AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Super Smash 2022: ಟಿ20 ಪಂದ್ಯದಲ್ಲಿ ಒಟ್ಟು 426 ರನ್: 2 ರನ್​ಗಳ ರೋಚಕ ಜಯ..!

Super Smash 2022: 215 ರನ್​ಗಳ ಬೃಹತ್ ಗುರಿ ಪಡೆದ ಸೆಂಟ್ರಲ್ ಡಿಸ್ಟಿಕ್ಸ್​​ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಗ್ರೇಗ್ ಹೇ ಕೇವಲ 7 ರನ್​ಗಳಿಸಿ ನಿರ್ಗಮಿಸಿದರು.

Super Smash 2022: ಟಿ20 ಪಂದ್ಯದಲ್ಲಿ ಒಟ್ಟು 426 ರನ್: 2 ರನ್​ಗಳ ರೋಚಕ ಜಯ..!
Wellington team
TV9 Web
| Edited By: |

Updated on:Dec 27, 2022 | 3:28 PM

Share

Super Smash 2022: ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಟಿ20 ಲೀಗ್​ನ 4ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸೆಂಟ್ರಲ್ ಡಿಸ್ಟ್ರಿಕ್ಸ್ ಹಾಗೂ ವೆಲ್ಲಿಂಗ್ಟನ್ ತಂಡಗಳು ಮುಖಾಮುಖಿಯಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೆಂಟ್ರಲ್ ತಂಡದ ನಾಯಕ ಟಾಮ್ ಬ್ರೂಸ್ ಬೌಲಿಂಗ್ ಆಯ್ದುಕೊಂಡರು. ಆದರೆ ಪವರ್​ಪ್ಲೇನಲ್ಲೇ ನಾಯಕನ ನಿರ್ಧಾರ ತಪ್ಪು ಎಂಬಂತೆ ಫಿನ್ ಅಲೆನ್ ಹಾಗೂ ನಿಕ್ ಕೆಲ್ಲಿ ಬ್ಯಾಟ್ ಬೀಸಿದ್ದರು. ಏಕೆಂದರೆ ಮೊದಲ ವಿಕೆಟ್​ಗೆ ಈ ಜೋಡಿ 5.5 ಓವರ್​ಗಳಲ್ಲಿ 80 ರನ್​ ಚಚ್ಚಿದ್ದರು.

ಈ ಹಂತದಲ್ಲಿ 20 ಎಸೆತಗಳಲ್ಲಿ 4 ಸಿಕ್ಸ್​ ಹಾಗೂ 1 ಫೋರ್​ನೊಂದಿಗೆ 33 ರನ್ ಬಾರಿಸಿದ್ದ ಫಿನ್ ಅಲೆನ್ ಔಟಾದರು. ಇದಾಗ್ಯೂ ಸಿಡಿಲಬ್ಬರ ಮುಂದುವರೆಸಿದ ನಿಕ್ ಕೆಲ್ಲಿ 25 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 58 ರನ್ ಬಾರಿಸಿದರು. ಪರಿಣಾಮ 8 ಓವರ್​ ವೇಳೆ ವೆಲ್ಲಿಂಗ್ಟನ್ ತಂಡದ ಸ್ಕೋರ್ 100ರ ಗಡಿದಾಡಿತು. ಈ ಹಂತದಲ್ಲಿಟಾಮ್ ಬ್ರೂಸ್ ಎಸೆತದಲ್ಲಿ ಕೆಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ರಚಿನ್ ರವೀಂದ್ರ (16), ಟ್ರಾಯ್ ಜಾನ್ಸನ್ (35) ಹಾಗೂ ವ್ಯಾನ್ ಬ್ರೀಕ್ (21) ಉಪಯುಕ್ತ ಕಾಣಿಕೆ ನೀಡಿದರು. ಅದರಂತೆ ನಿದಿಗತ 20 ಓವರ್​ಗಳಲ್ಲಿ ವೆಲ್ಲಿಂಗ್ಟನ್ ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 214 ಕ್ಕೆ ಬಂದು ನಿಂತಿತು.

ಇದನ್ನೂ ಓದಿ
Image
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
Image
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
Image
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
Image
IPL 2023 RCB Team: RCB ಹೊಸ ತಂಡ ಹೀಗಿದೆ

215 ರನ್​ಗಳ ಬೃಹತ್ ಗುರಿ ಪಡೆದ ಸೆಂಟ್ರಲ್ ಡಿಸ್ಟಿಕ್ಸ್​​ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಗ್ರೇಗ್ ಹೇ ಕೇವಲ 7 ರನ್​ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ 29 ರನ್​ ಬಾರಿಸಿದ ಬೆನ್ ಸ್ಮಿತ್ ಕೂಡ ಪವರ್​ಪ್ಲೇ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಹಿರಿಯ ಆಟಗಾರ ರಾಸ್ ಟೇಲರ್ 5 ರನ್​ಗಳಿಸಿ ಇನಿಂಗ್ಸ್​ ಅಂತ್ಯಗೊಳಿಸಿದರು.ಇದಾಗ್ಯೂ ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಡೇನ್ ಕ್ಲೆವರ್ 32 ಎಸೆತಗಳಲ್ಲಿ 44 ರನ್​ ಬಾರಿಸಿದರು. ಕ್ಲೆವರ್​ಗೆ ಉತ್ತಮ ಸಾಥ್ ನೀಡಿದ ಜೋಶ್ ಕ್ಲಾರ್ಕ್​​ಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ವೆಲ್ಲಿಂಗ್ಟನ್ ಬೌಲರ್​ಗಳನ್ನು ಹಿಗ್ಗಾಮುಗ್ಗ ದಂಡಿಸಿದ ಕ್ಲಾರ್ಕ್​ಸನ್ ಪಂದ್ಯದ ಗತಿಯನ್ನೇ ಬದಲಿಸುವ ಸೂಚನೆ ನೀಡಿದರು.

ಅಂತಿಮ ಹಂತದಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 7 ಆಕರ್ಷಕ ಫೋರ್ ಬಾರಿಸುವ ಮೂಲಕ ಸೆಂಟ್ರಲ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. 24 ಎಸೆತಗಳಲ್ಲಿ 55 ರನ್​ ಬಾರಿಸಿದ ಜೋಶ್ ಕ್ಲಾರ್ಕ್​ಸನ್ ಅಂತಿಮ ಹಂತದಲ್ಲಿ ಎಡವಿ ಔಟಾದರು. ಪರಿಣಾಮ ಕೊನೆಯ ಓವರ್​ನಲ್ಲಿ ಸೆಂಟ್ರಲ್ ತಂಡಕ್ಕೆ ಗೆಲ್ಲಲು 16 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಟಾಮ್ ಬ್ರೂಸ್ (43) ರನೌಟ್ ಆಗಿದ್ದು ಸೆಂಟ್ರಲ್ ತಂಡಕ್ಕೆ ಪಾಲಿಗೆ ದುಬಾರಿಯಾಯಿತು. ಅಂತಿಮವಾಗಿ ಸೆಂಟ್ರಲ್ ಡಿಸ್ಟಿಕ್ಸ್​ ತಂಡವು 2 ರನ್​ಗಳಿಂದ ವಿರೋಚಿತವಾಗಿ ಸೋಲೋಪ್ಪಿಕೊಳ್ಳಬೇಕಾಯಿತು. ಉಭಯ ತಂಡಗಳಿಂದ ಒಟ್ಟು 426 ರನ್​ ಮೂಡಿಬಂದಿರುವ ಈ ಪಂದ್ಯವು ಸೂಪರ್ ಸ್ಮ್ಯಾಶ್ ಲೀಗ್​ನ ಅತ್ಯಂತ ರೋಚಕ ಪಂದ್ಯವಾಗಿ ಗುರುತಿಸಿಕೊಂಡಿದೆ.

ಸೆಂಟ್ರಲ್ ಡಿಸ್ಟಿಕ್ಸ್ ಪ್ಲೇಯಿಂಗ್ 11:

ಬೆನ್ ಸ್ಮಿತ್ , ಗ್ರೆಗ್ ಹೇ , ಡೇನ್ ಕ್ಲೆವರ್ (ವಿಕೆಟ್ ಕೀಪರ್) , ರಾಸ್ ಟೇಲರ್ , ಟಾಮ್ ಬ್ರೂಸ್ (ನಾಯಕ) , ಜೋಶ್ ಕ್ಲಾರ್ಕ್​ಸನ್ , ಡೌಗ್ ಬ್ರೇಸ್ವೆಲ್ , ಬ್ರೆಟ್ ಜಾನ್ಸನ್ , ಜೇಡನ್ ಲೆನಾಕ್ಸ್ , ರೇಮಂಡ್ ಟೂಲ್ , ಬ್ರೆಟ್ ರಾಂಡೆಲ್. ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…

ವೆಲ್ಲಿಂಗ್ಟನ್ ಪ್ಲೇಯಿಂಗ್ 11:

ಫಿನ್ ಅಲೆನ್ , ನಿಕ್ ಕೆಲ್ಲಿ , ರಚಿನ್ ರವೀಂದ್ರ , ಟ್ರಾಯ್ ಜಾನ್ಸನ್ , ನಾಥನ್ ಸ್ಮಿತ್ , ಟಿಮ್ ರಾಬಿನ್ಸನ್ , ಕ್ಯಾಲಮ್ ಮೆಕ್ಲಾಚ್ಲಾನ್ (ವಿಕೆಟ್ ಕೀಪರ್) , ಆಡಮ್ ಮಿಲ್ನ್ , ಲೋಗನ್ ವ್ಯಾನ್ ಬೀಕ್ , ಪೀಟರ್ ಯಂಗ್​ಹಸ್ಬೆಂಡ್ (ನಾಯಕ) , ಮೈಕೆಲ್ ಸ್ನೆಡೆನ್.

Published On - 3:20 pm, Tue, 27 December 22

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ