Sarfaraz Khan: ಶತಕ ಬಾರಿಸಿ ಕಣ್ಣೀರು ಹಾಕಿದ ಸರ್ಫರಾಜ್ ಖಾನ್: ವಿಡಿಯೋ ವೈರಲ್
Sarfaraz Khan Video: ಸರ್ಫರಾಜ್ ಖಾನ್ ಅವರ ಶತಕದ ನೆರವಿನಿಂದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 374 ರನ್ ಕಲೆಹಾಕಿದೆ. ಸದ್ಯ ಮಧ್ಯಪ್ರದೇಶ ತಂಡವು ಮೊದಲ ಇನಿಂಗ್ಸ್ ಆರಂಭಿಸಿದ್ದು, ಪಂದ್ಯದ 2ನೇ ದಿನದಾಟ ಮುಂದುವರೆದಿದೆ.
ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ (Sarfaraz Khan) ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನ (Ranji Trophy Final) 2ನೇ ದಿನದಂದು ಶತಕ ಬಾರಿಸಿ ಮಿಂಚಿದ್ದರು. 190 ಎಸೆತಗಳಲ್ಲಿ ಶತಕ ಪೂರೈಸುತ್ತಿದ್ದಂತೆ ಸರ್ಫರಾಜ್ ಖಾನ್ ಭಾವೋದ್ವೇಗಕ್ಕೆ ಒಳಗಾದರು. ಶತಕವನ್ನು ಸಂಭ್ರಮಿಸಿದ 24ರ ಹರೆಯದ ಯುವ ಬ್ಯಾಟ್ಸ್ಮನ್ ಕಣ್ಣೀರು ಹಾಕುತ್ತಿರುವುದು ಕೂಡ ಬಂತು. ಈ ಭಾವಾನಾತ್ಮಕ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಹಾಗೆಯೇ ಸರ್ಫರಾಜ್ ಖಾನ್ ಅವರ ಐಪಿಎಲ್ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಶತಕದ ಸಂಭ್ರಮದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ವಿಶೇಷ ಎಂದರೆ ಇದು ಸರ್ಫರಾಜ್ ಖಾನ್ ಅವರ ಈ ಸೀಸನ್ನಲ್ಲಿನ ನಾಲ್ಕನೇ ಶತಕವಾಗಿದೆ. ಹಾಗೆಯೇ ಒಟ್ಟಾರೆ ರಣಜಿ ಕ್ರಿಕೆಟ್ನಲ್ಲಿನ ಶತಕ.
? for Sarfaraz Khan! ? ?
ಇದನ್ನೂ ಓದಿHis 4⃣th in the @Paytm #RanjiTrophy 2021-22 season. ? ?
This has been a superb knock in the all-important summit clash. ? ? #Final | #MPvMUM | @MumbaiCricAssoc
Follow the match ▶️ https://t.co/xwAZ13U3pP pic.twitter.com/gv7mxRRdkV
— BCCI Domestic (@BCCIdomestic) June 23, 2022
ಈ ಪಂದ್ಯದಲ್ಲಿ 243 ಎಸೆತಗಳನ್ನು ಎದುರಿಸಿದ ಸರ್ಫರಾಜ್ ಖಾನ್ 13 ಫೋರ್ ಹಾಗೂ 2 ಸಿಕ್ಸ್ನೊಂದಿಗೆ 134 ರನ್ ಬಾರಿಸಿದ್ದರು. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡರು. ಈ ಬಾರಿಯ ರಣಜಿ ಟೂರ್ನಿಯಲ್ಲಿ ಒಂದು ದ್ವಿಶತಕ (275 ರನ್), 4 ಶತಕ ಹಾಗೂ 2 ಅರ್ಧ ಶತಕ ಬಾರಿಸಿರುವ ಸರ್ಫರಾಜ್ 900 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಇದರೊಂದಿಗೆ ರಣಜಿ ಸೀಸನ್ಗಳಲ್ಲಿ 2 ಬಾರಿ 900+ ರನ್ಗಳಿಸಿದ ತಂಡದ ಮೂರನೇ ಆಟಗಾರ ಎನಿಸಿಕೊಂಡರು.
✨ 100% Shuddh Emotions ✨pic.twitter.com/I8M4l6g6Qh
— Delhi Capitals (@DelhiCapitals) June 23, 2022
88 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಮೊದಲ ಬಾರಿಗೆ ಅಜಯ್ ಶರ್ಮಾ ಈ ಸಾಧನೆ ಮಾಡಿದ್ದರು. ಅಜಯ್ ಶರ್ಮಾ 1991-92ರ ರಣಜಿ ಸೀಸನ್ನಲ್ಲಿ 993 ರನ್ ಮತ್ತು 1996-97ರ ಸೀಸನ್ನಲ್ಲಿ 1033 ರನ್ ಗಳಿಸಿದ್ದರು. ಹಾಗೆಯೇ ಮುಂಬೈನ ಶ್ರೇಷ್ಠ ರಣಜಿ ಆಟಗಾರ ವಾಸಿಫ್ ಜಾಫರ್ 2008-09 ಸೀಸನ್ನಲ್ಲಿ 1260 ರನ್ ಬಾರಿಸಿದ್ದರು. ಇನ್ನು ತಮ್ಮ ವೃತ್ತಿಜೀವನದ ಕೊನೆಯ ದಿನಗಳಲ್ಲಿ ಜಾಫರ್ ವಿದರ್ಭ ಪರ ಆಡಿದ್ದರು. ಈ ವೇಳೆ 2020ರ ಸೀಸನ್ನಲ್ಲಿ 1037 ರನ್‌ಗಳನ್ನು ಬಾರಿಸಿ ಮಿಂಚಿದ್ದರು.
2019-20 ರಲ್ಲಿ ಮುಂಬೈ ಪರ ಆಡಿದ್ದ ಸರ್ಫರಾಜ್ ಖಾನ್ 6 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 926 ರನ್ ಗಳಿಸಿದ್ದರು. ಅಂದರೆ 155ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಈ ವೇಳೆ ಒಂದು ತ್ರಿಶತಕ (301), 3 ಶತಕ ಹಾಗೂ 2 ಅರ್ಧ ಶತಕಗಳನ್ನೂ ಸಹ ಬಾರಿಸಿದ್ದರು. ಈ ಬಾರಿಯ ರಣಜಿ ಟೂರ್ನಿಯಲ್ಲಿ ಒಂದು ದ್ವಿಶತಕ (275 ರನ್), 4 ಶತಕ ಹಾಗೂ 2 ಅರ್ಧ ಶತಕ ಬಾರಿಸಿರುವ ಸರ್ಫರಾಜ್ 900 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಮೂಲಕ ರಣಜಿ ಸೀಸನ್ಗಳಲ್ಲಿ 2 ಬಾರಿ 900+ ರನ್ಗಳಿಸಿದ ತಂಡದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಸರ್ಫರಾಜ್ ಖಾನ್ ಅವರ ಶತಕದ ನೆರವಿನಿಂದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 374 ರನ್ ಕಲೆಹಾಕಿದೆ. ಸದ್ಯ ಮಧ್ಯಪ್ರದೇಶ ತಂಡವು ಮೊದಲ ಇನಿಂಗ್ಸ್ ಆರಂಭಿಸಿದ್ದು, ಪಂದ್ಯದ 2ನೇ ದಿನದಾಟ ಮುಂದುವರೆದಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.