
ಭಾರತ ತಂಡದ ಸ್ಟಾರ್ ಬ್ಯಾಟರ್ ಹಾಗೂ ನಾಯಕ ಶುಭ್ಮನ್ ಗಿಲ್ ಅವರ ಕ್ರಿಕೆಟ್ ಬದ್ಧತೆ ಈಗ ಕ್ರೀಡಾಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಭರ್ಜರಿ ತಯಾರಿಗಾಗಿ ಗಿಲ್ ಅವರು ನಾಲ್ಕರಿಂದ ಐದು ಜನ ನೆಟ್ ಬೌಲರ್ಗಳನ್ನು ತಮ್ಮದೇ ವೈಯಕ್ತಿಕ ವೆಚ್ಚದಲ್ಲಿ ನ್ಯೂಝಿಲೆಂಡ್ಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ.
ಸಾಮಾನ್ಯವಾಗಿ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಡೀ ತಂಡದ ಅಭ್ಯಾಸಕ್ಕಾಗಿ ನೆಟ್ ಬೌಲರ್ಗಳನ್ನು ವ್ಯವಸ್ಥೆ ಮಾಡುತ್ತದೆ. ಆದರೆ, ಸಕ್ರಿಯ ಆಟಗಾರನೊಬ್ಬ ತನ್ನ ಬ್ಯಾಟಿಂಗ್ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು, ಸಂಪೂರ್ಣವಾಗಿ ತನ್ನ ಸ್ವಂತ ಹಣದಿಂದ ಪ್ರತ್ಯೇಕ ಬೌಲರ್ಗಳ ಪ್ರಯಾಣ, ವಸತಿ ಮತ್ತು ಇತರೆ ಎಲ್ಲಾ ಖರ್ಚು-ವೆಚ್ಚಗಳನ್ನು ಭರಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಪಂದ್ಯದ ಅಭ್ಯಾಸದ ಕೊರತೆ: ಭಾರತ ‘ಎ’ ತಂಡವು ಪ್ರಸ್ತುತ ನ್ಯೂಝಿಲೆಂಡ್ ಪ್ರವಾಸದಲ್ಲಿದ್ದರೂ, ಗಿಲ್ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರಿಗೆ ಆ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ.
ನ್ಯೂಝಿಲೆಂಡ್ ಪಿಚ್ಗಳ ಸವಾಲು: ನ್ಯೂಝಿಲೆಂಡ್ನ ಸೀಮ್ ಮತ್ತು ಸ್ವಿಂಗ್ಗೆ ಪೂರಕವಾಗಿರುವ ವೇಗದ ಪಿಚ್ಗಳಲ್ಲಿ ಬ್ಯಾಟಿಂಗ್ ಮಾಡಲು ಕಠಿಣ ಸಿದ್ಧತೆಯ ಅಗತ್ಯವಿದೆ. ಈ ಕಾರಣಕ್ಕಾಗಿ ತಮಗೆ ಮಾತ್ರ ಪ್ರತ್ಯೇಕವಾಗಿ ಬೌಲಿಂಗ್ ಮಾಡಲು ಗಿಲ್ ಈ ಯೋಜನೆಯನ್ನು ರೂಪಿಸಿದ್ದಾರೆ.
ರಣಜಿ ಟ್ರೋಫಿ ಪಂದ್ಯ: ನ್ಯೂಝಿಲೆಂಡ್ಗೆ ಹಾರುವ ಮುನ್ನ ಶುಭಮನ್ ಗಿಲ್ ಅವರು ಅಕ್ಟೋಬರ್ 18 ರಿಂದ ಆರಂಭವಾಗಲಿರುವ ರಂಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿ, ಛತ್ತೀಸ್ಗಢ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ವಿದೇಶ ಪ್ರಯಾಣ: ರಣಜಿ ಪಂದ್ಯ ಮುಗಿದ ತಕ್ಷಣ, ಅಂದರೆ ಅಕ್ಟೋಬರ್ 23 ಅಥವಾ 24 ರಂದು ಅವರು ತಮ್ಮ ನೆಟ್ ಬೌಲರ್ಗಳ ತಂಡದೊಂದಿಗೆ ನ್ಯೂಝಿಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ.
ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಕೋಟ್ಯಂತರ ರೂಪಾಯಿಗಳನ್ನು ಸ್ವಂತ ಜೇಬಿನಿಂದ ಖರ್ಚು ಮಾಡುತ್ತಿರುವ ಶುಭ್ಮನ್ ಗಿಲ್ ಅವರ ಈ ನಡೆ, ಅವರ ವೃತ್ತಿಪರತೆ ಮತ್ತು ರನ್ ಗಳಿಸುವ ಹಸಿವನ್ನು ಎತ್ತಿ ತೋರಿಸುತ್ತದೆ. ಗಿಲ್ ಅವರ ಈ ವಿಶೇಷ ಸಿದ್ಧತೆ ಮುಂಬರುವ ಸರಣಿಯಲ್ಲಿ ಎಷ್ಟು ಯಶಸ್ಸು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.