ಅಪ್ಪನಿಂದ ತಪ್ಪಿಸಿಕೊಳ್ಳಲು ಗೆಳೆಯನ ಜತೆ ಬಾಲ್ಕನಿಯಿಂದ ಹಾರಿದ ಯುವತಿ ಸಾವು
ಗೆಳೆಯನೊಂದಿಗೆ ಎಂಟನೇ ಮಹಡಿಯ ಬಾಲ್ಕನಿಯಿಂದ ಇಳಿಯಲು ಹೋಗಿ ಕಾಲು ಜಾರಿ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಮೃತ ಯುವತಿಯನ್ನು 22 ವರ್ಷದ ಸಕೀನಾ ಬೇಗಂ ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ವಾರ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆ ಫ್ಲ್ಯಾಟ್ನಲ್ಲಿ ಯಾರೂ ವಾಸಿಸುತ್ತಿರಲಿಲ್ಲ ಅದು ಯುವತಿಗೆ ತಂದೆಗೆ ಸೇರಿದ್ದ ಫ್ಲ್ಯಾಟ್ ಆಗಿತ್ತು.

ಹೈದರಾಬಾದ್, ಡಿಸೆಂಬರ್ 22: ಅಪ್ಪ(Father)ನಿಂದ ತಪ್ಪಿಸಿಕೊಳ್ಳಲು ಹೋಗಿ ಯುವತಿ ಬಾಲ್ಕನಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಗೆಳೆಯನ ಜತೆ ತನ್ನ ಫ್ಲಾಟ್ನಲ್ಲಿ ಯುವತಿ ಇದ್ದಳು. ಏಕಾಏಕಿ ತಂದೆ ಫ್ಲಾಟ್‌ಗೆ ಬಂದಿದ್ದರು. ಬಾಗಿಲು ತಟ್ಟಿದಾಗ ಇಬ್ಬರೂ ಗಾಬರಿಗೊಂಡರು. ಕೂಡಲೇ ಗೆಳೆಯನ ಜತೆ ಪರಾರಿಯಾಗಲು ಬಾಲ್ಕನಿಯಿಂದ ಕೆಳಗೆ ಹಾರಿದ್ದಾಳೆ.
ಮೃತ ಯುವತಿಯನ್ನು 22 ವರ್ಷದ ಸಕೀನಾ ಬೇಗಂ ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ವಾರ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆ ಫ್ಲ್ಯಾಟ್ನಲ್ಲಿ ಯಾರೂ ವಾಸಿಸುತ್ತಿರಲಿಲ್ಲ ಅದು ಯುವತಿಗೆ ತಂದೆಗೆ ಸೇರಿದ್ದ ಫ್ಲ್ಯಾಟ್ ಆಗಿತ್ತು.
ಆ ಫ್ಲ್ಯಾಟ್ನಲ್ಲಿ ಯಾರೂ ಇಲ್ಲದ ಕಾರಣ ಸಕೀನಾ ಅಪ್ಪನ ಬಳಿ ಇದ್ದ ಕೀ ತೆಗೆದುಕೊಂಡು ತನ್ನ ಗೆಳೆಯನ ಜತೆ ಫ್ಲ್ಯಾಟ್ಗೆ ಬಂದಿದ್ದರು. ಆದರೆ, ಅವರು ಒಳಗೆ ಇದ್ದಾಗ ಆಕೆಯ ತಂದೆ ಫ್ಲಾಟ್‌ಗೆ ಬಂದಿದ್ದರು.ಫ್ಲಾಟ್ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ತಂದೆ ಒಳಗೆ ಹೋಗಲು ಪ್ರಯತ್ನಿಸಿದರು. ಬಾಗಿಲಲ್ಲಿ ಯಾರಿದ್ದಾರೆಂದು ಅರಿತ ಯುವತಿ ಮತ್ತು ಆಕೆಯ ಗೆಳೆಯ ಭಯಭೀತರಾದರು.
ಮತ್ತಷ್ಟು ಓದಿ: Video: ಮಗಳು ತನ್ನ ಪ್ರೀತಿ ವಿಷ್ಯ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ತಂದೆ
ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇಬ್ಬರೂ ಎಂಟನೇ ಮಹಡಿಯ ಬಾಲ್ಕನಿಯಿಂದ ಇಳಿಯಲು ಪ್ರಯತ್ನಿಸಿದರು. ಆಕೆಯ ಗೆಳೆಯ ಆಕೆಯ ಕೈ ಹಿಡಿದಿದ್ದ ಸಕೀನಾ ಏಳನೇ ಮಹಡಿಗೆ ಇಳಿಯಲು ಪ್ರಯತ್ನಿಸಿದರು. ದುರಂತವಶಾತ್, ಅವರು ಎತ್ತರದಿಂದ ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯ ನಂತರ, ಪೊಲೀಸರು ಸಕೀನಾ ಗೆಳಯ ಅಲಿ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




