
ಹರಾರೆಯಲ್ಲಿ ಜಿಂಬಾಬ್ವೆ ಹಾಗೂ ಭಾರತ (India vs Zimbabwe ) ನಡುವಿನ ಮೊದಲ ಟಿ20 ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ (Shreyas Iyer) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ವಾಸ್ತವವಾಗಿ ಭಾರತದ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಶ್ರೇಯಸ್ ಅಯ್ಯರ್ಗೆ ನಿರೀಕ್ಷಿಸಿದ ಯಶಸ್ಸು ಸಿಗದಿರಬಹುದು, ಆದರೆ ಟಾಸ್ನಲ್ಲಿ ಅವರ ಅದೃಷ್ಟ ಅದ್ಭುತವಾಗಿದೆ. ನಾಯಕನಾಗಿ ಶ್ರೇಯಸ್ ಅಯ್ಯರ್ಗೆ ಇದು 8ನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಿದ್ದು, ಈ 8 ಪಂದ್ಯಗಳಲ್ಲೂ ಶ್ರೇಯಸ್ ಟಾಸ್ ಗೆದ್ದಿದ್ದಾರೆ. ಇದರೊಂದಿಗೆ, ಶ್ರೇಯಸ್, ಎಂಎಸ್ ಧೋನಿ ಅವರ ಸತತ 7 ಟಾಸ್ ಗೆದ್ದ ದಾಖಲೆಯನ್ನು ಮುರಿದಿದ್ದಾರೆ.
ಮೇಲೆ ಹೇಳಿದಂತೆ ಶ್ರೇಯಸ್ ಅಯ್ಯರ್ ಪೂರ್ಣಾವಧಿ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಸತತ ಎಂಟು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯೊಂದಿಗೆ ಪ್ರಾರಂಭವಾದ ಈ ‘ಟಾಸ್ ಮ್ಯಾಜಿಕ್’ ಜಿಂಬಾಬ್ವೆ ಪಂದ್ಯದವರೆಗೂ ಮುಂದುವರೆದಿದೆ. ಆದಾಗ್ಯೂ, ಟಾಸ್ ಎಷ್ಟೇ ಅದೃಷ್ಟಶಾಲಿಯಾಗಿದ್ದರೂ, ಆ ಅದೃಷ್ಟ ಪಂದ್ಯದ ಫಲಿತಾಂಶಗಳಾಗಿ ರೂಪಾಂತರಗೊಳ್ಳುವುದಿಲ್ಲ. ಸತತವಾಗಿ ಟಾಸ್ ಗೆದ್ದರೂ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದು ಅಯ್ಯರ್ಗೆ ದುಃಸ್ವಪ್ನವಾಗಿ ಕಾಡುತ್ತಿದೆ.
IND vs ZIM: ಸತತ 8ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಯ್ಯರ್; ತಂಡದ ಪರ ಯುವ ವೇಗಿ ಪಾದಾರ್ಪಣೆ
ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದ ಮೂಲಕ ವೇಗದ ಬೌಲರ್ ಅಶೋಕ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಐಪಿಎಲ್ನಲ್ಲಿ ತಮ್ಮ ವೇಗದಿಂದ ಎಲ್ಲರನ್ನು ಬೆರಗುಗೊಳಿಸಿದ್ದ ಅಶೋಕ್ ಶರ್ಮಾ ಗಂಟೆಗೆ 154 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಆಡಿದ ಆರು ಪಂದ್ಯಗಳಲ್ಲಿ ಆರು ವಿಕೆಟ್ಗಳನ್ನು ಸಹ ಕಬಳಿಸಿದ್ದರು. ಅಶೋಕ್ ಶರ್ಮಾ ಜೊತೆಗೆ, ಮಯಾಂಕ್ ಯಾದವ್ ಕೂಡ ತಂಡಕ್ಕೆ ಮರಳಿದ್ದಾರೆ. ಮಯಾಂಕ್ 2024 ರ ನಂತರ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ