IND vs PAK, Asia Cup Final: ಈ ಪಾಕಿಸ್ತಾನಿಗಳು ಬದಲಾಗಲ್ಲ!: ಮೈದಾನದಲ್ಲಿ ಕೆಟ್ಟದಾಗಿ ವರ್ತಿಸಿದ ಸಾಹಿಬ್‌ಜಾದಾ ಫರ್ಹಾನ್
Sahibzada Farhan, Asia Cup 2025 Final: ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದಲ್ಲಿ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕ ಗಳಿಸಿದರು. ಆದರೆ ಅವರು ಔಟಾದಾಗ, ಅವರು ನಡವಳಿಕೆ ವಿಚಿತ್ರವಾಗಿತ್ತು. ವರುಣ್ ಚಕ್ರವರ್ತಿ ಬೌಲಿಂಗ್ ಅವರು ಔಟಾದಾಗ ಏನು ಮಾಡಿದರು ನೋಡಿ.

ಬೆಂಗಳೂರು (ಸೆ. 28): ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ (Indian Cricket Team) ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ. ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದ ನಂತರ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್‌ಗೆ ಕಳುಹಿಸಿದರು. ಆರಂಭದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಪಾಕ್ ನಂತರ ದಿಢೀರ್ ಕುಸಿತ ಕಂಡು 19.1 ಓವರ್ನಲ್ಲಿ 146 ರನ್ಗಳಿಗೆ ಆಲೌಟ್ ಆಯಿತು. ಹಿಂದಿನ ಪಂದ್ಯದಂತೆ, ಪಾಕಿಸ್ತಾನ ಪರ ಸಾಹಿಬ್‌ಜಾದಾ ಫರ್ಹಾನ್ ಭಿರುಸಿನ ಆರಂಭ ನೀಡಿದರು. ಆದಾಗ್ಯೂ, ಅರ್ಧಶತಕ ಗಳಿಸಿದ ನಂತರ ವರುಣ್ ಚಕ್ರವರ್ತಿ ಅವರ ಇನ್ನಿಂಗ್ಸ್ಗೆ ಬ್ರೇಕ್ ಹಾಕಿದರು.
ಔಟಾದಾಗ ಕೋಪಗೊಂಡ ಸಾಹಿಬ್‌ಜಾದಾ ಫರ್ಹಾನ್
ಫೈನಲ್‌ನಲ್ಲಿ ಪಾಕಿಸ್ತಾನ ಪರ ಸಾಹಿಬ್‌ಜಾದಾ ಫರ್ಹಾನ್ ಅದ್ಭುತ ಅರ್ಧಶತಕ ಗಳಿಸಿದರು. ಆದರೆ ನಂತರ ವರುಣ್ ಚಕ್ರವರ್ತಿ ಅವರ ಸ್ಪಿನ್ ತಂತ್ರ ಅರಿಯದೆ ಔಟ್ ಆದರು. ಪಾಕಿಸ್ತಾನದ ಇನ್ನಿಂಗ್ಸ್‌ನ 10 ನೇ ಓವರ್ ಅನ್ನು ವರುಣ್ ಚಕ್ರವರ್ತಿ ಎಸೆದರು. ಆ ಓವರ್‌ನ ಮೂರನೇ ಎಸೆತದಲ್ಲಿ ಫರ್ಹಾನ್ ಸಿಕ್ಸರ್ ಬಾರಿಸಿದರು. ಆದರೆ ಮುಂದಿನ ಎಸೆತದಲ್ಲಿಯೇ, ಫರ್ಹಾನ್ ಡೀಪ್ ಮಿಡ್-ವಿಕೆಟ್‌ನಲ್ಲಿ ನಿಂತಿದ್ದ ತಿಲಕ್ ವರ್ಮಾ ಅವರಿಗೆ ಕ್ಯಾಚ್ ನೀಡಿದರು.
ಔಟಾದಾಗ ಸಾಹಿಬ್‌ಜಾದಾ ಫರ್ಹಾನ್ ರಿಯಾಕ್ಷನ್ನ ವೀಡಿಯೊ:
🚨 WICKET!🚨
Sahibzada Farhan c Tilak Varma b Varun Chakravarthy for 57(38) [5×4, 3×6]! He smashed a six earlier in the over but got out trying for another. Frustrated, he thuds the bat on the ground. Big moment!#Cricket #INDvsPAK #AsiaCup #PakistanCricket pic.twitter.com/R4XuybRyOo
— Asia Voice 🎤 (@Asianewss) September 28, 2025
ಭಾರತದ ವಿರುದ್ಧದ ಫೈನಲ್ ಪಂದ್ಯದಲ್ಲಿ ಸಾಹಿಬ್‌ಜಾದಾ ಫರ್ಹಾನ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಜಸ್ಪ್ರೀತ್ ಬುಮ್ರಾ ಅವರನ್ನು ಟಾರ್ಗೆಟ್ ಮಾಡಿದ ಫರ್ಹಾನ್ ಭರ್ಜರಿ ಆಗಿ ಬ್ಯಾಟ್ ಬೀಸಿದರು. ಅವರು 38 ಎಸೆತಗಳಲ್ಲಿ 5 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿದರು. ಔಟ್ ಆದ ತಕ್ಷಣ ಕೋಪಗೊಂಡ ಫರ್ಹಾನ್ ವಿಕೆಟ್ ಬದಿಯಲ್ಲಿ ಕೂತು ಬ್ಯಾಟ್ ಅನ್ನು ನೆಲಕ್ಕೆ ಹೊಡೆದಿದ್ದಾರೆ. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
IND vs PAK, Asia Cup Final: ಫೈನಲ್‌ನಲ್ಲಿ ಟಾಸ್ ಗೆದ್ದ ಭಾರತ: ಹಾರ್ದಿಕ್ ಅಲಭ್ಯ, ರಿಂಕುಗೆ ಸ್ಥಾನ
ಭಾರತದ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ನಂತರ, ಸಾಹಿಬ್‌ಜಾದಾ ಫರ್ಹಾನ್ ಗನ್ ಸೆಲೆಬ್ರೇಷನ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಅಲ್ಲದೆ ಬಿಸಿಸಿಐ ಈ ಬಗ್ಗೆ ಐಸಿಸಿಗೆ ವರದಿ ಕೂಡ ಮಾಡಿತು. ಆದಾಗ್ಯೂ, ಈ ಬಾರಿ, ಅರ್ಧಶತಕ ಗಳಿಸಿದ ನಂತರ, ಸಾಹಿಬ್‌ಜಾದಾ ಫರ್ಹಾನ್ ತಮ್ಮ ಬ್ಯಾಟ್ ಅನ್ನು ಮೇಲಕ್ಕೆತ್ತಿ ಸಾಮಾನ್ಯವಾಗಿ ಆಚರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Sun, 28 September 25




