IND vs PAK: ‘ಇಂತಹದ್ದನ್ನು ಎಂದಿಗೂ ನೋಡಿಲ್ಲ’: ಪೋಸ್ಟ್ ಮ್ಯಾಚ್​ನಲ್ಲಿ ಸೂರ್ಯಕುಮಾರ್ ಏನೆಲ್ಲ ಹೇಳಿದ್ರು ನೋಡಿ

Suryakumar Yadav Post Match Presentation Statement: ಏಷ್ಯಾಕಪ್ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿನ ನಂತರ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಾನು ಆಟವಾಡಲು ಮತ್ತು ವೀಕ್ಷಿಸಲು ಪ್ರಾರಂಭಿಸಿದಾಗಿನಿಂದ, ಗೆದ್ದ ತಂಡವು ಟ್ರೋಫಿ ಗೆಲ್ಲದಿರುವುದನ್ನು ನಾನು ಎಂದಿಗೂ ನೋಡಿಲ್ಲ ಎಂದು ಹೇಳಿದರು.

IND vs PAK: ‘ಇಂತಹದ್ದನ್ನು ಎಂದಿಗೂ ನೋಡಿಲ್ಲ’: ಪೋಸ್ಟ್ ಮ್ಯಾಚ್​ನಲ್ಲಿ ಸೂರ್ಯಕುಮಾರ್ ಏನೆಲ್ಲ ಹೇಳಿದ್ರು ನೋಡಿ
Suryakumar Yadav Ind Vs Pak Final
Updated By: Vinay Bhat

Updated on: Sep 29, 2025 | 9:15 AM

ಬೆಂಗಳೂರು (ಸೆ. 29): 2025 ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ (Indian Cricket Team) ಪಾಕಿಸ್ತಾನವನ್ನು ಸೋಲಿಸಿ ಮೂರನೇ ಬಾರಿಗೆ ಟೂರ್ನಿಯನ್ನು ಗೆದ್ದಿತು. ಆದಾಗ್ಯೂ, ಗೆಲುವಿನ ನಂತರದ ಘಟನೆಗಳು ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ನಖ್ವಿ ಪಾಕಿಸ್ತಾನದ ಗೃಹ ಸಚಿವರೂ ಆಗಿದ್ದಾರೆ ಮತ್ತು ಭಾರತದ ಬಗ್ಗೆ ಅನೇಕ ವಿರೋಧಿ ಹೇಳಿಕೆ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ.

ಈ ವಿವಾದದಿಂದಾಗಿ, ಟ್ರೋಫಿ ಪ್ರದಾನ ಅಪೂರ್ಣವಾಗಿತ್ತು, ಮತ್ತು ನಖ್ವಿ ವಿಜೇತ ತಂಡಕ್ಕೆ ಟ್ರೋಫಿ ನೀಡದೆ ಮೈದಾನದಿಂದ ನಿರ್ಗಮಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಅವರ ವೃತ್ತಿಜೀವನದಲ್ಲಿ ಪ್ರಶಸ್ತಿ ಗೆದ್ದರೂ ತಂಡವು ಟ್ರೋಫಿಯನ್ನು ಸ್ವೀಕರಿಸದಿರುವುದು ಇದೇ ಮೊದಲು.

ಪಾಕ್ ವಿರುದ್ಧದ ಗೆಲುವಿನ ನಂತರ ಸೂರ್ಯಕುಮಾರ್ ಏನು ಹೇಳಿದರು?

ಪಂದ್ಯದ ನಂತರ ಸೂರ್ಯ ಅವರು, ತಾನು ಆಟವಾಡಲು ಮತ್ತು ವೀಕ್ಷಿಸಲು ಪ್ರಾರಂಭಿಸಿದಾಗಿನಿಂದ, ಗೆದ್ದ ತಂಡವು ಟ್ರೋಫಿ ಗೆಲ್ಲದಿರುವುದನ್ನು ನಾನು ಎಂದಿಗೂ ನೋಡಿಲ್ಲ ಎಂದು ಹೇಳಿದರು. ಈ ಗೆಲುವು ಸುಲಭವಾಗಿರಲಿಲ್ಲ; ನಾವು ಪಂದ್ಯಾವಳಿಯಾದ್ಯಂತ ಶ್ರಮಿಸಿದ್ದೇವೆ, ಏಳು ಪಂದ್ಯಗಳನ್ನು ಆಡಿದ್ದೇವೆ ಮತ್ತು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ
ಪಂದ್ಯದ ಶುಲ್ಕವನ್ನು ಭಯೋತ್ಪಾದಕರಿಗೆ ದಾನ ಮಾಡಿದ ಪಾಕಿಸ್ತಾನ ಆಟಗಾರರು
ಮೈದಾನದಲ್ಲೂ ಭಾರತದ್ದೇ ಗೆಲುವು; ಸೂರ್ಯ ಪಡೆಗೆ ಮೋದಿ ಅಭಿನಂದನೆ
ಫೈನಲ್​ನಲ್ಲಿ ಸೋತು ದಿಕ್ಕು ತೋಚದವರಂತೆ ನಿಂತ ಪಾಕ್ ಆಟಗಾರರು
ಈ ಪಾಕಿಸ್ತಾನಿಗಳು ಬದಲಾಗಲ್ಲ!: ಮೈದಾನದಲ್ಲಿ ಕೆಟ್ಟದಾಗಿ ವರ್ತಿಸಿದ ಫರ್ಹಾನ್

ತಮ್ಮ ತಂಡದ ಆಟಗಾರರ ಕಡೆಗೆ ಬೆರಳು ತೋರಿಸುತ್ತಾ, ‘‘ಅವರು ನಮ್ಮ ನಿಜವಾದ ಟ್ರೋಫಿ’’ ಎಂದರೆ ಈ 14 ಆಟಗಾರರು ಮತ್ತು ನಮ್ಮ ಸಹಾಯಕ ಸಿಬ್ಬಂದಿ ನಿಜವಾದ ಟ್ರೋಫಿ ಎಂದು ಹೇಳಿದರು. ಅವರು ನಮ್ಮೊಂದಿಗೆ ಶಾಶ್ವತವಾಗಿ ಇರುವ ನೆನಪುಗಳು. ಆಟ ಮುಗಿದ ನಂತರ, ಚಾಂಪಿಯನ್‌ಗಳು ಮಾತ್ರ ನೆನಪಿನಲ್ಲಿ ಉಳಿಯುತ್ತಾರೆ, ಟ್ರೋಫಿಯ ಚಿತ್ರವಲ್ಲ ಎಂದರು.

IND vs PAK Asia Cup Final: ಪಂದ್ಯದ ಶುಲ್ಕವನ್ನು ಭಯೋತ್ಪಾದಕರಿಗೆ ದಾನ ಮಾಡಿದ ಪಾಕಿಸ್ತಾನ ಆಟಗಾರರು

ಸೂರ್ಯ ಮತ್ತು ತಿಲಕ್ ವರ್ಮಾ ಏಷ್ಯಾ ಕಪ್ ಟ್ರೋಫಿಯನ್ನು ಹಿಡಿದಿರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ತಮಾಷೆಯಾಗಿ ಮಾತನಡಿದ ಸೂರ್ಯ, “ನೀವು ಟ್ರೋಫಿಯನ್ನು ನೋಡಲಿಲ್ಲವೇ?. ತಂಡವು ವೇದಿಕೆಯ ಮೇಲೆ ಕುಳಿತು, ಮತ್ತು ಅಭಿಷೇಕ್ ಮತ್ತು ಶುಭ್​ಮನ್ ಗಿಲ್ ಈಗಾಗಲೇ ಟ್ರೋಫಿಯೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋವೇ ನಮ್ಮ ಗೆಲುವಿಗೆ ಪುರಾವೆಯಾಗಿದೆ” ಎಂದು ಹೇಳಿದರು (ಅಭಿಷೇಕ್-ಗಿಲ್ ತಮ್ಮ ಇನ್​ಸ್ಟಾದಲ್ಲಿ ಟ್ರೋಫಿ ಹಿಡಿದಿರುವ ಎಡಿಟೆಡ್ ಫೋಟೋ ಪೋಸ್ಟ್ ಮಾಡಿದ್ದಾರೆ).

ಬಿಸಿಸಿಐ ಈಗಾಗಲೇ ಎಸಿಸಿಗೆ ಇಮೇಲ್ ಮಾಡಿ ಆಟಗಾರರು ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆಯೇ ಎಂದು ಸೂರ್ಯ ಬಳಿ ಕೇಳಿದಾಗ, ಅಂತಹ ಯಾವುದೇ ಇಮೇಲ್ ಬಗ್ಗೆ ತನಗೆ ತಿಳಿದಿಲ್ಲ ಎಂದು ಶಾಂತವಾಗಿ ಉತ್ತರಿಸಿದರು. “ನಾವು ಮೈದಾನದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಯಾರೂ ನಮಗೆ ಸೂಚನೆ ನೀಡಿಲ್ಲ. ಹೇಳಿ, ಯಾರಾದರೂ ಟೂರ್ನಮೆಂಟ್ ಗೆದ್ದರೆ, ಅವರು ಟ್ರೋಫಿಗೆ ಅರ್ಹರಲ್ಲವೇ?” ಎಂದರು.

“ರಿಂಕು ಸಿಂಗ್ ಫೋರ್ ಹೊಡೆದರು ಮತ್ತು ಭಾರತ ಏಷ್ಯಾ ಕಪ್ ಗೆದ್ದಿತು. ನಂತರ ನಾವು ಸಂಭ್ರಮಿಸಲು ಪ್ರಾರಂಭಿಸಿದೆವು. ಮಧ್ಯದಲ್ಲಿ, ಚಾಂಪಿಯನ್ಸ್ ಚಿಹ್ನೆ ಬಂದು ಹೋಗುವುದನ್ನು ನಾನು ನೋಡಿದೆ. ಈರೀತಿಯದ್ದೆಲ್ಲ ಸಂಭವಿಸುತ್ತದೆ; ಇದು ಜೀವನದ ಒಂದು ಭಾಗ” ಎಂಬುದು ಸೂರ್ಯಕುಮಾರ್ ಮಾತಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ