AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳಿಗೆ 10 ಲಕ್ಷ ಜೀವನಾಂಶ ಕೇಳಿದ ಶಮಿ ಪತ್ನಿ; 4 ಲಕ್ಷ ಸಾಕಾಗ್ತಿಲ್ವೇ ಎಂದು ಬೆಚ್ಚಿ ಬಿದ್ದ ಸುಪ್ರೀಂ ಕೋರ್ಟ್‌

Mohammed Shami-Hasin Jahan Alimony Battle: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಮಾಜಿ ಪತ್ನಿ ಹಸಿನ್ ಜಹಾನ್, ಜೀವನಾಂಶವನ್ನು ತಿಂಗಳಿಗೆ 10 ಲಕ್ಷಕ್ಕೆ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಶಮಿ ಅವರ 500 ಕೋಟಿ ನಿವ್ವಳ ಮೌಲ್ಯ ಮತ್ತು ಉನ್ನತ ಜೀವನಶೈಲಿಯನ್ನು ಉಲ್ಲೇಖಿಸಿ, ತಮ್ಮ ಮತ್ತು ಮಗಳ ಜೀವನ ಮಟ್ಟ ಸುಧಾರಿಸಲು ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

ತಿಂಗಳಿಗೆ 10 ಲಕ್ಷ ಜೀವನಾಂಶ ಕೇಳಿದ ಶಮಿ ಪತ್ನಿ; 4 ಲಕ್ಷ ಸಾಕಾಗ್ತಿಲ್ವೇ ಎಂದು ಬೆಚ್ಚಿ ಬಿದ್ದ ಸುಪ್ರೀಂ ಕೋರ್ಟ್‌
Mohammed Shami
ಪೃಥ್ವಿಶಂಕರ
|

Updated on:Nov 07, 2025 | 5:49 PM

Share

ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಬದುಕು ಸೂತ್ರ ಹರಿದ ಗಾಳಿಪಟದಂತ್ತಾಗಿದೆ. ಒಂದೆಡೆ ಅವರ ವೃತ್ತಿಬದುಕು ಮುಗಿಯುವ ಹಂತಕ್ಕೆ ಬಂದಿದ್ದರೆ, ಇನ್ನೊಂದೆಡೆ ಅವರ ವೈಯಕ್ತಿಕ ಬದುಕು ಕೂಡ ಹಳಿ ತಪ್ಪಿ ವರ್ಷಗಳೇ ಕಳೆದಿವೆ. ರಣಜಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಕ್ಕೆ ಮತ್ತೆ ಸೇರಿಕೊಳ್ಳುವ ನಿರೀಕ್ಷೆಯಲ್ಲಿದ್ದ ಶಮಿಗೆ ಬಿಸಿಸಿಐ ಆಘಾತ ನೀಡಿದೆ. ಇದೀಗ ಅವರ ವೈಯಕ್ತಿಕ ಬದುಕಿನಲ್ಲಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ (Hasin Jahan) ಜೊತೆಗಿನ ವಿವಾದ ಮತ್ತೊಮ್ಮೆ ಬೆಳಕಿಗೆ ಬಂದಿದೆ. ವಾಸ್ತವವಾಗಿ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಜೀವನಾಂಶ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ತನ್ನ ಜೀವನಾಂಶವನ್ನು ತಿಂಗಳಿಗೆ 10 ಲಕ್ಷಕ್ಕೆ ಹೆಚ್ಚಿಸಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಏಳು ವರ್ಷಗಳಿಂದ ಪ್ರತ್ಯೇಕ ವಾಸ

ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ ಕಳೆದ ಏಳು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 2018 ರಲ್ಲಿ ಹಸಿನ್ ಜಹಾನ್, ಶಮಿ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಕಿರುಕುಳದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ್ದರು. ಅಂದಿನಿಂದ ಅವರ ಪ್ರಕರಣ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಆರಂಭದಲ್ಲಿ, ವಿಚಾರಣಾ ನ್ಯಾಯಾಲಯವು ಶಮಿಗೆ, ಹಸಿನ್ ಜಹಾನ್ ಅವರಿಗೆ ತಿಂಗಳಿಗೆ 1.3 ಲಕ್ಷ ರೂಗಳನ್ನು ಮಧ್ಯಂತರ ನಿರ್ವಹಣಾ ಭತ್ಯೆಯಾಗಿ ಪಾವತಿಸಲು ಆದೇಶಿಸಿತ್ತು. ಆ ಬಳಿಕ ಜುಲೈ 2025 ರಲ್ಲಿ, ಕಲ್ಕತ್ತಾ ಹೈಕೋರ್ಟ್ ಈ ಮೊತ್ತವನ್ನು ತಿಂಗಳಿಗೆ 4 ಲಕ್ಷಕ್ಕೆ ಹೆಚ್ಚಿಸಿತು. ಅದರಲ್ಲಿ 1.5 ಲಕ್ಷ ಹಸಿನ್ ಜಹಾನ್‌ ಅವರಿಗೆ ಮತ್ತು 2.5 ಲಕ್ಷ ಅವರ ಮಗಳಿಗೆ ಎಂದು ಮೀಸಲಿರಿಸಿತ್ತು.

ಹಸೀನ್ ಜಹಾನ್ 10 ಲಕ್ಷ ಕೇಳುತ್ತಿರುವುದ್ಯಾಕೆ?

4 ಲಕ್ಷ ರೂ ಜೀವನ ನಿರ್ವಾಹಣೆಗೆ ಸಾಕಾಗುತ್ತಿಲ್ಲ ಎಂದು ಹಸಿನ್ ಜಹಾನ್ ಇದೀಗ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ತನ್ನ ಮತ್ತು ತನ್ನ ಮಗಳ ಮಧ್ಯಂತರ ಭತ್ಯೆಯನ್ನು 10 ಲಕ್ಷ ರೂಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಹಸಿನ್ ಜಹಾನ್ ಮೊದಲಿನಿಂದಲೂ 10 ಲಕ್ಷ ರೂ. ಭತ್ಯೆಯನ್ನು ಕೇಳುತ್ತಿದ್ದು, ಅದರಲ್ಲಿ ತನಗೆ 7 ಲಕ್ಷ ಮತ್ತು ತನ್ನ ಮಗಳಿಗೆ 3 ಲಕ್ಷ ಮೀಸಲಿರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದಾಗ್ಯೂ, ಅವರ ಬೇಡಿಕೆಯನ್ನು ವಿಚಾರಣಾ ನ್ಯಾಯಾಲಯ ಮತ್ತು ನಂತರ ಹೈಕೋರ್ಟ್ ತಿರಸ್ಕರಿಸಿದ್ದವು.

ಈಗ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಹಸಿನ್ ಜಹಾನ್, ಶಮಿ ಬಳಿ  ಸುಮಾರು 500 ಕೋಟಿ ಮೌಲ್ಯದ ಆಸ್ತಿ ಇದೆ. ಅಲ್ಲದೆ ಶಮಿ ಮತ್ತು ನನ್ನ ಜೀವನ ನಿರ್ವಾಹಣೆಯಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಆದ್ದರಿಂದ ಶಮಿ, ನನ್ನ ಮತ್ತು ನನ್ನ ಮಗಳ ಜೀವನ ಮಟ್ಟವನ್ನು ಸುಧಾರಿಸಲು ಬೇಕಾಗುವಷ್ಟು ಜೀವನಾಂಶವನ್ನು ನೀಡುತ್ತಿಲ್ಲ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಮೇಲ್ಮನವಿಯಲ್ಲಿ ಇತರ ಕ್ರಿಕೆಟಿಗರನ್ನು ಉಲ್ಲೇಖಿಸಿರುವ ಹಸಿನ್ ಜಹಾನ್, ಇತರ ಗಣ್ಯ ಕ್ರಿಕೆಟಿಗರಂತೆ ತನಗೂ ಅದೇ ಗುಣಮಟ್ಟದ ಜೀವನವನ್ನು ನಡೆಸುವ ಹಕ್ಕಿದೆ. ಆದರೆ ಶಮಿ ಅದಕ್ಕೆ ಬೇಕಾಗುವಷ್ಟು ಜೀವನಾಂಶವನ್ನು ನೀಡುತ್ತಿಲ್ಲ ಆದ್ದರಿಂದ ಜೀವನಾಂಶವನ್ನು 10 ಲಕ್ಷಕ್ಕೆ ಏರಿಸುವಂತೆ ಕೇಳಿಕೊಂಡಿದ್ದಾರೆ.

ಮೊಹಮ್ಮದ್ ಶಮಿ ಯುಗಾಂತ್ಯ? ಮೂರು ಪಂದ್ಯಗಳಲ್ಲಿ 15 ವಿಕೆಟ್ ಪಡೆದರೂ ಇಲ್ಲ ಅವಕಾಶ..!

4 ಲಕ್ಷ ಕೂಡ ಸಾಕಾಗುವುದಿಲ್ಲವೇ ಎಂದ ಕೋರ್ಟ್​

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇನ್ನೂ ಯಾವುದೇ ಆದೇಶ ಹೊರಡಿಸಿಲ್ಲ. ಬದಲಿಗೆ ಹಸಿನ್ ಜಹಾನ್ ಅವರನ್ನೇ ಪ್ರಶ್ನಿಸಿರುವ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಹಸಿನ್ ಜಹಾನ್ ಅವರ ವಕೀಲರ ಬಳಿ, ‘ಸಂತ್ರಸ್ತೆಗೆ ತಿಂಗಳಿಗೆ 4 ಲಕ್ಷ ಕೂಡ ಸಾಕಾಗುವುದಿಲ್ಲವೇ’ ಎಂದು ಕೇಳಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಶಮಿ ಮಡದಿಯ ಮೇಲ್ಮನವಿಯನ್ನು ಪುರಸ್ಕರಿಸುತ್ತಾ ಅಥವಾ ಮತ್ತೊಂದು ಮೊತ್ತವನ್ನು ನಿಗದಿಪಡಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Fri, 7 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ