Sourav Ganguly ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ ಸೌರವ್ ಗಂಗೂಲಿ?; ಸಂದೇಹ ಹುಟ್ಟುಹಾಕಿದ ಟ್ವೀಟ್

| Updated By: ರಶ್ಮಿ ಕಲ್ಲಕಟ್ಟ

Updated on: Jun 01, 2022 | 6:31 PM

Sourav Ganguly Resigns ನನ್ನ ಪಯಣದಲ್ಲಿ ಭಾಗವಾದ, ಬೆಂಬಲ ನೀಡಿದ, ನಾನು ಈಗ ಇರುವ ಸ್ಥಿತಿಗೆ ಮುಟ್ಟಲು ಕಾರಣವಾದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದಗಳನ್ನು ಹೇಳುತ್ತೇವೆ. ಇವತ್ತು ನಾನು ಹೊಸತೊಂದನ್ನು ಆರಂಭಿಸಲು ಯೋಚಿಸುತ್ತಿದ್ದೇನೆ, ಇದರಿಂದ ಬಹಳಷ್ಟು ಜನರಿಗೆ ಸಹಾಯ ಮಾಡಬಲ್ಲೆ ಎಂದು ನಾನು ಭಾವಿಸುತ್ತೇನೆ

Sourav Ganguly ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ ಸೌರವ್ ಗಂಗೂಲಿ?;  ಸಂದೇಹ ಹುಟ್ಟುಹಾಕಿದ ಟ್ವೀಟ್
ಸೌರವ್ ಗಂಗೂಲಿ
Follow us on

ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರು ಬುಧವಾರ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಬಹುಶಃ ಬಹಳಷ್ಟು ಜನರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುವ ಏನನ್ನಾದರೂ ಪ್ರಾರಂಭಿಸಲು ನಾನು ಯೋಜಿಸುತ್ತಿದ್ದೇನೆ” ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದು, ಇದು ಗಂಗೂಲಿ ರಾಜಕೀಯ ಸೇರಲಿದ್ದಾರೆಯೇ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.  ಬುಧವಾರ ಸಂಜೆ 5 ಗಂಟೆಗೆ ಟ್ವೀಟ್ ಮಾಡಿರುವ ಸೌರವ್ ಗಂಗೂಲಿ, 1992ರಲ್ಲಿ ನನ್ನ ಕ್ರಿಕೆಟ್ ಪಯಣ ಆರಂಭಿಸಿದ್ದು 2022ಕ್ಕೆ 30 ವರ್ಷಗಳು ಪೂರೈಸಲಿದೆ. ಅಲ್ಲಿಂದ ಇಲ್ಲಿಯವರೆಗೆ ಕ್ರಿಕೆಟ್ ನನಗೆ ಬಹಳಷ್ಟು ನೀಡಿದೆ. ಮುಖ್ಯವಾಗಿ ಅದು ನನಗೆ ನಿಮ್ಮೆಲ್ಲರ ಬೆಂಬಲವನ್ನು ನೀಡಿದೆ. ನನ್ನ ಪಯಣದಲ್ಲಿ ಭಾಗವಾದ, ಬೆಂಬಲ ನೀಡಿದ, ನಾನು ಈಗ ಇರುವ ಸ್ಥಿತಿಗೆ ಮುಟ್ಟಲು ಕಾರಣವಾದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದಗಳನ್ನು ಹೇಳುತ್ತೇವೆ. ಇವತ್ತು ನಾನು ಹೊಸತೊಂದನ್ನು ಆರಂಭಿಸಲು ಯೋಚಿಸುತ್ತಿದ್ದೇನೆ, ಇದರಿಂದ ಬಹಳಷ್ಟು ಜನರಿಗೆ ಸಹಾಯ ಮಾಡಬಲ್ಲೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಬದುಕಿನ ಹೊಸ ಅಧ್ಯಾಯಕ್ಕೆ ಪ್ರವೇಶಿಸುವ ಈ ಹೊತ್ತಲ್ಲಿಯೂ ನೀವು ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಸೌರವ್ ತಮ್ಮ ಟ್ವೀಟ್​ನಲ್ಲಿ ಬರೆದಿದ್ದಾರೆ.

ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಂಗಾಳದಲ್ಲಿ ಸೌರವ್ ಗಂಗೂಲಿ ರಾತ್ರಿ ಭೋಜನದ ಆತಿಥ್ಯ ವಹಿಸಿದ್ದರು. ಅಮಿತ್ ಶಾ ಅವರಿಗೆ ಆತಿಥ್ಯ ವಹಿಸಿದರ ಬಗ್ಗೆ ತೃಣಮೂಲ ಕಾಂಗ್ರಸ್ ಟೀಕಾ ಪ್ರಹಾರ ಮಾಡಿದಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜತೆ ಕೂಡಾ ತಾನು ಉತ್ತಮ ಸಂಬಂಧ ಹೊಂದಿರುವುದಾಗಿ ಗಂಗೂಲಿ ಹೇಳಿದ್ದರು. “ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನನಗೆ ತುಂಬಾ ಹತ್ತಿರದ ವ್ಯಕ್ತಿ. ಈ ಸಂಸ್ಥೆಗೆ ಸಹಾಯ ಮಾಡಲು ನಾನು ಅವರನ್ನು ಸಂಪರ್ಕಿಸಿದ್ದೆ” ಎಂದು ಗಂಗೂಲಿ ಮಾಧ್ಯಮದವರಲ್ಲಿ ಹೇಳಿದ್ದಾರೆ.

ಅಮಿತ್ ಶಾ ಔತಣಕೂಟದ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಸೌರವ್ “ಊಹಾಪೋಹಗಳು ಹರಿದಾಡುತ್ತಿವೆ. ಆದರೆ ನಾನು ಅಮಿತ್ ಶಾ ಅವರನ್ನು  2008 ರಿಂದ ಬಲ್ಲೆ. ಆಟವಾಡುವಾಗ ನಾನು ಅವರನ್ನು ಭೇಟಿಯಾಗುತ್ತಿದ್ದೆ. ಅದಕ್ಕಿಂತ ಹೆಚ್ಚೇನೂ ಇಲ್ಲ” ಎಂದು ಪ್ರತಿಕ್ರಿಯಿಸಿದ್ದರು.

ಇತರ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

 

Published On - 5:54 pm, Wed, 1 June 22