Syed Mushtaq Ali Trophy 2021: ಪ್ರೀ ಕ್ವಾರ್ಟರ್ ಫೈನಲ್ಗೆ ಕರ್ನಾಟಕ: ನಾಕೌಟ್ ಹಂತದ ಪಂದ್ಯಗಳ ವೇಳಾಪಟ್ಟಿ
ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ ನವೆಂಬರ್ 16 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ವಿದರ್ಭ ವಿರುದ್ದ ಆಡಲಿದೆ. ಇದೇ ದಿನ ಮಧ್ಯಾಹ್ನ ಕರ್ನಾಟಕ ತಂಡವು ಸೌರಾಷ್ಟ್ರವನ್ನು ಎದುರಿಸಲಿದೆ.
ಸೈಯದ್ ಮುಷ್ತಾಕ್ ಅಲಿ (Syed Mushtaq Ali Trophy 2021) ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ನವೆಂಬರ್ 4 ರಿಂದ ಪ್ರಾರಂಭವಾದ ಟೂರ್ನಿಯಲ್ಲಿ, ಆರು ವಿವಿಧ ಗುಂಪುಗಳಲ್ಲಿ ಒಟ್ಟು 38 ತಂಡಗಳು ಸ್ಪರ್ಧಿಸಿದ್ದವು. ಲಕ್ನೋ, ಗೌವ್ಹಾಟಿ, ಬರೋಡಾ, ದೆಹಲಿ, ಹರಿಯಾಣ, ವಿಜಯವಾಡದಲ್ಲಿ ನಡೆದ ಈ ಪಂದ್ಯಗಳಿಂದ ಎಲೈಟ್ ಗುಂಪುಗಳ ಅಗ್ರ ಎರಡು ತಂಡಗಳು ಮತ್ತು ಪ್ಲೇಟ್ ಗುಂಪಿನಿಂದ ಒಂದು ತಂಡವು ನಾಕೌಟ್ ಹಂತಗಳಿಗೆ ಅರ್ಹತೆಗಿಟ್ಟಿಸಿಕೊಂಡಿದೆ.
ತಮಿಳುನಾಡು (ಎ ಗುಂಪಿನ ಅಗ್ರಸ್ಥಾನ), ಬಂಗಾಳ (ಗುಂಪು ಬಿ ಅಗ್ರಸ್ಥಾನ), ರಾಜಸ್ಥಾನ (ಗುಂಪಿನ ಸಿ ಅಗ್ರಸ್ಥಾನ), ಗುಜರಾತ್ (ಡಿ ಗುಂಪಿನ ಅಗ್ರಸ್ಥಾನ) ಮತ್ತು ಹೈದರಾಬಾದ್ (ಗುಂಪು ಇ ಅಗ್ರಸ್ಥಾನ) ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿವೆ. ಇನ್ನು ಮಹಾರಾಷ್ಟ್ರ (A2), ವಿದರ್ಭ (ಪ್ಲೇಟ್ ಟಾಪರ್), ಕರ್ನಾಟಕ (B2), ಸೌರಾಷ್ಟ್ರ (E2), ಹಿಮಾಚಲ ಪ್ರದೇಶ (C2) ಮತ್ತು ಕೇರಳ (D2) ತಂಡಗಳು ಪ್ರಿ-ಕ್ವಾರ್ಟರ್ ಹಂತವನ್ನು ಪ್ರಾರಂಭಿಸಿದೆ.
ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ ನವೆಂಬರ್ 16 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ವಿದರ್ಭ ವಿರುದ್ದ ಆಡಲಿದೆ. ಇದೇ ದಿನ ಮಧ್ಯಾಹ್ನ ಕರ್ನಾಟಕ ತಂಡವು ಸೌರಾಷ್ಟ್ರವನ್ನು ಎದುರಿಸಲಿದೆ.
ಪ್ರೀ ಕ್ವಾರ್ಟರ್ ಫೈನಲ್ ನವೆಂಬರ್ 16 (ಮಂಗಳವಾರ)- ಮಹಾರಾಷ್ಟ್ರ vs ವಿದರ್ಭ (8:30AM ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ) ಹಿಮಾಚಲ ಪ್ರದೇಶ vs ಕೇರಳ (12:00PM ಪಾಲಂ ಎ ಸ್ಟೇಡಿಯಂ, ದೆಹಲಿ) ಕರ್ನಾಟಕ vs ಸೌರಾಷ್ಟ್ರ (1:00PM ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ)
ಕ್ವಾರ್ಟರ್ ಫೈನಲ್ ನವೆಂಬರ್ 18 (ಗುರುವಾರ) 1 ನೇ ಕ್ವಾರ್ಟರ್ ಫೈನಲ್ ತಮಿಳುನಾಡು vs (ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಗೆಲ್ಲುವ ತಂಡ) (8:30AM ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ) 2ನೇ ಕ್ವಾರ್ಟರ್ ಫೈನಲ್ ರಾಜಸ್ಥಾನ vs (ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಗೆಲ್ಲುವ ತಂಡ) (8:30AM ಪಾಲಂ ಎ ಸ್ಟೇಡಿಯಂ, ದೆಹಲಿ) 3ನೇ ಕ್ವಾರ್ಟರ್ ಫೈನಲ್ ಬೆಂಗಾಲ್ ವಿರುದ್ಧ ((ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಗೆಲ್ಲುವ ತಂಡ) (1:00PM ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ) 4ನೇ ಕ್ವಾರ್ಟರ್ ಫೈನಲ್ ಗುಜರಾತ್ vs ಹೈದರಾಬಾದ್ (1:00PM ಪಾಲಂ ಎ ಸ್ಟೇಡಿಯಂ, ದೆಹಲಿ)
ನವೆಂಬರ್ 20 ರಂದು ಎರಡು ಸೆಮಿಫೈನಲ್ಸ್ ನಡೆಯಲಿದ್ದು, ಫೈನಲ್ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನವೆಂಬರ್ 22 ರಂದು ನಡೆಯಲಿದೆ.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: IPL 2022: ಯುವ ನಾಯಕನ ಮೇಲೆ ಕಣ್ಣಿಟ್ಟಿರುವ CSK
(Syed Mushtaq Ali Trophy 2021: Knockout matches full schedule)