SA vs ZIM: ಮೊದಲ ಓವರ್​ನಲ್ಲೇ 23 ರನ್! ಆಫ್ರಿಕಾ ಗೆಲುವಿಗೆ ಅಡ್ಡಿಯಾದ ವರುಣ; ನಿಟ್ಟುಸಿರು ಬಿಟ್ಟ ಜಿಂಬಾಬ್ವೆ

T20 World Cup 2022: ಒಂದು ವೇಳೆ ಮತ್ತೆ ಪಂದ್ಯ ಆರಂಭಗೊಂಡಿದ್ದರೆ ಡಿಎಲ್ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸುತ್ತಿತ್ತು. ಆದರೆ ಮಳೆ ನಿಲ್ಲದ ಕಾರಣ ಪಂದ್ಯವನ್ನು ಪಲಿತಾಂಶವಿಲ್ಲದೆ ಕೊನೆಗೊಳಿಸಬೇಕಾಯಿತು. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಂಡವು.

SA vs ZIM: ಮೊದಲ ಓವರ್​ನಲ್ಲೇ 23 ರನ್! ಆಫ್ರಿಕಾ ಗೆಲುವಿಗೆ ಅಡ್ಡಿಯಾದ ವರುಣ; ನಿಟ್ಟುಸಿರು ಬಿಟ್ಟ ಜಿಂಬಾಬ್ವೆ
Follow us
TV9 Web
| Updated By: ಪೃಥ್ವಿಶಂಕರ

Updated on: Oct 24, 2022 | 6:39 PM

ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಟಿ20 ವಿಶ್ವಕಪ್‌ (T20 World Cup 2022) ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಇದರ ನಡುವೆ ಅಪರೂಪದ ಅತಿಥಿಯಾಗಿ ಎಂಟ್ರಿಕೊಡುತ್ತಿರುವ ಮಳೆರಾಯ ಕ್ರಿಕೆಟ್ ರೋಚಕತೆಗೆ ಆಗಾಗ ಫುಲ್​ಸ್ಟಾಪ್ ಇಡುತ್ತಿದ್ದಾನೆ. ಈಗ ವರುಣರಾಯನ ಕಣ್ಣಾಮುಚ್ಚಾಲೆ ಆಟಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ (South Africa and Zimbabwe) ನಡುವಣ ಪಂದ್ಯ ಪಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಪಂದ್ಯದುದ್ದಕ್ಕೂ ಕಾಡಿದ ಮಳೆರಾಯ ಆಫ್ರಿಕಾ ಪಾಲಾಗಬೇಕಿದ್ದ ಗೆಲುವನ್ನು ಕುಸಿದುಕೊಂಡು ಜಿಂಬಾಬ್ವೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾನೆ. ಈ ಮೂಲಕ ಸೋಲಿನ ಅಂಚಿನಲ್ಲಿ ನಿಂತಿದ್ದ ಜಿಂಬಾಬ್ವೆಗೆ ಬಿಗ್ ರಿಲೀಫ್ ಸಿಕ್ಕರೆ, ದಕ್ಷಿಣ ಆಫ್ರಿಕಾ ಪಾಯಿಂಟ್ಸ್ ಹಂಚುವ ಅನಿವಾರ್ಯತೆಗೆ ಸಿಲುಕಿತು.

ಹೋಬರ್ಟ್‌ನಲ್ಲಿ ನಡೆದ ಸೂಪರ್-12 ಗುಂಪು-2 ರ ಈ ಪಂದ್ಯವು ನಿಗದಿತ ಸಮಯದಕ್ಕೆ ಪ್ರಾರಂಭವಾಗಲಿಲ್ಲ. ಹಲವು ಬಾರಿ ಮಳೆ ಸುರಿದ ಕಾರಣ ಪಂದ್ಯ ತಡವಾಗಿ ಆರಂಭವಾಯಿತ್ತಾದರೂ ಪಂದ್ಯವನ್ನು ತಲಾ 9 ಓವರ್​ಗಳಿಗೆ ನಿಗದಿಪಡಿಸಲಾಯಿತು. ಆದಾಗ್ಯೂ, ಮಳೆ ಅಡ್ಡಿಪಡಿಸುವ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆಗೆ ಇದು ಆಘಾತ ನೀಡಿತು.

ಜಿಂಬಾಬ್ವೆ ಬ್ಯಾಟಿಂಗ್ ವೈಫಲ್ಯ

ಅರ್ಹತಾ ಸುತ್ತಿನಲ್ಲಿ ಪ್ರಬಲ ಪ್ರದರ್ಶನ ನೀಡಿ ಸೂಪರ್-12 ತಲುಪಿದ್ದ ಜಿಂಬಾಬ್ವೆ, ದಕ್ಷಿಣ ಆಫ್ರಿಕಾದ ವೇಗಿಗಳ ಮುಂದೆ ಸಂಪೂರ್ಣ ಮಂಕಾಯಿತು. ಮಾರಕ ದಾಳಿ ನಡೆಸಿದ ವೇಯ್ನ್ ಪಾರ್ನೆಲ್ ಮತ್ತು ಲುಂಗಿ ಎನ್‌ಗಿಡಿ ಮೊದಲ 4 ಓವರ್​ನಲ್ಲೇ, ಜಿಂಬಾಬ್ವೆ ತಂಡದ ನಾಯಕ ಕ್ರೇಗ್ ಇರ್ವಿನ್ ಮತ್ತು ಇನ್ ಫಾರ್ಮ್ ಬ್ಯಾಟರ್ ಸಿಕಂದರ್ ರಜಾ ಸೇರಿದಂತೆ 4 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ 4 ವಿಕೆಟ್ ಕಳೆದುಕೊಂಡ ಜಿಂಬಾಬ್ವೆಯ ಸ್ಕೋರ್ ಬೋರ್ಡ್​ನಲ್ಲಿ ಕೇವಲ 19 ರನ್ ಕಾಣುತ್ತಿತ್ತು.

ಇದನ್ನೂ ಓದಿ: Sourav Ganguly: ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಿಂದಲೂ ಹಿಂದೆ ಸರಿದ ಗಂಗೂಲಿ! ಅಧ್ಯಕ್ಷ ಪಟ್ಟ ಯಾರಿಗೆ?

ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ವೆಸ್ಲಿ ಮಾಧವೇರಿ ಜಿಂಬಾಬ್ವೆ ಪರ ಕೊಂಚ ಪ್ರತಿರೋಧ ತೋರಿ, ಕೇವಲ 18 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿ ತಂಡವನ್ನು 9 ಓವರ್‌ಗಳಲ್ಲಿ 79 ರನ್‌ಗಳಿಗೆ ಕೊಂಡೊಯ್ದರು.

ಭರ್ಜರಿ ಓಪನಿಂಗ್ ಪಡೆದ ಆಫ್ರಿಕಾ

ಈ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್, ಪಂದ್ಯ ಮೊದಲ ಬಾರಿಗೆ ನಿಲ್ಲುವ ವೇಳೆಗೆ ಕೇವಲ 18 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್​ಗಳನ್ನು ದೋಚಿದ್ದರು. ಅದರಲ್ಲೂ ಮೊದಲನೇ ಓವರ್​ನಲ್ಲೇ ಪರಾಕ್ರಮ ತೋರಿದ ಡಿ ಕಾಕ್​, ತೆಂಡೈ ಚಟಾರ ಎಸೆದ ಮೊದಲ ಓವರ್​ನ ಮೊದಲ ಐದು ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 23 ರನ್ ಗಳಿಸಿದರು.

ಎರಡನೇ ಓವರ್‌ನಲ್ಲಿ ಮತ್ತೆ 5 ನಿಮಿಷಗಳ ಕಾಲ ಮಳೆ ಅಡ್ಡಿಪಡಿಸಿತು. ಹೀಗಾಗಿ ದಕ್ಷಿಣ ಆಫ್ರಿಕಾದ ಮುಂದೆ 7 ಓವರ್‌ಗಳಲ್ಲಿ 64 ರನ್ ಗಳಿಸುವ ಗುರಿ ಇತ್ತು. ವಾಪಾಸ್ ಬಂದ ಕೂಡಲೇ ಡಿಕಾಕ್ ಕೂಡ ರಿಚರ್ಡ್ ಎನ್‌ಗ್ರಾವ ಮೇಲೆ 4 ಬೌಂಡರಿಗಳನ್ನು ಬಾರಿಸಿದರು.

ಗೆಲುವನ್ನು ಕಸಿದುಕೊಂಡ ಮಳೆ

ಮೂರನೇ ಓವರ್ ಮುಕ್ತಾಯದ ವೇಳೆಗೆ ದಕ್ಷಿಣ ಆಫ್ರಿಕಾ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿತ್ತು. ಆದರೆ ನಂತರ ಮಳೆ ಸುರಿಯಲಾರಂಭಿಸಿತು. ಹೀಗಾಗಿ 8 ನಿಮಿಷಗಳೊಳಗೆ ಮತ್ತೆ ಪಂದ್ಯ ಆರಂಭವಾಗಬೇಕಿತ್ತು. ಹಾಗಿದ್ದಾಗ ಮಾತ್ರ ಪಂದ್ಯವನ್ನು ಮುನ್ನಡೆಸಬಹುದಿತ್ತು. ಆದರೆ ಮಳೆರಾಯ ಇದಕ್ಕೆ ಅವಕಾಶ ನೀಡಲಿಲ್ಲ. ಒಂದು ವೇಳೆ ಮತ್ತೆ ಪಂದ್ಯ ಆರಂಭಗೊಂಡಿದ್ದರೆ ಡಿಎಲ್ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸುತ್ತಿತ್ತು. ಆದರೆ ಮಳೆ ನಿಲ್ಲದ ಕಾರಣ ಪಂದ್ಯವನ್ನು ಪಲಿತಾಂಶವಿಲ್ಲದೆ ಕೊನೆಗೊಳಿಸಬೇಕಾಯಿತು. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಂಡವು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ