ಇತಿಹಾಸ ನಿರ್ಮಿಸಿದ ಎಸ್ಆರ್ಹೆಚ್ಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎಷ್ಟನೇ ಸ್ಥಾನ?: ಇಲ್ಲಿದೆ ಐಪಿಎಲ್ 2024 ಅಂಕ ಪಟ್ಟಿ
IPL 2024 Points Table: ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2024 ರಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಒಂದು ಸೋಲು- ಒಂದು ಜಯ ಕಂಡು 2 ಪಾಯಿಂಟ್ಸ್ ಪಡೆದು ಮೂರನೇ ಸ್ಥಾನಕ್ಕೇರಿದೆ. ಇವರ ನೆಟ್ ರನ್ರೇಟ್ +0.675 ಆಗಿದೆ. ಇವರು ಮುಂಬೈ ಇಂಡಿಯನ್ಸ್ ವಿರುದ್ಧ ಇತಿಹಾಸ ನಿರ್ಮಿಸಿ ಜಯ ಸಾಧಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಟೂರ್ನಿ ಆರಂಭವಾಗಿ ಒಂದು ವಾರ ಆಗುತ್ತಿದ್ದು, ಈವರೆಗೆ ಒಟ್ಟು ಎಂಟು ಪಂದ್ಯಗಳು ನಡೆದಿವೆ. ಬುಧವಾರ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 31 ರನ್ಗಳ ಭರ್ಜರಿ ಜಯ ಸಾಧಿಸಿತು. ಇತಿಹಾಸದ ಪುಟ ಸೇರಿದ ಈ ಪಂದ್ಯದಲ್ಲಿ ಹೈದರಾಬಾದ್ ದಾಖಲೆಯ 277 ರನ್ ಗಳಿಸಿದರೆ, ಟಾರ್ಗೆಟ್ ಬೆನ್ನಟ್ಟಿದ ಮುಂಬೈ 246 ರನ್ ಪೇರಿಸಿ ಸೋತಿತು. ಇಂದು ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜೈಪುರದಲ್ಲಿ ಹೈವೋಲ್ಟೇಜ್ ಆಯೋಜಿಸಲಾಗಿದೆ. ಇದೀಗ ಐಪಿಎಲ್ 2024 ಪಾಯಿಂಟ್ಸ್ ಟೇಬಲ್ ಹೇಗಿದೆ ನೋಡೋಣ.
- ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಇವರು ಆಡಿರುವ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಜಯ ಸಾಧಿಸಿ ನಾಲ್ಕು ಅಂಕ ಪಡೆದು +1.979 ರನ್ರೇಟ್ ಹೊಂದಿದೆ.
- ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ದೊಡ್ಡ ಅಂತರದ ಜಯ ಸಾಧಿಸಿ ಎರಡು ಅಂಕ ಪಡೆದು +1.000 ರನ್ರೇಟ್ ಹೊಂದಿದೆ.
- ಇನ್ನು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಆಡಿದ ಎರಡು ಪಂದ್ಯಗಳಲ್ಲಿ ಒಂದು ಸೋಲು- ಒಂದು ಜಯ ಕಂಡು 2 ಪಾಯಿಂಟ್ಸ್ ಪಡೆದು ಮೂರನೇ ಸ್ಥಾನಕ್ಕೇರಿದೆ. ಇವರ ನೆಟ್ ರನ್ರೇಟ್ +0.675 ಆಗಿದೆ.
- ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ 2 ಪಾಯಿಂಟ್ಸ್ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ +0.200 ಆಗಿದೆ.
- ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಆಡಿದ ಎರಡು ಪಂದ್ಯದಲ್ಲಿ ಒಂದು ಜಯ, ಒಂದು ಸೋಲು ಕಂಡು 2 ಪಾಯಿಂಟ್ಸ್ ಪಡೆದು ಐದನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ +0.025 ಆಗಿದೆ.
- ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದನೇ ಸ್ಥಾನಕ್ಕೆ ಜಿಗಿದಿದೆ. ಆಡಿದ 2 ಪಂದ್ಯದಲ್ಲಿ ಒಂದು ಸೋಲು, ಒಂದು ಜಯ ಕಂಡು 2 ಅಂಕ ಪಡೆದು ಆರನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -0.180 ಆಗಿದೆ.
- ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಆಡಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಜಯ-ಮತ್ತೊಂದರಲ್ಲಿ ಸೋಲು ಕಂಡು 2 ಪಾಯಿಂಟ್ಸ್ ಪಡೆದು ಏಳನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -1.425 ಆಗಿದೆ.
- ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಎಂಟನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -0.455 ಆಗಿದೆ.
- ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಆಡಿದ ಎರಡೂ ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಒಂಬತ್ತನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -0.925 ಆಗಿದೆ.
- ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಖಾತೆ ತೆರೆಯದೆ ಹತ್ತನೇ ಸ್ಥಾನದಲ್ಲಿದೆ. ಇವರ ನೆಟ್ ರನ್ರೇಟ್ -1.000 ಆಗಿದೆ.
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ, ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸೆನ್ ಅಗ್ರಸ್ಥಾನದಲ್ಲಿದ್ದಾರೆ. ಇವರು ಆಡಿರುವ ಎರಡು ಪಂದ್ಯಗಳಲ್ಲಿ 143 ರನ್ ಕಲೆಹಾಕಿದ್ದಾರೆ. ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಆಡಿರುವ ಎರಡು ಪಂದ್ಯಗಳಲ್ಲಿ ಒಟ್ಟು 98 ರನ್ ಗಳಿಸಿದ್ದಾರೆ. ಹೈದರಾಬಾದ್ ತಂಡದ ಮತ್ತೋರ್ವ ಬ್ಯಾಟರ್ ಅಭಿಷೇಕ್ ಶರ್ಮಾ ಆಡಿರುವ ಎರಡು ಪಂದ್ಯಗಳಿಂದ 95 ರನ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
IPL 2024: 31 ರನ್ಗಳಿಂದ ಗೆದ್ದ ಹೈದರಾಬಾದ್; ಮುಂಬೈಗೆ ಸತತ 2ನೇ ಸೋಲು..!
ಪರ್ಪಲ್-ಕ್ಯಾಪ್ ಪಟ್ಟಿಯಲ್ಲಿ, ಸಿಎಸ್ಕೆ ತಂಡದ ಮುಸ್ತಫಿಜುರ್ ರೆಹಮಾನ್ ಒಟ್ಟು 6 ವಿಕೆಟ್ ಪಡೆದು ಅಗ್ರ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಅವರ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಹರ್ಪ್ರೀತ್ ಬ್ರಾರ್ ಇದ್ದು, ಇವರು ಆಡಿರುವ ಎರಡು ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದಾರೆ. ಡೆತ್-ಓವರ್‌ಗಳ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಮೂರನೇ ಸ್ಥಾನದಲ್ಲಿದ್ದು, ಇವರು ಕೂಡ 3 ವಿಕೆಟ್ ಕಿತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
