ರಾಜಸ್ಥಾನ ರಾಯಲ್ಸ್ ಮಾರಾಟ ಆಗಿದ್ದಕ್ಕೆ ಶೇನ್ ವಾರ್ನ್ ಕುಟುಂಬಕ್ಕೆ ಸಿಗಲಿದೆ 450 ಕೋಟಿ ರೂಪಾಯಿ

ರಾಜಸ್ಥಾನ ರಾಯಲ್ಸ್ ತಂಡ ₹15,290 ಕೋಟಿಗೆ ಅಮೆರಿಕದ ಕಲ್ ಸೋಮಾನಿ ಒಕ್ಕೂಟಕ್ಕೆ ಮಾರಾಟವಾಗಿದೆ. ಈ ಒಪ್ಪಂದದಡಿಯಲ್ಲಿ, ದಿವಂಗತ ಶೇನ್ ವಾರ್ನ್ ಕುಟುಂಬಕ್ಕೆ 450 ಕೋಟಿಗೂ ಹೆಚ್ಚು ಹಣ ಸಿಗಲಿದೆ. 2008ರಲ್ಲಿ ರಾಯಲ್ಸ್ ತಂಡದ ನಾಯಕನಾಗಿ ವಾರ್ನ್, ತಂಡದ ಶೇ.3ರಷ್ಟು ಪಾಲು ಪಡೆದಿದ್ದರು.

ರಾಜಸ್ಥಾನ ರಾಯಲ್ಸ್ ಮಾರಾಟ ಆಗಿದ್ದಕ್ಕೆ ಶೇನ್ ವಾರ್ನ್ ಕುಟುಂಬಕ್ಕೆ ಸಿಗಲಿದೆ 450 ಕೋಟಿ ರೂಪಾಯಿ
ಶೇನ್ ವಾರ್ನ್

Updated on: Mar 25, 2026 | 12:12 PM

ಐಪಿಎಲ್ ಆರಂಭಕ್ಕೂ ಮೊದಲು ಕೆಲವು ಮಹತ್ವದ ಬೆಳವಣಿಗೆ ನಡೆದಿದೆ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟ ಆಗಿದೆ. ಆರ್​​ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಖರೀದಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕ ಮೂಲದ ಕಲ್ ಸೋಮಾನಿ ಒಕ್ಕೂಟ ಈ ಕಂಪನಿಯ ಶೇ. 100ರಷ್ಟು ಷೇರನ್ನು ಖರೀದಿ ಮಾಡಿದೆ. ಇದಕ್ಕಾಗಿ 15,290 ಕೋಟಿ ರೂಪಾಯಿ ಪಾವತಿಸಿದೆ. ಈ ಹಣದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ದಿವಂಗತ ಶೇನ್ ವಾರ್ನ್​​​ ಕುಟುಂಬಕ್ಕೂ 450 ಕೋಟಿ ರೂಪಾಯಿ ಸಿಗಲಿದೆ.

2008ರಲ್ಲಿ ಶೇನ್ ವಾರ್ನ್ ಅವರು ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ಅವರು ತಂಡದ ಕ್ಯಾಪ್ಟನ್ ಹಾಗೂ ಆಗಿದ್ದರು. ಆ ಬಾರಿ ಆರ್​​ಆರ್​ ತಂಡ ಗೆಲುವು ಕಂಡಿತು. ವಾರ್ನ್​ ಅವರು ತಂಡವನ್ನು ಪ್ರತಿನಿಧಿಸಿದ್ದಕಾಗಿ ಪ್ರತಿ ವರ್ಷ ತಂಡದ ಶೇ.0.75 ಶೇರನ್ನು ಪಡೆದಿದ್ದರು. ‘ನನ್ನ ಒಪ್ಪಂದದ ಭಾಗವಾಗಿ ನಾನು ತಂಡದ ನಾಯಕ, ಕೋಚ್ ಮತ್ತು ನಾನು ಬಯಸಿದ ರೀತಿಯಲ್ಲಿ ಕ್ರಿಕೆಟ್ ತಂಡವನ್ನು ನಡೆಸಲು ಕೇಳಿಕೊಂಡರು. ನಾನು ಎಲ್ಲವೂ ಆಗಿದ್ದೆ’ ಎಂದು ಶೇನ್ ವಾರ್ನ್ ಹೇಳಿದ್ದರು.

ನಾಲ್ಕು ಆವೃತ್ತಿಗಳಲ್ಲಿ ರಾಯಲ್ಸ್ ಅನ್ನು ವಾರ್ನ್ ಪ್ರತಿನಿಧಿಸಿದ್ದರಿಂದ, ಫ್ರಾಂಚೈಸಿಯ ಮಾಲೀಕತ್ವದಲ್ಲಿ ಅವರಿಗೆ ಶೇ.3 ಪಾಲು ನಿಡಲಾಗಿದೆ. ಇದರಿಂದಾಗಿ ಅವರ ಪಾಲಿನ ಮೌಲ್ಯ ಸುಮಾರು $48 ಮಿಲಿಯನ್ (ರೂ. 450-460 ಕೋಟಿ) ಆಗಿತ್ತು. ಹೀಗಾಗಿ, ಕುಟುಂಬದವರಿಗೆ ತಂಡದ ಮಾರಾಟದಿಂದ ದೊಡ್ಡ ಮೊತ್ತ ಸಿಗುತ್ತಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಡೀಲ್ ಕೊನೆಯಾಗಲಿದೆ.

ಇದನ್ನೂ ಓದಿ:  ಆರ್​​ಸಿಬಿ ಹೆಸರು ಬದಲಾವಣೆ ಪಕ್ಕಾ? ಇಲ್ಲಿದೆ ಕಾರಣ

2022ರಲ್ಲಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಿಧನರಾದರು. ಅವರು ಮೂವರು ಮಕ್ಕಳನ್ನು ಅಗಲಿದ್ದರು. ಅವರಿಗೆ ಹೃದಯಾಘಾತ ಆಗಿತ್ತು ಎನ್ನಲಾಗಿದೆ. ಅವರ ಸಾವಿನ ಸುತ್ತ ಸಾಕಷ್ಟು ಅನುಮಾನ ಕೂಡ ಮೂಡಿತ್ತು.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us