ನು ಮಾಜಿ ಆಟಗಾರರು, ಕ್ಲಬ್ ಸದಸ್ಯರು ಇತ್ಯಾದಿಗಳಿಗಾಗಿ ಕಾಯ್ದಿರಿಸಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಸುದೀರ್ಘ ಸಮಯದ ನಂತರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ್ಯಕ್ಷನ್‌ಗೆ ಸಾಕ್ಷಿಯಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ.

ಕ್ಲೀನ್​ಸ್ವೀಪ್ ಗುರಿ:

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿ ಸರಣಿಯನ್ನು ವಶಕ್ಕೆ ಪಡೆಯಲು ಎದುರು ನೋಡುತ್ತಿದೆ. ಈಗಾಗಲೇ ಸತತ ಗೆಲುವಿನ ಮೂಲಕ ರೋಹಿತ್ ನಾಯಕತ್ವದಲ್ಲಿ ದಾಖಲೆ ಬರೆದಿರುವ ಭಾರತ ಮಇತಿಹಾಸ ನಿರ್ಮಿಸುತ್ತಾ ಎಂಬುದು ನೋಡಬೇಕಿದೆ. ಇತ್ತ ದಿಮುತ್ ಕರುಣರತ್ನೆ ನೇತೃತ್ವದ ಲಂಕಾ ಪಡೆ ಭಾರತದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತಮ ಪ್ರದರ್ಶನ ನಿಡು ವಿಶ್ವಾಸದಲ್ಲಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಗಳಿಸಲು ದೃಷ್ಟಿನೆಟ್ಟಿದೆ.

ಅಕ್ಷರ್ ಕಮ್​ಬ್ಯಾಕ್:

ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಪ್ರವಾಸಿ ಶ್ರೀಲಂಕಾ ವಿರುದ್ಧ ಶನಿವಾರದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ 2ನೇ ಹಾಗೂ ಅಹರ್ನಿಶಿ ಪಂದ್ಯಕ್ಕೆ ಫಿಟ್ ಆಗಿದ್ದಾರೆ. ಇದರಿಂದಾಗಿ ಮತ್ತೋರ್ವ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. ಇದುವರೆಗೆ ಆಡಿರುವ 5 ಟೆಸ್ಟ್‌ಗಳಲ್ಲಿ 36 ವಿಕೆಟ್ ಕಬಳಿಸಿರುವ ಅಕ್ಷರ್ ಸೇರ್ಪಡೆಯಿಂದ ಭಾರತ ತಂಡದ ಸ್ಪಿನ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ. ಹೊನಲುಬೆಳಕಿನಡಿ ನಡೆಯಲಿರುವ ಬೆಂಗಳೂರು ಟೆಸ್ಟ್ ಪಂದ್ಯವನ್ನು ಪಿಂಕ್ ಎಸ್‌ಜಿ ಚೆಂಡಿನಲ್ಲಿ ಆಡಲಾಗುತ್ತದೆ. ಇದು ಕೂಡ ಅಕ್ಷರ್ ಆಯ್ಕೆ ಸಾಧ್ಯತೆ ಹೆಚ್ಚಿಸಿದೆ. ಕಳೆದ ವರ್ಷ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಅಹರ್ನಿಶಿ ಟೆಸ್ಟ್‌ನಲ್ಲಿ ಅಕ್ಷರ್ 70 ರನ್‌ಗೆ 11 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠರಾಗಿದ್ದರು.

IND vs NZ: ಟಾಸ್ ಗೆದ್ದ ಭಾರತ: ನ್ಯೂಜಿಲೆಂಡ್​ಗೆ ಆರಂಭದಲ್ಲೇ ಶಾಕ್ ನೀಡಿದ ಮಿಥಾಲಿ ಪಡೆ

Published On - 8:39 am, Thu, 10 March 22