Virat Kohli: ದ್ರಾವಿಡ್ ಊರುಗೋಲಿನ ಸಹಾಯದಿಂದ ಮೈದಾನಕ್ಕೆ ಬಂದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ

Rahul Dravid with crutches: ಭಾನುವಾರ ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆರ್​ಆರ್ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದ ನಂತರ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ನಡುವಣ ವಿಡಿಯೋ ಒಂದು ಸಾಕಷ್ಟು ವೈರಲ್ ಆಗುತ್ತಿದೆ.

Virat Kohli: ದ್ರಾವಿಡ್ ಊರುಗೋಲಿನ ಸಹಾಯದಿಂದ ಮೈದಾನಕ್ಕೆ ಬಂದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ
Rahul Dravid And Virat Kohli

Updated on: Apr 14, 2025 | 3:22 PM

ಇಂಡಿಯನ್ ಪ್ರೀಮಿಯರ್ ಲೀಗ್ 2025 (Indian Premier League) ಆರಂಭವಾಗುವ ಮೊದಲು, ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ರಾಹುಲ್ ದ್ರಾವಿಡ್ ಕಾಲಿನ ಮೂಳೆ ಮುರಿತಕ್ಕೆ ತುತ್ತಾದರು. ಆದರೆ ಇದರ ಹೊರತಾಗಿಯೂ, ಅವರು ಈ ಋತುವಿನಲ್ಲಿ ತಮ್ಮ ತಂಡದ ಪರವಾಗಿ ನಿಂತಿದ್ದಾರೆ. ಪ್ರತಿ ಪಂದ್ಯ ನಡೆಯುವ ಸಂದರ್ಭ ದ್ರಾವಿಡ್ ಅವರು ತಂಡದ ಸದಸ್ಯರೊಂದಿಗೆ ವೀಲ್‌ಚೇರ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಆಟಗಾರರೊಂದಿಗೆ ಸಮಯ ಕಳೆಯುತ್ತಾರೆ. ಊರುಗೋಲುಗಳ ಸಹಾಯದಿಂದ ಈ ಬಾರಿ ಅವರು ಎಲ್ಲ ಪಂದ್ಯಗಳಿಗೆ ಹಾಜರಿದ್ದರು.

ಭಾನುವಾರ ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆರ್​ಆರ್​ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದ ನಂತರ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ನಡುವಣ ವಿಡಿಯೋ ಒಂದು ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ
PSLನಲ್ಲಿ ಶತಕ ಸಿಡಿಸಿದ ಆಟಗಾರನಿಗೆ ಹೇರ್ ಡ್ರೈಯರ್ ಗಿಫ್ಟ್
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
ಕರುಣ್ ಹೋರಾಟ ವ್ಯರ್ಥ; ಮುಂಬೈಗೆ 12 ರನ್ ಜಯ

ಅಭಿಮಾನಿಗಳ ಹೃದಯ ಗೆದ್ದ ದ್ರಾವಿಡ್-ಕೊಹ್ಲಿಯ ಈ ವಿಡಿಯೋ:

 

ಸಾಮಾನ್ಯವಾಗಿ ಒಂದು ಪಂದ್ಯ ಮುಗಿದ ಬಳಿಕ ಎರಡೂ ತಂಡಗಳ ಆಟಗಾರರು ಮತ್ತು ತರಬೇತುದಾರರು ಪರಸ್ಪರ ಕೈಕುಲುಕುತ್ತಾರೆ, ಇದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವಿಡಿಯೋದಲ್ಲಿ, ಪಂದ್ಯದ ನಂತರ ರಾಹುಲ್ ದ್ರಾವಿಡ್ ಮೈದಾನಕ್ಕೆ ಬಂದು ಹಸ್ತಲಾಘವ ಮಾಡುತ್ತಿರುವುದು ಕಂಡುಬರುತ್ತದೆ.

ಗಾಯಗೊಂಡಿದ್ದರೂ ಸಹ, ಅವರು ಊರುಗೋಲುಗಳ ಸಹಾಯದಿಂದ ಮೈದಾನವನ್ನು ತಲುಪಿದರು. ಇದು ಕ್ರಿಕೆಟ್ ಪ್ರಿಯರ ಮನ ಮುಟ್ಟಿತು. ಆದರೆ, ದ್ರಾವಿಡ್ ಊರುಗೋಲುಗಳ ಸಹಾಯದಿಂದ ಮೈದಾನಕ್ಕೆ ಬರುವುದನ್ನು ಕಂಡ ವಿರಾಟ್ ಕೊಹ್ಲಿ ತಕ್ಷಣ, ನೇರವಾಗಿ ಅವರ ಬಳಿ ಹೋಗಿ, ಅಲ್ಲೇ ಇರಲು ಸಲಹೆ ನೀಡಿದ್ದಾರೆ. ನೀವು ಇಲ್ಲಿ ತನಕ ಯಾಕೆ ಬಂದಿದ್ದು?, ಅಲ್ಲಿ ತನಕ ನಡೆದುಕೊಂಡು ಹೋಗಬೇಡಿ.. ಇಲ್ಲೇ ನಿಂತುಕೊಳ್ಳಿ ಎಂದು ಕೊಹ್ಲಿ ಹೇಳಿದ್ದಾರೆ. ಆದಾಗ್ಯೂ, ದ್ರಾವಿಡ್ ಆಟಗಾರರೊಂದಿಗೆ ಕೈಕುಲುಕಲು ನಿರ್ಧರಿಸಿದರು. ಅವರ ಅಭಿಮಾನಿಗಳು ಈ ವಿಡಿಯೋವನ್ನು ಇಷ್ಟಪಟ್ಟಿದ್ದು ವಿರಾಟ್ ಗುಣವನ್ನು ಹೊಗಳುತ್ತಿದ್ದಾರೆ.

IPL 2025: 6,6,6,6,6…! ರಾಯಲ್ಸ್ ವಿರುದ್ಧ ಅಬ್ಬರಿಸಿದ ಫಿಲ್ ಸಾಲ್ಟ್; ವಿಡಿಯೋ ನೋಡಿ

ಪಂದ್ಯ ಆರಂಭಕ್ಕೂ ಮುನ್ನ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರ ಮತ್ತೊಂದು ವಿಡಿಯೋ ಕೂಡ ವೈರಲ್ ಆಯಿತು. ಇದು ಎರಡೂ ತಂಡಗಳ ಅಭ್ಯಾಸದ ವಿಡಿಯೋ ಆಗಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಅವರು ರಾಹುಲ್ ದ್ರಾವಿಡ್ ಅವರನ್ನು ವೀಲ್‌ಚೇರ್‌ನಲ್ಲಿ ನೋಡಿದ ನಂತರ ಅವರನ್ನು ಭೇಟಿ ಮಾಡಲು ಹೋದರು. ನಂತರ ವಿರಾಟ್ ಮೊಣಕಾಲುಗಳ ಮೇಲೆ ಕುಳಿತು ದ್ರಾವಿಡ್ ಅವರನ್ನು ಅಪ್ಪಿಕೊಂಡರು. ಈ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

ಕ್ರಿಕೆಟ್ ಆಡುವಾಗ ಗಾಯ:

ಐಪಿಎಲ್ 2025 ಕ್ಕೂ ಮೊದಲು ಕ್ರಿಕೆಟ್ ಆಡುವಾಗ ದ್ರಾವಿಡ್ ಗಾಯಗೊಂಡರು. ಬೆಂಗಳೂರಿನಲ್ಲಿ ಜಯನಗರ ಕ್ರಿಕೆಟರ್ಸ್ ವಿರುದ್ಧ ವಿಜಯ್ ಕ್ರಿಕೆಟ್ ಕ್ಲಬ್ ಪರ ಆಡುವಾಗ ಅವರು ಇಂಜುರಿಗೆ ತುತ್ತಾದರು. ಈ ಪಂದ್ಯದಲ್ಲಿ ಅವರು ತಮ್ಮ 16 ವರ್ಷದ ಮಗನ ಜೊತೆ ಆಟವಾಡುತ್ತಿದ್ದರು. ದ್ರಾವಿಡ್ 66 ಎಸೆತಗಳಲ್ಲಿ 43 ರನ್ ಗಳಿಸಿದರು. ಈ ಅವಧಿಯಲ್ಲಿ, ಅವರು ಗಾಯಗೊಂಡಿದ್ದರೂ ಸಹ ಆಟವಾಡುವುದನ್ನು ಮುಂದುವರೆಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ