IPL 2025: ಕಾವ್ಯ ಮಾರನ್ ಸುಳ್ಳು ಹೇಳುತ್ತಿದ್ದಾರಾ? SRH ಆರೋಪಕ್ಕೆ ಸ್ಪಷ್ಟನೆ ನೀಡಿದ HCA

|

Updated on: Apr 01, 2025 | 6:32 PM

Sunrisers Hyderabad-HCA Dispute: ಸನ್‌ರೈಸರ್ಸ್ ಹೈದರಾಬಾದ್ ಮತ್ತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನಡುವಿನ ಟಿಕೆಟ್ ವಿವಾದ ತೀವ್ರಗೊಂಡಿದೆ. SRH, HCA ವಿರುದ್ಧ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿದೆ. ಆದರೆ HCA ಅಧ್ಯಕ್ಷರು ಈ ಆರೋಪಗಳನ್ನು ಸುಳ್ಳು ಎಂದು ನಿರಾಕರಿಸಿದ್ದಾರೆ. ಹೆಚ್ಚುವರಿ ಟಿಕೆಟ್‌ಗಳ ಬೇಡಿಕೆ ಮತ್ತು ಕ್ರೀಡಾಂಗಣದ ಬಾಡಿಗೆಯ ವಿಷಯದಲ್ಲಿ ಎರಡೂ ಕಡೆ ವಿಭಿನ್ನ ವಾದಗಳಿವೆ.

IPL 2025: ಕಾವ್ಯ ಮಾರನ್ ಸುಳ್ಳು ಹೇಳುತ್ತಿದ್ದಾರಾ? SRH ಆರೋಪಕ್ಕೆ ಸ್ಪಷ್ಟನೆ ನೀಡಿದ HCA
Kavya Maran
Follow us on

ಸನ್‌ರೈಸರ್ಸ್ ಹೈದರಾಬಾದ್‌ (SunRisers Hyderabad) ಹಾಗೂ ಹೈದರಾಬಾದ್‌ ಕ್ರಿಕೆಟ್ ಅಸೋಸಿಯೇಷನ್ ನಡುವಿನ ವಿವಾದ ಇದೀಗ ಮತ್ತೊಂದು ರೂಪ ಪಡೆದುಕೊಂಡಿದೆ. ಕಾವ್ಯಾ ಮಾರನ್ ಒಡೆತನದ ಎಸ್‌ಆರ್‌ಹೆಚ್ ಫ್ರಾಂಚೈಸಿ ಹೊರಿಸಿದ್ದ ಆರೋಪಗಳಿಗೆ ಇದೀಗ ಸ್ಪಷ್ಟನೆ ನೀಡಿರುವ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಎ. ಜಗನ್ ಮೋಹನ್ ರಾವ್ ಎಲ್ಲಾ ಆರೋಪಗಳನ್ನು ಸುಳ್ಳು ಎಂದಿದ್ದಾರೆ. ಎಚ್‌ಸಿಎ ಅಧ್ಯಕ್ಷರ ವಿರುದ್ಧ ಎಸ್‌ಆರ್‌ಹೆಚ್ ಅಧಿಕಾರಿಗಳು ಸುಳ್ಳು ಆರೋಪಗಳನ್ನು ಮಾಡುವುದು ಸೂಕ್ತವಲ್ಲ. ಎಲ್ಲಾ ಎಸ್‌ಆರ್‌ಹೆಚ್ (HCA) ಅಧಿಕಾರಿಗಳು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಕ್ತ ಮನಸ್ಸಿನಿಂದ ಮುಂದೆ ಬರಬೇಕೆಂದು ನಾವು ವಿನಂತಿಸುತ್ತೇವೆ’ ಎಂದು ಅವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಟಿಕೆಟ್‌ಗಳಿಗಾಗಿ ಬೇಡಿಕೆ

ವಾಸ್ತವವಾಗಿ ಕಾವ್ಯ ಮಾರನ್ ಒಡೆತನದ ಎಸ್​ಆರ್​ಹೆಚ್ ಫ್ರಾಂಚೈಸಿ, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳನ್ನು ಹೊರಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​ನ ಉನ್ನತ ಅಧಿಕಾರಿಗಳು ಉಚಿತ ಟಿಕೆಟ್‌ಗಳಿಗಾಗಿ ಎಸ್​​ಆರ್​ಹೆಚ್ ಫ್ರಾಂಚೈಸಿಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಫ್ರಾಂಚೈಸಿಯ ಅಸಮಾಧಾನಕ್ಕೆ ಕಾರಣವಾಗಿದ್ದು, ಇದೀಗ ಎಸ್​ಆರ್​ಹೆಚ್ ತಂಡ ಉಳಿದಿರುವ ತನ್ನ ತವರು ಪಂದ್ಯಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿತ್ತು.

HCA ನೀಡಿದ ಸ್ಪಷ್ಟನೆ ಏನು?

ಇದೀಗ ಈ ಆರೋಪಗಳಿಗೆ ಸ್ಪಷ್ಟನೆಯಾಗಿ ಪತ್ರಿಕಾ ಪ್ರಕಣೆಯನ್ನು ಹೊರಡಿಸಿರುವ ಹೈದರಾಬಾದ್‌ ಕ್ರಿಕೆಟ್ ಅಸೋಸಿಯೇಷನ್, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಸುಳ್ಳು ಹೇಳುತ್ತಿದೆ ಎಂಬುದನ್ನು ಉಲ್ಲೇಖಿಸಿದೆ. ಎಚ್‌ಸಿಎ ಅಧ್ಯಕ್ಷ ಎ. ಜಗನ್ ಮೋಹನ್ ರಾವ್ ಅವರು ಪ್ರತಿ ಪಂದ್ಯಕ್ಕೆ ವೈಯಕ್ತಿಕವಾಗಿ 3900 ಟಿಕೆಟ್‌ಗಳನ್ನು ಹೆಚ್ಚುವರಿಯಾಗಿ ಬೇಡಿಕೆ ಇಟ್ಟಿಲ್ಲ ಎಂದು ಅಪೆಕ್ಸ್ ಕೌನ್ಸಿಲ್ ಸ್ಪಷ್ಟಪಡಿಸುತ್ತದೆ. ಫೆಬ್ರವರಿ 19, 2025 ರಂದು ನಡೆದ ಸಭೆಯಲ್ಲಿ, ಅಧ್ಯಕ್ಷರು ಕ್ಲಬ್ ಕಾರ್ಯದರ್ಶಿಗಳಿಗೆ ಟಿಕೆಟ್‌ಗಳನ್ನು ಲಭ್ಯವಾಗುವಂತೆ ಪ್ರಸ್ತಾಪಿಸಿದ್ದರು. ಎಚ್‌ಸಿಎ ಅಧ್ಯಕ್ಷರ ವಿರುದ್ಧ ಎಸ್‌ಆರ್‌ಹೆಚ್ ಅಧಿಕಾರಿಗಳು ಸುಳ್ಳು ಆರೋಪಗಳನ್ನು ಮಾಡುವುದು ಸೂಕ್ತವಲ್ಲ. ಎಲ್ಲಾ ಎಸ್‌ಆರ್‌ಹೆಚ್ ಅಧಿಕಾರಿಗಳು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಕ್ತ ಮನಸ್ಸಿನಿಂದ ಮುಂದೆ ಬರಬೇಕೆಂದು ನಾವು ವಿನಂತಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ
ಹೈದರಾಬಾದ್‌ಗೆ ಪಾಠ ಕಲಿಸಿದ ಪೂರನ್-ಮಾರ್ಷ್
ಅತಿ ವೇಗದ ಅರ್ಧಶತಕ ಸಿಡಿಸಿದ ನಿಕೋಲಸ್ ಪೂರನ್
ಬಲಿಷ್ಠ ಹೈದರಾಬಾದ್​ಗೆ ಸೋಲಿನ ಶಾಕ್ ನೀಡಿದ ಲಕ್ನೋ
ತನ್ನದೇ ದಾಖಲೆ ಮುರಿಯುವುದನ್ನು ಮರೆತ ಹೈದರಾಬಾದ್‌

IPL 2025: ಹೈದರಾಬಾದ್​ ಬ್ಯಾಟರ್​ಗಳ ಅಹಂ ಮುರಿದ ಲಕ್ನೋ

ವಿವಾದ ಹೇಗೆ ಆರಂಭವಾಯಿತು?

ವಾಸ್ತವವಾಗಿ, ಮಾರ್ಚ್ 27 ರಂದು ನಡೆದಿದ್ದ SRH ಮತ್ತು LSG ನಡುವಿನ ಪಂದ್ಯದ ಸಮಯದಲ್ಲಿ HCA ಪ್ರತಿನಿಧಿಗಳು F3 ಬಾಕ್ಸ್​ನಲ್ಲಿ ಹೆಚ್ಚುವರಿಯಾಗಿ 20 ಟಿಕೆಟ್‌ಗಳನ್ನು ಕೇಳಿದ್ದರು. ಆದರೆ ಹೆಚ್ಚುವರಿ ಟಿಕೆಟ್‌ಗಳನ್ನು ನೀಡಲು ಫ್ರಾಂಚೈಸಿ ಒಪ್ಪದಿದ್ದಾಗ ಈ ವಿವಾದ ಹುಟ್ಟಿಕೊಂಡಿತ್ತು. ಐಪಿಎಲ್ ಸಮಯದಲ್ಲಿ ಕ್ರೀಡಾಂಗಣದ ಬಾಡಿಗೆಯನ್ನು ತಾವು ಪಾವತಿಸುತ್ತೇವೆ ಮತ್ತು ಕ್ರೀಡಾಂಗಣದ ಮೇಲೆ ಹಕ್ಕುಗಳನ್ನು ಹೊಂದಿದ್ದೇವೆ ಹೀಗಿರುವಾಗ ಹೆಚ್ಚುವರಿ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂಬುದು ಫ್ರಾಂಚೈಸಿಯ ವಾದವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ