AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T10 League 2021: ಅಲಿ ಅಬ್ಬರದ ಅರ್ಧಶತಕ: ಟಿ10 ಲೀಗ್​ನಲ್ಲಿ ಹೊಸ ದಾಖಲೆ

Moeen Ali: 60 ಎಸೆತಗಳಲ್ಲಿ 146 ರನ್​ಗಳ ಟಾರ್ಗೆಟ್ ಪಡೆದ ನಾರ್ತನ್ ವಾರಿಯರ್ಸ್​ ಪರ ಮೊಯೀನ್ ಅಲಿ ಹಾಗೂ ಕೆನ್ನರ್ ಲೂಯಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಬೃಹತ್ ಗುರಿಯನ್ನು ಬೆನ್ನತ್ತಿದ ಈ ಇಬ್ಬರು ಆರಂಭಿಕರು ಸ್ಪೋಟಕ ಆರಂಭ ಒದಗಿಸಿದರು.

T10 League 2021: ಅಲಿ ಅಬ್ಬರದ ಅರ್ಧಶತಕ: ಟಿ10 ಲೀಗ್​ನಲ್ಲಿ ಹೊಸ ದಾಖಲೆ
Moeen Ali
TV9 Web
| Edited By: |

Updated on: Nov 28, 2021 | 2:48 PM

Share

ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್​ನಲ್ಲಿ (T10 League 2021) ಇಂಗ್ಲೆಂಡ್ ಆಲ್​ರೌಂಡರ್ ಮೊಯೀನ್ ಅಲಿ (Moeen Ali) ಅಬ್ಬರಿಸಿದ್ದಾರೆ. ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಟೀಮ್ ಅಬುಧಾಬಿ ಹಾಗೂ ನಾರ್ತನ್ ವಾರಿಯರ್ಸ್​ ನಡುವಣ ಪಂದ್ಯದಲ್ಲಿ ಮೊಯೀನ್ ಅಲಿ ಅಕ್ಷರಶಃ ಅಬ್ಬರಿಸಿದರು. ನಾರ್ತನ್ ಪರ ಕಣಕ್ಕಿಳಿದ ಅಲಿ ಭರ್ಜರಿ ಬ್ಯಾಟಿಂಗ್ ಮೂಲಕ ಈ ಬಾರಿಯ ಟಿ10 ಲೀಗ್​ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಟಾಸ್ ಗೆದ್ದ ನಾರ್ತನ್ ವಾರಿಯರ್ಸ್ ನಾಯಕ ರೊವ್​ಮ್ಯಾನ್ ಪೊವೆಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲ ಬ್ಯಾಟ್ ಮಾಡಿದ ಟೀಮ್ ಅಬುಧಾಬಿಯ ಪರ ದಕ್ಷಿಣ ಆಫ್ರಿಕಾ ಕಾಲಿನ್ ಇನ್​ಗ್ರಾಮ್ ಕೇವಲ 25 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 61 ರನ್ ಬಾರಿಸಿದರು. ಪರಿಣಾಮ ಟೀಮ್ ಅಬುಧಾಬಿಯು ನಿಗದಿತ 10 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್​ ಕಲೆಹಾಕಿತು.

60 ಎಸೆತಗಳಲ್ಲಿ 146 ರನ್​ಗಳ ಟಾರ್ಗೆಟ್ ಪಡೆದ ನಾರ್ತನ್ ವಾರಿಯರ್ಸ್​ ಪರ ಮೊಯೀನ್ ಅಲಿ ಹಾಗೂ ಕೆನ್ನರ್ ಲೂಯಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಬೃಹತ್ ಗುರಿಯನ್ನು ಬೆನ್ನತ್ತಿದ ಈ ಇಬ್ಬರು ಆರಂಭಿಕರು ಸ್ಪೋಟಕ ಆರಂಭ ಒದಗಿಸಿದರು. ಮೊದಲ ಓವರ್​ನಿಂದ ಟೀಮ್ ಅಬುಧಾಬಿ ಬೌಲರುಗಳ ಬೆಂಡೆತ್ತಿದ ಕೆನ್ನರ್-ಅಲಿ ಜೋಡಿ 2 ಓವರ್​ನಲ್ಲೇ 33 ರನ್​ ಕಲೆಹಾಕಿತು.

ಆ ಬಳಿಕ ಅಕ್ಷರಶಃ ಅಬ್ಬರಿಸಿದ್ದು ಮೊಯೀನ್ ಅಲಿ. ಸಿಕ್ಸ್​, ಫೋರ್​ಗಳ ಸುರಿಮಳೆಗೈದ ಮೊಯೀನ್ ಅಲಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಈ ಬಾರಿಯ ಟಿ10 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಅರ್ಧಶತಕದ ಬಳಿಕ ಕೂಡ ಅಬ್ಬರ ಮುಂದುವರೆಸಿದ ಅಲಿ ಒಟ್ಟು 9 ಸಿಕ್ಸ್​ ಸಿಡಿಸಿದರು. ಈ ಮೂಲಕ ಈ ಬಾರಿ ಟೂರ್ನಿಯಲ್ಲಿ ಒಂದೇ ಇನಿಂಗ್ಸ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿ ಬ್ಯಾಟರ್​ ಎನಿಸಿಕೊಂಡರು.

ಅಂತಿಮವಾಗಿ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 9 ಸಿಕ್ಸ್​ನೊಂದಿಗೆ ಅಲಿ ಅಜೇಯ 77 ರನ್​ಗಳಿಸಿದರೆ, ಮತ್ತೊಂದೆಡೆ ಕೆನ್ನರ್ ಲೂಯಿಸ್ 32 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 65 ರನ್​ ಬಾರಿಸಿದರು. ಪರಿಣಾಮ 9.1 ಓವರ್​ನಲ್ಲಿ ನಾರ್ತನ್​ ವಾರಿಯರ್ಸ್​ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 146 ರನ್​ಗಳ ಗುರಿ ಮುಟ್ಟುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಅಂದಹಾಗೆ ಟಿ10 ಲೀಗ್​ನಲ್ಲಿ ಅತೀ ವೇಗದ ಅರ್ಧಶತಕದ ದಾಖಲೆ ಅಫ್ಘಾನಿಸ್ತಾನ್ ಬ್ಯಾಟರ್ ಮೊಹಮದ್ ಶೆಹಝಾದ್ ಹಾಗೂ ವೆಸ್ಟ್ ಇಂಡೀಸ್​ ದಾಂಡಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ಒಬ್ಬರು ಟಿ10 ಲೀಗ್​ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶ್ವ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ:IPL 2022: RCB ಇಬ್ಬರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ..! 

ಇದನ್ನೂ ಓದಿ: IPL 2022: 16 ಕೋಟಿ ನೀಡಿ, ಇಲ್ಲ ಬಿಟ್ಬಿಡಿ: ಸಂಕಷ್ಟದಲ್ಲಿ SRH ಫ್ರಾಂಚೈಸಿ

ಇದನ್ನೂ ಓದಿ: Vijay Hazare Trophy 2021-22: ವಿಜಯ್ ಹಝಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ

(T10 League 2021: Moeen Ali smashes fastet fifty)

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!