IPL 2023 RR vs CSK Highlights: ರಾಜಸ್ಥಾನ್ ಬೊಂಬಾಟ್ ಆಟ; ಚೆನ್ನೈಗೆ 32 ರನ್ ಸೋಲು
Rajasthan Royals vs Chennai Super Kings IPL 2023 Highlights in Kannada: ಅಂತಿಮವಾಗಿ ಚೆನ್ನೈ ತಂಡವನ್ನು 32 ರನ್ಗಳಿಂದ ಮಣಿಸಿದ ರಾಜಸ್ಥಾನ್ ಟೂರ್ನಿಯಲ್ಲಿ 6ನೇ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಐಪಿಎಲ್ 37ನೇ ಪಂದ್ಯದಲ್ಲಿಂದು ಮುಖಾಮುಖಿಯಾಗಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಒಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾದವು. ಅಂತಿಮವಾಗಿ ಚೆನ್ನೈ ತಂಡವನ್ನು 32 ರನ್ಗಳಿಂದ ಮಣಿಸಿದ ರಾಜಸ್ಥಾನ್ ಟೂರ್ನಿಯಲ್ಲಿ 6ನೇ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಆರ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸಿಎಸ್ ಕೆ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ 32 ರನ್ ಗಳ ಜಯ ಸಾಧಿಸಿತು.
LIVE NEWS & UPDATES
-
ಚೆನ್ನೈಗೆ 32 ರನ್ ಸೋಲು
ಕೊನೆಯ ಓವರ್‌ನಲ್ಲಿ ಕೇವಲ 4 ರನ್ ಕಲೆಹಾಕಿದ ಚೆನ್ನೈ ಕೊನೆಯ ಎಸೆತದಲ್ಲಿ ವಿಕೆಟ್ ಕೂಡ ಕಳೆದುಕೊಂಡಿತು. ಇದರೊಂದಿಗೆ 32 ರನ್ಗಳಿಂದ ರಾಜಸ್ಥಾನ್ ಎದುರು ಶರಣಾಯಿತು.
-
ದುಬೆ ಅರ್ಧಶತಕ
19ನೇ ಐದನೇ ಎಸೆತದಲ್ಲಿ ಸಿಂಗಲ್ ಬಾರಿಸಿದ ದುಬೆ ತಮ್ಮ ಅರ್ಧಶತಕ ಪೂರೈಸಿದರು. ಹಾಗೆಯೇ ಕೊನೆಯ ಎಸೆತವನ್ನು ಜಡೇಜಾ ಬೌಂಡರಿಗಟ್ಟಿದರು.
-
ಚೆನ್ನೈ 150 ರನ್ ಪೂರ್ಣ
18ನೇ ಓವರ್ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಜಡೇಜಾ, ಚೆನ್ನೈ ಸ್ಕೋರ್ ಅನ್ನು 150 ರ ಗಡಿ ದಾಟಿಸಿದರು.
ದುಬೆ ಅಬ್ಬರ
ಹೋಲ್ಡರ್ ಬೌಲ್ ಮಾಡಿದ 17ನೇ ಓವರ್‌ನಲ್ಲಿ ದುಬೆ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.
ಝಂಪಾಗೆ 3 ವಿಕೆಟ್
15ನೇ ಓವರ್ನ 5ನೇ ಎಸೆತದಲ್ಲಿ ಝಂಪಾ, ಅಲಿ ವಿಕೆಟ್ ಉರುಳಿಸಿದರು. ಇದರೊಂದಿಗೆ ಚೆನ್ನೈ ತಂಡದ 5ನೇ ವಿಕೆಟ್ ಉರುಳಿದೆ
ಅರ್ಧಶತಕದ ಜೊತೆಯಾಟ
ಝಂಪಾ ಬೌಲ್ ಮಾಡಿದ 15ನೇ ಓವರ್ನ ಮೊದಲ ಎಸೆತವನ್ನು ದುಬೆ ಸಿಕ್ಸರ್ಗಟ್ಟಿದರೆ, 4ನೇ ಎಸೆತವನ್ನು ಬೌಂಡರಿ ಬಾರಿಸಿದರು. ಇದರೊಂದಿಗೆ ಈ ಇಬ್ಬರ ನಡುವೆ ಅರ್ಧಶತಕದ ಜೊತೆಯಾಟ ಕೂಡ ಪೂರ್ಣಗೊಂಡಿದೆ.
ಚೆನ್ನೈ ಶತಕ ಪೂರ್ಣ
14ನೇ ಓವರ್ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ದುಬೆ ಚೆನ್ನೈ ಸ್ಕೋರ್ ಅನ್ನು 100ರ ಗಡಿ ದಾಟಿಸಿದರು. ಹಾಗೆಯೇ 2ನೇ ಎಸೆತದಲ್ಲೂ ಮತ್ತೊಂದು ಸಿಕ್ಸರ್ ಬಂತು.
ಮತ್ತೊಂದು ಸಿಕ್ಸರ್
13ನೇ ಓವರ್ನ 5ನೇ ಎಸೆತವನ್ನು ಅಲಿ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ ಗಟ್ಟಿದರು. ಹಾಗೆಯೇ ಕೊನೆಯ ಎಸೆತದಲ್ಲಿ ಬೌಂಡರಿ ಕೂಡ ಬಂತು.
ಅಲಿ ಸಿಕ್ಸರ್
ಹೋಲ್ಡರ್ ಬೌಲ್ ಮಾಡಿದ 12ನೇ ಓವರ್ನ 4ನೇ ಎಸೆತದಲ್ಲಿ ಅಲಿ ಲಾಂಗ್ ಆಫ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು.
ರಹಾನೆ- ರಾಯುಡ್ ಔಟ್
ಅಶ್ವಿನ್ ಬೌಲ್ ಮಾಡಿದ 11ನೇ ಓವರ್ನ 2ನೇ ಎಸೆತದಲ್ಲಿ ರಹಾನೆ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾದರೆ, ಆ ಬಳಿಕ ಬಂ ರಾಯುಡು ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಝಂಫಾಗೆ 2ನೇ ವಿಕೆಟ್
6ನೇ ಓವರ್ ಕೊನೆಯ ಎಸೆತದಲ್ಲಿ ಕಾನ್ವೆ ವಿಕೆಟ್ ಉರುಳಿಸಿದ್ದ ಝಂಪಾ, 10ನೇ ಓವರ್ನ 2ನೇ ಎಸೆತದಲ್ಲಿ ರುತುರಾಜ್ರನ್ನು ಔಟ್ ಮಾಡಿದರು. 29 ಎಸತದಲ್ಲಿ 47 ರನ್ ಬಾರಿಸಿದ್ದ ರುತುರಾಜ್ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾದರು.
ಚೆನ್ನೈ ಅರ್ಧಶತಕ
ಚಹಲ್ ಬೌಲ್ ಮಾಡಿದ 7ನೇ ಓವರ್ನ ಮೊದಲ ಎಸೆತದಲ್ಲೇ ಬೌಂಡರಿ ಹೊಡೆದ ಗಾಯಕ್ವಾಡ್ ಆ ಬಳಿಕ ಓವರ್ನ ಕೊನೆಯ ಎಸೆತದಲ್ಲಿ ಸಿಂಗಲ್ ಕದ್ದು ಚೆನ್ನೈ ಸ್ಕೋರ್ ಅನ್ನು 50ರ ಗಡಿ ದಾಟಿಸಿದರು.
ಚೆನ್ನೈನ ಮೊದಲ ವಿಕೆಟ್ ಪತನ
ಪವರ್ ಪ್ಲೇನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಕಾನ್ವೇ ಮಿಡ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು. ಝಂಪಾ ಈ ವಿಕೆಟ್ ಪಡೆದರು.
5 ಓವರ್ ಅಂತ್ಯ
5ನೇ ಓವರ್‌ನಲ್ಲಿ ಗಾಯಕ್ವಾಡ್ 1 ಬೌಂಡರಿ ಬಾರಿಸಿದರು. 5 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 35/0
ಗಾಯಕ್ವಾಡ್ ಸಿಕ್ಸರ್
ಗಾಯಕ್ವಾಡ್ 4ನೇ ಓವರ್‌ನಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು. ಚೆನ್ನೈ ಪರ ಗಾಯಕ್ವಾಡ್ 13 ರನ್ ಹಾಗೂ ಕಾನ್ವೆ 6 ರನ್ ಗಳಿಸಿ ಆಡುತ್ತಿದ್ದಾರೆ. 4 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 25/0
2 ಕ್ಯಾಚ್ ಡ್ರಾಪ್
2ನೇ ಓವರ್‌ನಲ್ಲಿ ರಾಜಸ್ಥಾನ ತಂಡ 2 ಕ್ಯಾಚ್ ಹಿಡಿಯುವ ಅವಕಾಶ ಕಳೆದುಕೊಂಡಿತು. ಚೆನ್ನೈ ಪರ ಗಾಯಕ್ವಾಡ್ 7 ರನ್ ಹಾಗೂ ಕಾನ್ವೆ 5 ರನ್ ಗಳಿಸಿ ಆಡುತ್ತಿದ್ದಾರೆ. 2 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 12/0
ಚೆನ್ನೈ ಇನ್ನಿಂಗ್ಸ್ ಆರಂಭ
ಚೆನ್ನೈ ಇನ್ನಿಂಗ್ಸ್ ಆರಂಭವಾಗಿದೆ. ಚೆನ್ನೈ ಪರ ಡೆವೊನ್ ಕಾನ್ವೆ ಮತ್ತು ರಿತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ರಾಜಸ್ಥಾನ ಪರ ಸಂದೀಪ್ ಶರ್ಮಾ ಮೊದಲ ಓವರ್ ಎಸೆಯುತ್ತಿದ್ದಾರೆ. ಅಂತಿಮ ಎಸೆತದಲ್ಲಿ ಬೌಂಡರಿ ಬಂತು.
20ನೇ ಓವರ್‌ನಲ್ಲಿ 20 ರನ್
ಪತಿರಾನ ಬೌಲ್ ಮಾಡಿದ 20ನೇ ಓವರ್‌ನಲ್ಲಿ 20 ರನ್ ಬಂದವು. ಅಂತಿಮವಾಗಿ ರಾಜಸ್ಥಾನ್ ತಂಡ 5 ವಿಕೆಟ್ ಕಳೆದುಕೊಂಡು 201 ರನ್ ಕೆಲಹಾಕಿದೆ.
ದೇಶಪಾಂಡೆ ದುಬಾರಿ
19ನೇ ಓವರ್‌ನಲ್ಲಿ ದೇಶಪಾಂಡೆ ಕೊಂಚ ದುಬಾರಿಯಾದರು. ಈ ಓವರ್ನ ಮೊದಲ ಎಸೆತದಲ್ಲಿ ಪಡಿಕಲ್ ಬೌಂಡರಿ ಹೊಡೆದರೆ, ಆ ಬಳಿಕ ಧೃವ್ ಬೌಂಡರಿ ಹಾಗೂ ಸಿಕ್ಸರ್ ಹೊಡೆದರು.
18ನೇ ಓವರ್‌ನಲ್ಲಿ 3 ಬೌಂಡರಿ
ದೇಶಪಾಂಡೆ ಬೌಲ್ ಮಾಡಿದ 18ನೇ ಓವರ್ನ 2 ಮತ್ತು 3ನೇ ಎಸೆತವನ್ನು ಬೌಂಡರಿಗಟ್ಟಿದ ಪಡಿಕಲ್ ಆ ಬಳಿಕ ಕೊನೆಯ ಎಸೆತದಲ್ಲೂ ಬೌಂಡರಿ ಹೊಡೆದರು.
ಪಡಿಕಲ್ ಬೌಂಡರಿ
ತೀಕ್ಷಣ ಬೌಲ್ ಮಾಡಿದ 17ನೇ ಓವರ್‌ನಲ್ಲಿ ಬೌಂಡರಿ ಹೊಡೆದ ಪಡಿಕಲ್ ರಾಜಸ್ಥಾನ್ ಸ್ಕೋರ್ ಅನ್ನು 150ರ ಗಡಿ ದಾಟಿಸಿದರು.
ಹೆಟ್ಮೆಯರ್ ಔಟ್
ರಾಜಸ್ಥಾನದ ಸ್ಫೋಟಕ ಬ್ಯಾಟ್ಸ್‌ಮನ್ ಹೆಟ್ಮೆಯರ್, ತಿಕಷ್ಣ ಅವರ ಓವರ್‌ನಲ್ಲಿ 8 ರನ್ ಗಳಿಸಿ ಔಟಾದರು.
16 ಓವರ್ ಮುಕ್ತಾಯ
ರಾಜಸ್ಥಾನ ಪರ ಹೆಟ್ಮೆಯರ್ 8 ಹಾಗೂ ಜುರೆಲ್ 8 ರನ್‌ಗಳಿಸಿ ಆಡುತ್ತಿದ್ದಾರೆ. 16 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 146/3
ಜೈಸ್ವಾಲ್ ಔಟ್
ದೇಶಪಾಂಡೆ ಅವರ ಓವರ್‌ನಲ್ಲಿ ರಾಜಸ್ಥಾನದ ಎರಡನೇ ವಿಕೆಟ್ ಪತನವಾಯಿತು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಜೈಸ್ವಾಲ್ 77 ರನ್ ಗಳಿಸಿ ಔಟಾದರು.14 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 132/3
ಎರಡನೇ ವಿಕೆಟ್ ಪತನ
ರಾಜಸ್ಥಾನ ಪರ 200ನೇ ಪಂದ್ಯವನ್ನಾಡುತ್ತಿರುವ ಸಂಜು ಸ್ಯಾಮ್ಸನ್ ದೇಶಪಾಂಡೆ ಎಸೆತದಲ್ಲಿ ಕ್ಯಾಚ್ ಔಟ್ ಆದರು. ಸಂಜು ಸ್ಯಾಮ್ಸನ್ 17 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು.
13ನೇ ಓವರ್‌ನಲ್ಲಿ 2 ಬೌಂಡರಿ
ಜಡೇಜಾ ಬೌಲ್ ಮಾಡಿದ 12ನೇ ಓವರ್‌ನಲ್ಲಿ 2 ಬೌಂಡರಿಗಳು ಬಂದವು. ರಾಜಸ್ಥಾನ ಪರ ಸಂಜು ಸ್ಯಾಮ್ಸನ್ 16 ರನ್ ಹಾಗೂ ಜೈಸ್ವಾಲ್ 73 ರನ್ ಗಳಿಸಿ ಆಡುತ್ತಿದ್ದಾರೆ. 13 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 125/1
12 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 113/1
ರಾಜಸ್ಥಾನ ಪರ ಸಂಜು ಸ್ಯಾಮ್ಸನ್ 12 ಹಾಗೂ ಜೈಸ್ವಾಲ್ 66 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಜಡೇಜಾ ಮತ್ತು ಕಾನ್ವೆ ಅವರಿಂದ ಉತ್ತಮ ಫೀಲ್ಡಿಂಗ್ ಕಂಡಿತು.
ರಾಜಸ್ಥಾನ್ ಶತಕ ಪೂರ್ಣ
10ನೇ ಓವರ್ನ 5ನೇ ಎಸೆತದಲ್ಲಿ ಸಿಂಗಲ್ ಕದ್ದ ಸಂಜು, ರಾಜಸ್ಥಾನ್ ತಂಡವನ್ನು 100ರ ಗಡಿ ದಾಟಿಸಿದರು.
10 ಓವರ್ ಅಂತ್ಯ
ಮೊಯಿನ್ ಅಲಿ ಬೌಲ್ ಮಾಡಿದ 10ನೇ ಓವರ್‌ನಲ್ಲಿ ಜೈಸ್ವಾಲ್ ಎಕ್ಸ್ಟ್ರಾ ಕವರ್ನಲ್ಲಿ ಸಿಕ್ಸರ್ ಬಾರಿಸಿದರು.
ಬಟ್ಲರ್ ಔಟ್
ಜಡೇಜಾ ಬೌಲ್ ಮಾಡಿದ 9ನೇ ಓವರ್‌ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಬಟ್ಲರ್ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾದರು.
ಜೈಸ್ವಾಲ್ ಅರ್ಧಶತಕ
ಯಶಸ್ವಿ ಜೈಸ್ವಾಲ್ ತಮ್ಮ ಐಪಿಎಲ್ ವೃತ್ತಿಜೀವನದ 18ನೇ ಅರ್ಧಶತಕ ಬಾರಿಸಿದ್ದಾರೆ. ಅವರು ಇಂದು 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 7 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 75/0. ಈ ಓವರ್‌ನಲ್ಲಿ ಸಿಕ್ಸರ್ ಕೂಡ ಬಂದಿತು.
ಜೈಸ್ವಾಲ್ ಅರ್ಧಶತಕ
ಯಶಸ್ವಿ ಜೈಸ್ವಾಲ್ ತಮ್ಮ ಐಪಿಎಲ್ ವೃತ್ತಿಜೀವನದ 18ನೇ ಅರ್ಧಶತಕ ಬಾರಿಸಿದ್ದಾರೆ. ಅವರು ಇಂದು 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 7 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 75/0. ಈ ಓವರ್‌ನಲ್ಲಿ ಸಿಕ್ಸರ್ ಕೂಡ ಬಂದಿತು.
ಜಡೇಜಾಗೆ ಸಿಕ್ಸರ್
7ನೇ ಓವರ್ ಬೌಲ್ ಮಾಡಿದ ಜಡೇಜಾ ಅವರ 4ನೇ ಎಸೆತವನ್ನು ಜೈಸ್ವಾಲ್ ಡೀಪ್ ಪಾಯಿಂಟ್ನಲ್ಲಿ ಸಿಕ್ಸರ್ಗಟ್ಟಿದರು.
ಪವರ್ ಪ್ಲೇ ಅಂತ್ಯ
ಪವರ್ ಪ್ಲೇಯ ಕೊನೆಯ ಓವರ್ನಲ್ಲೂ 2 ಬೌಂಡರಿ ಬಂದವು. ಮೊದಲ ಬೌಂಡರಿ ಓವರ್ ಮಿಡ್ ಆಫ್ನಿಂದ ಬಂದರೆ, 2ನೇ ಬೌಂಡರಿ ಬೌಲರ್ ತಲೆಯ ಮೇಲಿಂದ ಬಂತು.
5ನೇ ಓವರ್ ಅಂತ್ಯ
ದೇಶಪಾಂಡೆ ಬೌಲ್ ಮಾಡಿದ 5ನೇ ಓವರ್ನ 2ನೇ ಎಸೆತದಲ್ಲಿ ಜೈಸ್ವಾಲ್ ಭರ್ಜರಿ ಸಿಕ್ಸರ್ ಹೊಡೆದರು. ಇದರೊಂದಿಗೆ ರಾಜಸ್ಥಾನ್ ಅರ್ಧಶತಕ ಪೂರೈಸಿತು.
ಯಶಸ್ವಿ ಸಿಕ್ಸ್
ಆಕಾಶ್ ಸಿಂಗ್ ಬೌಲ್ ಮಾಡಿದ 3ನೇ ಓವರ್‌ನಲ್ಲಿ ಜೈಸ್ವಾಲ್ 3 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದರು.
ಬಟ್ಲರ್ ಬೌಂಡರಿ
ದೇಶಪಾಂಡೆ ಬೌಲ್ ಮಾಡಿದ 2ನೇ ಓವರ್‌ನಲ್ಲಿ ಬಟ್ಲರ್ 2ಬೌಂಡರಿ ಹೊಡೆದರು. ಮೊದಲ ಬೌಂಡರಿ ಡೀಪ್ ಕವರ್ ಕಡೆ ಬಂದರೆ, 2ನೇ ಬೌಂಡರಿ ಬ್ಯಾಕ್ವರ್ಡ್ ಪಾಯಿಂಟ್ನಿಂದ ಬಂತು.
ಜೈಸ್ವಾಲ್ ಬೌಂಡರಿ
ರಾಜಸ್ಥಾನ್ ಬ್ಯಾಟಿಂಗ್ ಆರಂಭಿಸಿದ್ದು, ಆಕಾಶ್ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ ಜೈಸ್ವಾಲ್ 3 ಬೌಂಡರಿ ಹೊಡೆದರು.
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಮತಿಶಾ ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಆಕಾಶ್ ಸಿಂಗ್
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಟಾಸ್ ಗೆದ್ದ ರಾಜಸ್ಥಾನ್
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Apr 27,2023 7:01 PM