IND vs NZ: ಟಾಸ್ ಗೆದ್ದ ಭಾರತ: ನ್ಯೂಜಿಲೆಂಡ್ಗೆ ಆರಂಭದಲ್ಲೇ ಶಾಕ್ ನೀಡಿದ ಮಿಥಾಲಿ ಪಡೆ
Women's World Cup 2022, New Zealand Women vs India Women: ಭಾರತ ಮಹಿಳಾ ತಂಡ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಆಡಿದ ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬೃಹತ್ ಅಂತರದ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಮಿಥಾಲಿ ರಾಜ್ ಪಡೆ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ.
ಹ್ಯಾಮಿಲ್ಟನ್‌ನ ಸೀಡನ್ ಪಾರ್ಕ್ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ 2022ರ (ICC Womens World Cup 2022) ಎಂಟನೇ ಪಂದ್ಯದಲ್ಲಿಂದು ಭಾರತ ಮಹಿಳಾ ತಂಡ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡ (New Zealand Women vs India Women) ಮುಖಾಮುಖಿ ಆಗುತ್ತಿದೆ. ಈಗಾಗಲೇ ಆಡಿದ ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬೃಹತ್ ಅಂತರದ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಮಿಥಾಲಿ ರಾಜ್ (Mithali Raj) ಪಡೆ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ. ಇತ್ತ ಮೊದಲ ಪಂದ್ಯದಲ್ಲಿ ಸೋತು ಎರಡನೇ ಪಂದ್ಯದಲ್ಲಿ ಊಹಿಸಲಾಗದ ರೀತಿಯಲ್ಲಿ ಕಮ್ಬ್ಯಾಕ್ ಮಾಡಿ ಗೆದ್ದ ಕಿವೀಸ್ ಕೂಡ ಬಲಿಷ್ಠವಾಗಿದೆ. ಹೀಗಾಗಿ ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಈಗಾಗಲೇ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಬ್ಯಾಟಿಂಗ್‌ಗೆ ಇಳಿದಿರುವ ನ್ಯೂಜಿಲೆಂಡ್ ತಂಡಕ್ಕೆ ಭಾರತ ಆರಂಭದಲ್ಲೇ ಆಘಾತ ಕೂಡ ನೀಡಿದೆ.
ನ್ಯೂಜಿಲೆಂಡ್ ಪರ ಆರಂಭಿಕರಾಗಿ ಸೂಝಿ ಬೇಟ್ಸ್ ಮತ್ತು ನಾಯಕಿ ಸೋಫಿಯ ಡೆವೈನ್ ಕಣಕ್ಕಿಳಿದರು. ಆದರೆ, ಮೂರನೇ ಓವರ್ನ ಮೊದಲ ಎಸೆತದಲ್ಲಿ ಅನಗತ್ಯ ರನ್ ಕಲೆಹಾಕಲು ಹೋಗಿ ಬೇಟ್ಸ್ ಅವರು ಪೂಜಾ ವಸ್ತ್ರಾಕರ್ರಿಂದ ರನೌಟ್ಗೆ ಬಲಿಯಾಗಬೇಕಾಯಿತು. ಇವರು 10 ಎಸೆತಗಳಲ್ಲಿ 5 ರನ್ ಗಳಿಸಿದರು. ಸದ್ಯ ನಾಯಕಿ ಸೋಫಿಯ ಹಾಗೂ ಅಮೇಲಿಯ ಕೇರ್ ಕ್ರೀಸ್ನಲ್ಲಿದ್ದು ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಇಂದಿನ ಪಂದ್ಯಕ್ಕೆ ಭಾರತ ಮಹಿಳಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಓಪನರ್ ಆದ ಶಫಾಲಿ ವರ್ಮಾ ಬದಲು ಯಸ್ತಿಕಾ ಬಾಟಿಯಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇತ್ತ ಕಿವೀಸ್ ಪಡೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಯಸ್ತಿಕಾ ಬಾಟಿಯಾ, ದೀಪ್ತಿ ಶರ್ಮಾ, ಹರ್ಮನ್‌ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.
ನ್ಯೂಜಿಲೆಂಡ್ ಪ್ಲೇಯಿಂಗ್ XI: ಸೂಫಿಯ ಡೆವೈನ್ (ನಾಯಕಿ), ಸೂಝಿ ಬೇಟ್ಸ್, ಅಮೇಲಿಯ ಕೇರ್, ಆ್ಯಮಿ ಸೆಟ್ಟರ್ವೈಟ್, ಮ್ಯಾಡಿ ಗ್ರೀನ್, ಫ್ರಾನ್ಸಸ್ ಮ್ಯಾಕೆ, ಕ್ಯಾಟಿ ಮಾರ್ಟಿನ್ (ವಿಕೆಟ್ ಕೀಪರ್), ಹೇಲೆ ಜೆನ್ಸನ್, ಲೀ ಟಿಹುಹು, ಜೆಸ್ ಕೇರ್, ಹನ್ನ ರೋವ್.
ಈ ಪಂದ್ಯ ಭಾರತಕ್ಕೆ ಅಗ್ನಿಪರೀಕ್ಷೆಯಾಗಿದೆ. ಯಾಕಂದ್ರೆ ಇಲ್ಲಿ ಗೆದ್ದರೆ ಭಾರತ ದೊಡ್ಡ ಹರ್ಡಲ್ಸ್ ಒಂದನ್ನು ದಾಟಿದಂತಾಗುತ್ತದೆ. ಭಾರತ ವನಿತೆಯರ ತಂಡ ಮತ್ತು ನ್ಯೂಜಿಲೆಂಡ್ ವನಿತೆಯರ ತಂಡ ಇದುವರೆಗೂ ಒಟ್ಟು 53 ಏಕದಿನ ಪಂದ್ಯಗಳಲ್ಲಿ ಸೆಣಸಾಟ ನಡೆಸಿದ್ದು, ನ್ಯೂಜಿಲೆಂಡ್ 32 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಭಾರತ ವನಿತೆಯರು 20 ಪಂದ್ಯಗಳಲ್ಲಿ ಜಯ ಸಾಧಿಸಿದೆ ಮತ್ತು ಇನ್ನುಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇನ್ನು ಭಾರತ ವನಿತೆಯರ ತಂಡ ಮತ್ತು ನ್ಯೂಜಿಲೆಂಡ್ ವನಿತೆಯರ ತಂಡಗಳ ನಡುವಿನ ವಿಶ್ವಕಪ್ ಮುಖಾಮುಖಿಯಲ್ಲಿ ಇದುವರೆಗೂ ಒಟ್ಟು 11 ಪಂದ್ಯಗಳಲ್ಲಿ ಸೆಣಸಾಟ ನಡೆಸಿದ್ದು, ನ್ಯೂಜಿಲೆಂಡ್ 9 ಪಂದ್ಯಗಳಲ್ಲಿ ಗೆದ್ದಿದ್ದು, ಭಾರತ 2 ಪಂದ್ಯಗಳಲ್ಲಿ ಗೆದ್ದಿದೆ.
ಮೊದಲ ಪಂದ್ಯದ ಬಗ್ಗೆ ಗಮನಿಸುವುದಾದರೆ ಭಾರತದ ಬ್ಯಾಟಿಂಗ್ ಗಮನಾರ್ಹ ಮಟ್ಟದಲ್ಲಿದ್ದರೂ ಬೌಲಿಂಗ್ ಕೈಕೊಟ್ಟಿತ್ತು. 270-280ರ ಮೊತ್ತವನ್ನು ಉಳಿಸಿಕೊಳ್ಳಲೂ ಮಿಥಾಲಿ ಬಳಗದಿಂದ ಸಾಧ್ಯವಾಗಿರಲಿಲ್ಲ. ಇದೇ ಸಮಸ್ಯೆ ಪುನರಾವರ್ತನೆಗೊಳ್ಳದಂತೆ ನೋಡಿಕೊಂಡರಷ್ಟೇ ಭಾರತದ ಮೇಲುಗೈ ನಿರೀಕ್ಷಿಸಬಹುದು. ಪಾಕಿಸ್ಥಾನ ವಿರುದ್ಧ ಮಿಥಾಲಿ, ಹರ್ಮನ್‌ಪ್ರೀತ್ ಕೌರ್ ಕೂಡ ಮಿಂಚಿಲ್ಲ ಎಂಬುದನ್ನು ಗಮನಿಸಬೇಕು. ಕಿವೀಸ್ ವಿರುದ್ಧ ಇವರ ಬ್ಯಾಟ್ ಕೂಡ ಮಾತಾಡಬೇಕಿದೆ. ಭಾರತದ ಆಲ್‌ರೌಂಡರ್ ಉತ್ತಮ ಲಯದಲ್ಲಿದ್ದಾರೆ. ಆದರೆ ಬೌಲಿಂಗ್ ಇನ್ನಷ್ಟು ಘಾತಕವಾಗಿ ಪರಿಣಮಿಸಬೇಕಿದೆ. ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡಲಿದೆ ಎಂಬುದೊಂದು ಲೆಕ್ಕಾಚಾರ. ಹೀಗಾಗಿ ಭಾರತ ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದು, ನ್ಯೂಜಿಲೆಂಡ್ ಅನ್ನು ಆದಷ್ಟು ಬೇಗ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬೇಕಿದೆ.
Rahul Chahar Wedding: ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್; ಫೋಟೋ ನೋಡಿ