ಮೂವರ ಅರ್ಧಶತಕ: ಬೃಹತ್ ಮೊತ್ತ ಪೇರಿಸಿದ ಟೀಮ್ ಇಂಡಿಯಾ

ACC Men's Asia Cup Rising Stars 2026: ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡವು, ನವೆಂಬರ್ 29ರಂದು ನಡೆಯಲಿರುವ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ್ 'ಎ' ಅಥವಾ ಬಾಂಗ್ಲಾದೇಶ್ 'ಎ' ತಂಡವನ್ನು ಎದುರಿಸಲಿದೆ."

ಮೂವರ ಅರ್ಧಶತಕ: ಬೃಹತ್ ಮೊತ್ತ ಪೇರಿಸಿದ ಟೀಮ್ ಇಂಡಿಯಾ
Team India
Image Credit source: BCCI

Updated on: Nov 26, 2026 | 7:10 PM

ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಮೊದಲ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ 317 ರನ್ ಕಲೆಹಾಕಿದೆ. ಶ್ರೀಲಂಕಾ ಎ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡಕ್ಕೆ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಈ ಜೋಡಿಯು ಮೊದಲ ವಿಕೆಟ್​ಗೆ 80 ರನ್ ಪೇರಿಸಿ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿಕೊಟ್ಟರು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ವೈಭವ್ ಸೂರ್ಯವಂಶಿ (40) ಔಟಾದರು.

Loading...

ಮತ್ತೊಂದೆಡೆ ಆಕರ್ಷಕ ಬ್ಯಾಟಿಂಗ್ ಮುಂದುವರೆಸಿದ ಅಭಿಷೇಕ್ ಶರ್ಮಾ 63 ಎಸೆತಗಳಲ್ಲಿ 78 ರನ್ ಕಲೆಹಾಕಿದರು. ಇನ್ನು ನಾಯಕ ತಿಲಕ್ ವರ್ಮಾ 66 ಎಸೆತಗಳಲ್ಲಿ 53  ರನ್​ಗಳ ಕೊಡುಗೆ ನೀಡಿದರು.

ಇದರ ನಡುವೆ ಕಣಕ್ಕಿಳಿದ ಕುಮಾರ್ ಕುಶಾಗ್ರ 21 ರನ್​ಗಳಿಸಿ ಔಟಾದರೆ, ರಿಂಕು ಸಿಂಗ್ ಕೇವಲ 12 ರನ್​ಗಳಿಸಿ ನಿರಾಸೆ ಮೂಡಿಸಿದರು. ಇನ್ನು ಸುರ್ಯಾಂಶ್ ಶೆಡ್ಗೆ 10 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಶಹಬಾಝ್ ಅಹ್ಮದ್ (54) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ತನುಷ್ ಕೋಟ್ಯಾನ್ 28 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಎ ತಂಡ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 317 ರನ್ ಕಲೆಹಾಕಿದೆ.

  • ಶ್ರೀಲಂಕಾ ಎ ತಂಡಕ್ಕೆ 50 ಓವರ್​ಗಳಲ್ಲಿ 318 ರನ್​ಗಳ ಗುರಿ.

ಭಾರತ ಎ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ(ನಾಯಕ), ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ರಿಂಕು ಸಿಂಗ್, ಸೂರ್ಯಾಂಶ್ ಶೆಡ್ಗೆ, ಶಹಬಾಝ್ ಅಹ್ಮದ್, ತನುಷ್ ಕೋಟ್ಯಾನ್, ಹರ್ಷ್ ದುಬೆ, ಹರ್ಷಿತ್ ರಾಣಾ, ಅರ್ಷದ್ ಖಾನ್.

ಇದನ್ನೂ ಓದಿ: IPL 2027: ಬೆನ್ ಸ್ಟೋಕ್ಸ್‌ಗೆ ಗ್ರೀನ್ ಸಿಗ್ನಲ್, ಹ್ಯಾರಿ ಬ್ರೂಕ್‌ಗೆ ನಿಷೇಧ!

ಶ್ರೀಲಂಕಾ ಎ (ಪ್ಲೇಯಿಂಗ್ XI): ಲಸಿತ್ ಕ್ರೂಸ್ಪುಲ್ಲೆ, ಸಿನೆತ್ ಜಯವರ್ದನ, ನಿಶಾನ್ ಮದುಷ್ಕ (ವಿಕೆಟ್ ಕೀಪರ್), ಪವನ್ ರತ್ನಾಯಕೆ (ನಾಯಕ), ನಿಪುನ್ ಧನಂಜಯ, ಜನಿತ್ ಲಿಯಾನಗೆ, ವನುಜಾ ಸಹನ್, ವಿಜಯಕಾಂತ್ ವ್ಯಾಸಕಾಂತ್, ರವಿಂದು ಫೆರ್ನಾಂಡೋ, ಲಹಿರು ಸಮರಕೋನ್, ಗರುಕ ಸಂಕೇತ್.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us