AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ಸರಣಿಗೆ ಸೂರ್ಯಕುಮಾರ್ ಯಾದವ್ ಡೌಟ್

India vs Bangladesh: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿಯು ಆಗಸ್ಟ್ 17 ರಿಂದ ಶುರುವಾಗಲಿದೆ. ಆರು ಪಂದ್ಯಗಳ ಈ ಸರಣಿಯಲ್ಲಿ ಮೊದಲಿಗೆ ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಮೂರು ಮ್ಯಾಚ್​ಗಳ ಟಿ20 ಸರಣಿ ನಡೆಯಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅಲಭ್ಯರಾಗುವ ಸಾಧ್ಯತೆಯಿದೆ.

ಮುಂದಿನ ಸರಣಿಗೆ ಸೂರ್ಯಕುಮಾರ್ ಯಾದವ್ ಡೌಟ್
Suryakumar Yadav
ಝಾಹಿರ್ ಯೂಸುಫ್
|

Updated on: Jun 28, 2025 | 10:53 AM

Share

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧ ಟಿ20 ಸರಣಿ ಆಡಲಿದೆ. ಬಾಂಗ್ಲಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳುವುದು ಅನುಮಾನ. ಏಕೆಂದರೆ ಇತ್ತೀಚೆಗಷ್ಟೇ ಸೂರ್ಯಕುಮಾರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು ಮುಂದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಸೂರ್ಯಕುಮಾರ್ ಯಾದವ್ ಕಳೆದ ಕೆಲ ತಿಂಗಳಿಂದ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಇತ್ತೀಚೆಗೆ ಜರ್ಮನಿಯ ಮ್ಯೂನಿಚ್‌ನಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದೀಗ ಸರ್ಜರಿಗೆ ಒಳಗಾಗಿರುವ ಕಾರಣ ಅವರಿಗೆ ವೈದ್ಯರು ಎರಡು ತಿಂಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಆಗಸ್ಟ್​ನಲ್ಲಿ ನಡೆಯಲಿರುವ ಬಾಂಗ್ಲಾದೇಶ್ ವಿರುದ್ಧದ ಸರಣಿಗೆ ಸೂರ್ಯಕುಮಾರ್ ಯಾದವ್ ಅಲಭ್ಯರಾಗುವ ಸಾಧ್ಯತೆಯಿದೆ.

ಟೀಮ್ ಇಂಡಿಯಾ ನಾಯಕ ಯಾರು?

ಸೂರ್ಯಕುಮಾರ್ ಯಾದವ್ ಟಿ20 ಸರಣಿಯಿಂದ ಹೊರಗುಳಿದರೆ, ಭಾರತ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಇಲ್ಲಿ ಉಪನಾಯಕನಾಗಿ ಶುಭ್​ಮನ್ ಗಿಲ್ ಇದ್ದಾರೆ. ಆದರೆ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಟಿ20 ಸರಣಿ ಆಡಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ದೀರ್ಘಾವಧಿಯ ಸರಣಿಯ ಬಳಿಕ ಭಾರತ ಟೆಸ್ಟ್ ತಂಡದ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.

ಹೀಗಾಗಿ ಶುಭ್​ಮನ್ ಗಿಲ್ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು. ಗಿಲ್ ಹೊರಗುಳಿದರೆ ಭಾರತ ತಂಡವನ್ನು ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಅದರಂತೆ ಬಾಂಗ್ಲಾದೇಶ್ ವಿರುದ್ಧದ ಸರಣಿಗೆ ಸೂರ್ಯಕುಮಾರ್ ಯಾದವ್ ಹಾಗೂ ಶುಭ್​ಮನ್ ಗಿಲ್ ಅಲಭ್ಯರಾದರೆ, ಅಕ್ಷರ್ ಪಟೇಲ್ ಕ್ಯಾಪ್ಟನ್ ಪಟ್ಟ ಅಲಂಕರಿಸುವುದನ್ನು ಎದುರು ನೋಡಬಹುದು.

ಭಾರತ ಮತ್ತು ಬಾಂಗ್ಲಾದೇಶ್ ಸರಣಿ:

ಭಾರತ ಮತ್ತು ಬಾಂಗ್ಲಾದೇಶ್ ನಡುವೆ 6 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಮೊದಲು ಏಕದಿನ ಪಂದ್ಯಗಳನ್ನಾಡಿದರೆ, ಆ ಬಳಿಕ ಮೂರು ಮ್ಯಾಚ್​ಗಳ ಟಿ20 ಸರಣಿ ನಡೆಯಲಿದೆ. ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

IND vs BAN ಏಕದಿನ ಸರಣಿ ವೇಳಾಪಟ್ಟಿ:

  1. ಮೊದಲ ಏಕದಿನ ಪಂದ್ಯ – ಆಗಸ್ಟ್ 17, ಭಾನುವಾರ – SBNCS, ಮಿರ್ಪುರ್
  2. ಎರಡನೇ ಏಕದಿನ ಪಂದ್ಯ – 20 ಆಗಸ್ಟ್, ಬುಧವಾರ – SBNCS, ಮಿರ್ಪುರ್
  3. ಮೂರನೇ ಏಕದಿನ ಪಂದ್ಯ – ಆಗಸ್ಟ್ 23, ಶನಿವಾರ – BSSFLMRCS, ಚಟ್ಟೋಗ್ರಾಮ್.

ಇದನ್ನೂ ಓದಿ: 6,6,6,6,6,6,6,6: ಪೂರನ್ ಪವರ್​ಫುಲ್ ಶತಕ

IND vs BAN ಟಿ20 ಸರಣಿ ವೇಳಾಪಟ್ಟಿ:

  1. ಮೊದಲ ಟಿ20 ಪಂದ್ಯ – ಆಗಸ್ಟ್ 26, ಮಂಗಳವಾರ – BSSFLMRCS, ಚಟ್ಟೋಗ್ರಾಮ್
  2. ಎರಡನೇ ಟಿ20 ಪಂದ್ಯ – ಆಗಸ್ಟ್ 29, ಶುಕ್ರವಾರ – SBNCS, ಮಿರ್ಪುರ್
  3. ಮೂರನೇ ಟಿ20 ಪಂದ್ಯ – ಆಗಸ್ಟ್ 31, ಭಾನುವಾರ – SBNCS, ಮಿರ್ಪುರ್