ಅಶ್ವಿನ್- ಅಯ್ಯರ್ ದಾಖಲೆಯ ಜೊತೆಯಾಟ; 28 ವರ್ಷಗಳ ಹಿಂದಿನ ಪಾಕ್ ದಾಖಲೆ ಉಡೀಸ್!

IND vs BAN: ಅಯ್ಯರ್ ಮತ್ತು ಅಶ್ವಿನ್ ಈ ದಾಖಲೆಯ ಜೊತೆಯಾಟ ನಡೆಸುವುದಕ್ಕಿಂತ ಮೊದಲು, ಈ ದಾಖಲೆಯು ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಇಂಜಮಾಮ್-ಉಲ್-ಹಕ್ ಮತ್ತು ರಶೀದ್ ಲತೀಫ್ ಹೆಸರಿನಲ್ಲಿತ್ತು.

ಅಶ್ವಿನ್- ಅಯ್ಯರ್ ದಾಖಲೆಯ ಜೊತೆಯಾಟ; 28 ವರ್ಷಗಳ ಹಿಂದಿನ ಪಾಕ್ ದಾಖಲೆ ಉಡೀಸ್!
ಅಶ್ವಿನ್- ಅಯ್ಯರ್
Follow us
TV9 Web
| Updated By: ಪೃಥ್ವಿಶಂಕರ

Updated on:Dec 26, 2022 | 12:05 PM

ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿರುವ ಟೀಂ ಇಂಡಿಯಾ (India Vs Bangladesh) ತವರಿಗೆ ಮರಳಿದೆ. ಮೂರನೇ ದಿನದ ಅಂತ್ಯ ಹಾಗೂ ನಾಲ್ಕನೇ ದಿನದ ಆರಂಭದಲ್ಲಿ ಬಾಂಗ್ಲಾದೇಶದ ಸ್ಪಿನ್ ದಾಳಿಗೆ ಭಾರತದ ಬ್ಯಾಟ್ಸ್​ಮನ್​ಗಳು ಶರಣಾದ ರೀತಿ ನೋಡಿದರೆ ಟೀಂ ಇಂಡಿಯಾ (Team India) ಈ ಪಂದ್ಯದಲ್ಲಿ ಸೋಲುವುದು ಖಚಿತ ಎಂದು ತೋರುತ್ತಿತ್ತು. ಆದರೆ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ (Shreyas Iyer and R Ashwin) ಅಮೋಘ ಜೊತೆಯಾಟ ಆಡುವುದರೊಂದಿಗೆ ಭಾರತಕ್ಕೆ 3 ವಿಕೆಟ್‌ಗಳ ಜಯ ತಂದುಕೊಟ್ಟರು. ಅಲ್ಲದೆ ನಿರ್ಣಾಯಕ ಹಂತದಲ್ಲಿ ದಾಖಲೆಯ ಜೊತೆಯಾಟವನ್ನಾಡಿದ ಈ ಜೋಡಿ 28 ವರ್ಷಗಳ ಹಳೆದ ದಾಖಲೆಯನ್ನು ಮುರಿದಿದೆ.

ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಈ ಪಂದ್ಯದಲ್ಲಿ ಭಾರತಕ್ಕೆ, ಬಾಂಗ್ಲಾದೇಶ ತಂಡ 145 ರನ್‌ಗಳ ಅಲ್ಪ ಗುರಿಯನ್ನು ನೀಡಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತ್ತು. ಹೀಗಾಗಿ ಉಳಿದಿದ್ದ ಎರಡು ದಿನಗಳಲ್ಲಿ ಭಾರತದ ಗೆಲುವಿಗೆ 100 ರನ್‌ಗಳ ಅಗತ್ಯವಿತ್ತು. ಈ ಗುರಿಯೊಂದಿಗೆ ನಾಲ್ಕನೇ ದಿನದಾಟವನ್ನು ಆರಂಭಿಸಿದ ಭಾರತ ಮೊದಲ ಸೆಷನ್‌ನಲ್ಲಿಯೇ ಬಾಂಗ್ಲಾದೇಶದ ಸ್ಪಿನ್ನರ್‌ಗಳ ದಾಳಿಗೆ ಸಿಲುಕಿ ಮತ್ತೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆಗೆ ಭಾರತದ ಸ್ಕೋರ್ ಕೇವಲ 74 ರನ್ ಆಗಿತ್ತು.

PAK vs NZ: ಪಾಕ್ ತಂಡದಿಂದ ರಿಜ್ವಾನ್ ಔಟ್! 4 ವರ್ಷಗಳ ಬಳಿಕ ತಂಡಕ್ಕೆ ಎಂಟ್ರಿಕೊಟ್ಟ ಮಾಜಿ ನಾಯಕ

ಶ್ರೇಯಸ್-ಅಶ್ವಿನ್ ಜುಗಲ್​ಬಂದಿ

ಅಂತಹ ಪರಿಸ್ಥಿತಿಯಲ್ಲಿ, ಶ್ರೇಯಸ್ ಮತ್ತು ಅಶ್ವಿನ್ ಎಂಟನೇ ವಿಕೆಟ್‌ಗೆ 71 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಹಂಚಿಕೊಂಡಿದಲ್ಲದೆ, ಮೊದಲ ಸೆಷನ್‌ನ ಅಂತ್ಯಕ್ಕೂ ಮೊದಲೇ ಭಾರತಕ್ಕೆ ಸ್ಮರಣೀಯ ಜಯವನ್ನು ತಂದುಕೊಟ್ಟರು. ಶ್ರೇಯಸ್ 29 ರನ್ ಮತ್ತು ಅಶ್ವಿನ್ 42 ರನ್ ಗಳಿಸಿ ಅಜೇಯರಾಗಿ ಉಳಿದರು. ಗೆಲುವಿನ ಜತೆಗೆ ಶ್ರೇಯಸ್ ಮತ್ತು ಅಶ್ವಿನ್ 1994ರಲ್ಲಿ ಪಾಕಿಸ್ತಾನ ನಿರ್ಮಿಸಿದ್ದ ದಾಖಲೆಯನ್ನೂ ಸಹ ಮುರಿದಿದ್ದಾರೆ.

ವಾಸ್ತವವಾಗಿ, ಶ್ರೇಯಸ್ ಮತ್ತು ಅಶ್ವಿನ್ ಅವರ ಅಜೇಯ 71 ರನ್‌ಗಳ ಜೊತೆಯಾಟವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗುರಿ ಬೆನ್ನಟ್ಟುವಾಗ, ನಾಲ್ಕನೇ ಇನ್ನಿಂಗ್ಸ್‌ನಲ್ಲಿ, ಅದರಲ್ಲೂ ಎಂಟನೇ ವಿಕೆಟ್‌ಗೆ ನಡೆಸಿದ ಅತಿದೊಡ್ಡ ಜೊತೆಯಾಟ ಎಂಬ ದಾಖಲೆಯನ್ನು ನಿರ್ಮಿಸಿದೆ.

ಪಾಕಿಸ್ತಾನದ ದಾಖಲೆ ಉಡೀಸ್

ಅಯ್ಯರ್ ಮತ್ತು ಅಶ್ವಿನ್ ಈ ದಾಖಲೆಯ ಜೊತೆಯಾಟ ನಡೆಸುವುದಕ್ಕಿಂತ ಮೊದಲು, ಈ ದಾಖಲೆಯು ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಇಂಜಮಾಮ್-ಉಲ್-ಹಕ್ ಮತ್ತು ರಶೀದ್ ಲತೀಫ್ ಹೆಸರಿನಲ್ಲಿತ್ತು. 1994 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಎಂಟನೇ ವಿಕೆಟ್‌ಗೆ ಈ ಇಬ್ಬರೂ 52 ರನ್​ಗಳ ಜೊತೆಯಾಟವನ್ನಾಡಿ ಈ ದಾಖಲೆ ನಿರ್ಮಿಸಿದ್ದರು. ಪಾಕಿಸ್ತಾನ ಈ ಟೆಸ್ಟ್‌ನಲ್ಲಿ ಕೇವಲ 1 ವಿಕೆಟ್ ಬಾಕಿ ಇರುವಂತೆಯೇ 314 ರನ್‌ಗಳ ಗುರಿಯನ್ನು ಸಾಧಿಸಿ ಗೆದ್ದಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Mon, 26 December 22

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು