19 ರನ್‌ಗೆ 3 ವಿಕೆಟ್ ಬೇಟೆ, ಭುವನೇಶ್ವರ್ ಅಬ್ಬರಕ್ಕೆ ಎದುರಾಳಿಗಳು ಸುಸ್ತು

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2026-27 ರಲ್ಲಿ ಉತ್ತರ ಪ್ರದೇಶ ತಂಡ ಚಂಡೀಗಢ ವಿರುದ್ಧ 30 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಟೂರ್ನಿಯಲ್ಲಿ ಯುಪಿ ತಂಡದ ಎರಡನೇ ಜಯವಾಗಿದೆ. ಆರ್ಯನ್ ಜುಯಾಲ್ ಅವರ ಅಜೇಯ 64 ರನ್ ಹಾಗೂ ಭುವನೇಶ್ವರ್ ಕುಮಾರ್ ಅವರ 3 ವಿಕೆಟ್ ಗಳ ಅಮೋಘ ಬೌಲಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಕರಣ್ ಶರ್ಮಾ ನಾಯಕತ್ವದ ಯುಪಿ ಭರ್ಜರಿ ಪ್ರದರ್ಶನ ನೀಡಿದೆ.

19 ರನ್‌ಗೆ 3 ವಿಕೆಟ್ ಬೇಟೆ, ಭುವನೇಶ್ವರ್ ಅಬ್ಬರಕ್ಕೆ ಎದುರಾಳಿಗಳು ಸುಸ್ತು
Bhuvneshwar Kumar

Updated on: Nov 20, 2026 | 3:46 PM

ಕರಣ್ ಶರ್ಮಾ ನಾಯಕತ್ವದ ಉತ್ತರ ಪ್ರದೇಶ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2026-27ರ ಟೂರ್ನಿಯಲ್ಲಿ ಚಂಡೀಗಢ ವಿರುದ್ಧ ನಡೆದ ತನ್ನ ನಾಲ್ಕನೇ ಲೀಗ್ ಪಂದ್ಯದಲ್ಲಿ 30 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಉತ್ತರ ಪ್ರದೇಶ ಎರಡನೇ ಗೆಲುವು ಸಾಧಿಸಿದೆ. ತಂಡದ ಗೆಲುವಿನಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಅಮೋಘ ಬೌಲಿಂಗ್ ಹಾಗೂ ಆರ್ಯನ್ ಜುಯಾಲ್ ಅವರ ಅಜೇಯ ಅರ್ಧಶತಕ ಪ್ರಮುಖ ಪಾತ್ರ ವಹಿಸಿವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಚಂಡೀಗಢ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಹೀಗಾಗಿ ಚಂಡೀಗಢ ಗೆಲುವಿಗೆ 191 ರನ್‌ಗಳ ಗುರಿ ಎದುರಾಯಿತು. ಆದರೆ ಉತ್ತರ ಪ್ರದೇಶದ ಬೌಲರ್‌ಗಳ ದಾಳಿಗೆ ತತ್ತರಿಸಿದ ಚಂಡೀಗಢ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಶಿವಂ ಭಾಂಬ್ರಿ ನಾಯಕತ್ವದ ಚಂಡೀಗಢ ತಂಡ ಸೋಲೊಪ್ಪಿಕೊಂಡಿತು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಆರ್ಯನ್ ಜುಯಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Loading...

ಆರ್ಯನ್ ಅಜೇಯ ಅರ್ಧಶತಕ

ಉತ್ತರ ಪ್ರದೇಶ ಪರ ಆರ್ಯನ್ ಜುಯಾಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಅವರು 4 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಅಜೇಯ 64 ರನ್ ಸಿಡಿಸಿದರು. ನಾಯಕ ಕರಣ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದು 33 ರನ್ ಗಳಿಸಿದರೆ, ದಿವ್ಯಾಂಶ್ ಜೋಶಿ 26 ರನ್‌ಗಳ ಕೊಡುಗೆ ನೀಡಿದರು. ಆದರ್ಶ್ ಸಿಂಗ್ 29 ರನ್ ಹಾಗೂ ಸಮೀರ್ ರಿಜ್ವಿ 16 ರನ್ ಗಳಿಸಿದರು. ಚಂಡೀಗಢ ಪರ ಜಗಜೀತ್ ಸಿಂಗ್ ಹಾಗೂ ಹಾರ್ದಿಕ್ ಚೌಧರಿ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.

ನ್ಯೂಜಿಲೆಂಡ್‌ ವಿರುದ್ಧ ದುಬಾರಿಯಾದ ಭುವನೇಶ್ವರ್: ಆದರೂ ತಂಡಕ್ಕೆ ಇವರೇ ಬಲ

ಭುವನೇಶ್ವರ್ ಬೌಲಿಂಗ್ ಅಬ್ಬರ

ಗುರಿ ಬೆನ್ನಟ್ಟಿದ ಚಂಡೀಗಢ ತಂಡಕ್ಕೆ ಉತ್ತರ ಪ್ರದೇಶದ ಬೌಲರ್‌ಗಳು ತೀವ್ರ ಪೈಪೋಟಿ ನೀಡಿದರು. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಅನುಭವದ ಬಲದಿಂದ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಪ್ರಶಾಂತ್ ವೀರ್ 2 ವಿಕೆಟ್ ಪಡೆದು ಮಿಂಚಿದರು.

ಚಂಡೀಗಢ ಪರ ಆರಂಭಿಕ ಆಟಗಾರ ಅರ್ಜುನ್ ಆಜಾದ್ 39 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಶಿವಂ ಭಾಂಬ್ರಿ 23 ರನ್, ಅರುಷ್ ಭಂಡಾರಿ 19 ರನ್ ಗಳಿಸಿದರು. ಆರಂಭಿಕ ಆಟಗಾರ ಮನನ್ ವೋಹ್ರಾ 12 ರನ್ ಗಳಿಸಿದರೆ, ನಿಖಿಲ್ ಕುಮಾರ್ 18 ರನ್‌ಗಳ ಕೊಡುಗೆ ನೀಡಿದರು. ಈ ಸೋಲಿನೊಂದಿಗೆ ಚಂಡೀಗಢ ತಂಡ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲು ಅನುಭವಿಸಿದೆ. ಮತ್ತೊಂದೆಡೆ, ಭುವನೇಶ್ವರ್ ಕುಮಾರ್ ಅವರ ಮಾರಕ ಬೌಲಿಂಗ್ ಹಾಗೂ ಆರ್ಯನ್ ಜುಯಾಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತರ ಪ್ರದೇಶ ತಂಡ ಗೆಲುವಿನ ಹಾದಿಗೆ ಮರಳಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Fri, 20 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us