AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾದಲ್ಲೇ ನಿವೃತ್ತಿ ಘೋಷಿಸಲು ಸಿದ್ಧರಾಗಿದ್ದ ರೋಹಿತ್ ಶರ್ಮಾ

Rohir Sharma: 3 ಪಂದ್ಯಗಳು, 5 ಇನಿಂಗ್ಸ್​ 31 ರನ್​ಗಳು. ಇದು ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಲೆಹಾಕಿದ ಒಟ್ಟು ರನ್​ಗಳು. 6.20 ಸರಾಸರಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ ಸಿಡ್ನಿ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಹೊರಗುಳಿದಿದ್ದರು.

ಆಸ್ಟ್ರೇಲಿಯಾದಲ್ಲೇ ನಿವೃತ್ತಿ ಘೋಷಿಸಲು ಸಿದ್ಧರಾಗಿದ್ದ ರೋಹಿತ್ ಶರ್ಮಾ
Gautam Gambhir Rohit Sharma
ಝಾಹಿರ್ ಯೂಸುಫ್
|

Updated on: Jan 12, 2025 | 1:15 PM

Share

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡುವೆಯೇ ನಿವೃತ್ತಿ ಘೋಷಿಸಲು ಮುಂದಾಗಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ಮೆಲ್ಬೋರ್ನ್​ ಟೆಸ್ಟ್​ನಲ್ಲಿ ಭಾರತ ತಂಡದ ಹೀನಾಯ ಸೋತ ಬೆನ್ನಲ್ಲೇ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ ಆಪ್ತರ ಸಲಹೆ ಮೇರೆಗೆ ಹಿಟ್​ಮ್ಯಾನ್ ದಿಢೀರ್ ತಮ್ಮ ನಿರ್ಧಾರವನ್ನು ಬಲಿಸಿದರು ಎಂದು ವರದಿಯಾಗಿದೆ.

ಗಂಭೀರ್ ಅಸಮಾಧಾನ:

ಟೈಮ್ಸ್​ ಆಫ್ ಇಂಡಿಯಾ ವರದಿ ಪ್ರಕಾರ, ರೋಹಿತ್ ಶರ್ಮಾ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಬಳಿಕ ನಿವೃತ್ತಿ ಘೋಷಿಸಲು ಸಜ್ಜಾಗಿದ್ದರು. ಈ ವಿಷಯ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ ಗೊತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ರೋಹಿತ್ ತಮ್ಮ ನಿರ್ಧಾರವನ್ನು ಬದಲಿಸಿದರು.

ಆದರೆ ರೋಹಿತ್ ಶರ್ಮಾ ಅವರ ಈ ನಿರ್ಧಾರದಿಂದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅಸಮಾಧಾನಗೊಂಡಿದ್ದರು. ನಿವೃತ್ತಿ ನಿರ್ಧಾರವನ್ನು ಪ್ರಸ್ತಾಪಿಸಿದ ಬಳಿಕ ರೋಹಿತ್ ದಿಢೀರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ತೀರ್ಮಾನದಿಂದ ಹಿಂದೆ ಸರಿದಿದ್ದು ಗಂಭೀರ್ ಅವರಿಗೆ ಇಷ್ಟವಾಗಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿನ ಹೀನಾಯ ಸೋಲಿನ ಬಳಿಕ ರೋಹಿತ್ ಶರ್ಮಾ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೆ ಅವರ ‘ಹಿತೈಷಿಗಳು’ ಅವರೊಂದಿಗೆ ಮಾತನಾಡಿ ನಿರ್ಧಾರವನ್ನು ಬದಲಾಯಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಅವರು ನಿವೃತ್ತಿ ಘೋಷಿಸಿಲ್ಲ.

ಈ ವಿಚಾರದಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದಾಗಿ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.  ಹೀಗಾಗಿಯೇ ಹಿಟ್​ಮ್ಯಾನ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಮ್ಯಾಚ್​ನಲ್ಲಿ ಹಿಟ್​ಮ್ಯಾನ್ ಕಣಕ್ಕಿಳಿದಿರಲಿಲ್ಲ.

ರೋಹಿತ್ ಶರ್ಮಾ ಕಳಪೆಯಾಟ:

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಒಂದೆಡೆ ಬ್ಯಾಟಿಂಗ್​ನೊಂದಿಗೆ ಮುಗ್ಗರಿಸಿದರೆ, ಮತ್ತೊಂದೆಡೆ ನಾಯಕತ್ವದಲ್ಲೂ ಚಾಣಾಕ್ಷ ನಡೆ ಪ್ರದರ್ಶಿಸಲು ವಿಫಲರಾದರು.

ಇದನ್ನೂ ಓದಿ: ಭಾರತ vs ಪಾಕಿಸ್ತಾನ್ ಪಂದ್ಯಕ್ಕೆ ಜಸ್​ಪ್ರೀತ್ ಬುಮ್ರಾ ಅಲಭ್ಯ

ಅಲ್ಲದೆ 5 ಇನಿಂಗ್ಸ್​ಗಳಲ್ಲಿ ಕೇವಲ 31 ರನ್ ಬಾರಿಸಿ ಭಾರೀ ಟೀಕೆಗೆ ಗುರಿಯಾಗಿದ್ದರು. ಹೀಗಾಗಿಯೇ ರೋಹಿತ್ ಶರ್ಮಾ ಅವರ ನಿವೃತ್ತಿಯನ್ನು ಎದುರು ನೋಡಲಾಗಿತ್ತು. ಆದರೆ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಚಿಟ್​ ಚಾಟ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ ನಾನು ಸದ್ಯಕ್ಕೆ ನಿವೃತ್ತಿ ನೀಡುತ್ತಿಲ್ಲ ಎಂದು ಘೋಷಿಸಿದ್ದಾರೆ.