AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND A vs SL A: ಸೆಮಿಫೈನಲ್​ನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಎಂಬುದು ಏಷ್ಯಾದ ಪ್ರತಿಭಾವಂತ ಯುವ ಕ್ರಿಕೆಟಿಗರನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಆಯೋಜಿಸುವ ಪುರುಷರ ಸೀಮಿತ ಓವರ್‌ಗಳ ಕ್ರಿಕೆಟ್ ಟೂರ್ನಿಯಾಗಿದೆ. ಈ ಟೂರ್ನಿಯನ್ನು ಈ ಹಿಂದೆ 'ಎಸಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್' ಎಂದು ಕರೆಯಲಾಗುತ್ತಿತ್ತು.

IND A vs SL A: ಸೆಮಿಫೈನಲ್​ನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ
Team India Image Credit source: BCCI
ಝಾಹಿರ್ ಯೂಸುಫ್
|

Updated on:Nov 26, 2026 | 3:26 PM

Share

ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳು ಮುಖಾಮುಖಿಯಾಗಿವೆ. ಕತಾರ್‌ನ ದೋಹಾದಲ್ಲಿರುವ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಭಾರತ ಎ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ(ನಾಯಕ), ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ರಿಂಕು ಸಿಂಗ್, ಸೂರ್ಯಾಂಶ್ ಶೆಡ್ಗೆ, ಶಹಬಾಝ್ ಅಹ್ಮದ್, ತನುಷ್ ಕೋಟ್ಯಾನ್, ಹರ್ಷ್ ದುಬೆ, ಹರ್ಷಿತ್ ರಾಣಾ, ಅರ್ಷದ್ ಖಾನ್.

ಶ್ರೀಲಂಕಾ ಎ (ಪ್ಲೇಯಿಂಗ್ XI): ಲಸಿತ್ ಕ್ರೂಸ್ಪುಲ್ಲೆ, ಸಿನೆತ್ ಜಯವರ್ದನ, ನಿಶಾನ್ ಮದುಷ್ಕ (ವಿಕೆಟ್ ಕೀಪರ್), ಪವನ್ ರತ್ನಾಯಕೆ (ನಾಯಕ), ನಿಪುನ್ ಧನಂಜಯ, ಜನಿತ್ ಲಿಯಾನಗೆ, ವನುಜಾ ಸಹನ್, ವಿಜಯಕಾಂತ್ ವ್ಯಾಸಕಾಂತ್, ರವಿಂದು ಫೆರ್ನಾಂಡೋ, ಲಹಿರು ಸಮರಕೋನ್, ಗರುಕ ಸಂಕೇತ್.

ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣು:

ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡವು ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದೆ. ಪಾಕಿಸ್ತಾನ ವಿರುದ್ಧದ ಸೋಲಿನ ಬಳಿಕ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಕಂಬ್ಯಾಕ್ ಮಾಡಿದೆ. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 28 ಸಿಕ್ಸರ್‌ಗಳ ನೆರವಿನಿಂದ 204 ರನ್ ಸಿಡಿಸಿ ವಿಶ್ವದ ಗಮನ ಸೆಳೆದಿದ್ದಾರೆ. ಇವರೊಂದಿಗೆ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಅವರನ್ನೊಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಭಾರತದ ಶಕ್ತಿಯಾಗಿದೆ. ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ, ಅರ್ಷದ್ ಖಾನ್ ಮತ್ತು ಪ್ರಿನ್ಸ್ ಯಾದವ್ ತಂಡಕ್ಕೆ ಆಸರೆಯಾಗಿದ್ದಾರೆ.

ಶ್ರೀಲಂಕಾ ಎ ತಂಡದ ಅಜೇಯ ಓಟ:

ಮತ್ತೊಂದೆಡೆ, ಪವನ್ ರತ್ನಾಯಕೆ ಸಾರಥ್ಯದ ಶ್ರೀಲಂಕಾ ಎ ತಂಡವು ‘ಎ’ ಗುಂಪಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು (ಅಫ್ಘಾನಿಸ್ತಾನ ಎ, ಹಾಂಗ್ ಕಾಂಗ್ ಮತ್ತು ಬಾಂಗ್ಲಾದೇಶ ಎ ವಿರುದ್ಧ) ಗೆದ್ದು ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಲಸಿತ್ ಕ್ರೂಸ್‌ಪುಲ್ಲೆ, ನಿಶಾನ್ ಮದುಷ್ಕಾ ಮತ್ತು ಜನಿತ್ ಲಿಯಾನಗೆ ಅವರಂತಹ ಅನುಭವಿ ಆಟಗಾರರು ಲಂಕಾ ತಂಡದಲ್ಲಿದ್ದು, ಭಾರತಕ್ಕೆ ಕಠಿಣ ಸವಾಲು ಒಡ್ಡಲು ಸಜ್ಜಾಗಿದ್ದಾರೆ.

ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ನವೆಂಬರ್ 29ರಂದು ನಡೆಯಲಿರುವ ಗ್ರ್ಯಾಂಡ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ನಾಳೆ (ನವೆಂಬರ್ 27) ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ್ ಎ ಮತ್ತು ಬಾಂಗ್ಲಾದೇಶ್ ಎ ತಂಡಗಳು ಸೆಣಸಾಡಲಿವೆ.

ಉಭಯ ತಂಡಗಳು:

ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ರಿಂಕು ಸಿಂಗ್, ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ಶಹಬಾಝ್ ಅಹ್ಮದ್, ತನುಷ್ ಕೋಟ್ಯಾನ್, ಹರ್ಷ್ ದುಬೆ, ಅರ್ಷದ್ ಖಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ವಿಪ್ರಾಜ್ ನಿಗಮ್.

ಇದನ್ನೂ ಓದಿ: IPL vs PSL: ಐಪಿಎಲ್ ಹರಾಜಿಗೆ ಹೆಸರು ನೀಡಿದ ಕರಾಚಿ ಕಿಂಗ್ಸ್ ತಂಡದ ನಾಯಕ!

ಶ್ರೀಲಂಕಾ ಎ ತಂಡ: ಪವನ್ ರತ್ನಾಯಕೆ (ನಾಯಕ), ಲಸಿತ್ ಕ್ರೂಸ್‌ಪುಲ್ಲೆ, ನಿಶಾನ್ ಮದುಷ್ಕಾ (ವಿಕೆಟ್ ಕೀಪರ್), ಸಿನೆತ್ ಜಯವರ್ಧನೆ, ನಿಪುನ್ ಧನಂಜಯ, ಜನಿತ್ ಲಿಯಾನಗೆ, ರವೀಂದು ಫರ್ನಾಂಡೋ, ಚಾಮಿಕ ಹೀನಟಿಗಾಲ, ವನುಜಾ ಸಹನ್, ಲಹಿರು ಸಮರಕೂನ್, ಶಾರುಜನ್ ಷಣ್ಮುಗನಾಥನ್ (ವಿಕೆಟ್ ಕೀಪರ್), ದುವಿಂದು ರಣತುಂಗ, ದುಲಾಜ್ ಸಮುದಿತ, ಗರುಕ ಸಂಕೇತ್, ವಿಜಯಕಾಂತ್ ವಿಯಾಸ್ಕಾಂತ್.

Published On - 3:11 pm, Thu, 26 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More