T20 Women’s World Cup Final: ವಿಶ್ವಕಪ್​ ಗೆದ್ದು ಚೋಕರ್ ಹಣೆಪಟ್ಟಿ ಕಳಚಿಕೊಳ್ಳುತ್ತಾ ದಕ್ಷಿಣ ಆಫ್ರಿಕಾ?

T20 Women's World Cup Final: ಒಂದು ಕಾಲದಲ್ಲಿ, ದಕ್ಷಿಣ ಆಫ್ರಿಕಾದ ಪುರುಷರ ತಂಡದಲ್ಲಿ ಸ್ಟಾರ್ ಕ್ರಿಕೆಟಿಗರ ದಂಡೆ ಇತ್ತು. ಆದರೆ ಅವರ ಉಪಸ್ಥಿತಿಯ ಹೊರತಾಗಿಯೂ ಆಫ್ರಿಕನ್ ತಂಡಕ್ಕೆ ಐಸಿಸಿ ಈವೆಂಟ್​ನಲ್ಲಿ ಫೈನಲ್​ ಪ್ರವೇಶಿಸಲು ಸಾಧ್ಯವಾಗಲಿಲ್ಲ.

T20 Women's World Cup Final: ವಿಶ್ವಕಪ್​ ಗೆದ್ದು ಚೋಕರ್ ಹಣೆಪಟ್ಟಿ ಕಳಚಿಕೊಳ್ಳುತ್ತಾ ದಕ್ಷಿಣ ಆಫ್ರಿಕಾ?
ದಕ್ಷಿಣ ಆಫ್ರಿಕಾ ತಂಡ
Follow us
|

Updated on:Feb 25, 2023 | 4:57 PM

ಟಿ20 ಮಹಿಳಾ ವಿಶ್ವಕಪ್‌ (T20 Women’s World Cup) ಅಂತಿಮ ಹಂತ ತಲುಪಿದೆ. ಇದೇ ಫೆ. 26 ರಂದು ಎರಡು ತಂಡಗಳ ನಡುವೆ ಫೈನಲ್‌ ಕದನ ನಡೆಯಲಿದೆ. ಸೆಮಿಫೈನಲ್‌ನಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿ ಫೈನಲ್​ಗೆ ಎಂಟ್ರಿಕೊಟ್ಟಿರುವ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ (South Africa and Australia) ನಡುವೆ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ಬರೋಬ್ಬರಿ ಏಳನೇ ಬಾರಿ ಫೈನಲ್‌ಗೆ ತಲುಪಿದೆ. ಆದರೆ ಇತ್ತ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ಫೈನಲ್ ತಲುಪಿದೆ. ಈಗ ವಿಶ್ವಕಪ್ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಅಂಟಿಕ್ಕೊಂಡಿರುವ ಚೋಕರ್ಸ್​ ಹಣೆಪಟ್ಟಿಯನ್ನು ಕಳಚುವ ಅವಕಾಶ ಸೃಷ್ಟಿಯಾಗಿದೆ. ಯಾಕೆಂದರೆ, ದಕ್ಷಿಣ ಆಫ್ರಿಕಾದ ಪುರುಷ ಹಾಗೂ ಮಹಿಳಾ ತಂಡಗಳು ಪ್ರತಿ ಐಸಿಸಿ ಈವೆಂಟ್​ನಲ್ಲೂ ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿ ಕಣಕ್ಕಿಳಿಯುತ್ತವೆ. ಆದರೆ ಪ್ರಮುಖ ಪಂದ್ಯಗಳಲ್ಲಿ ಸೋಲುವ ಮೂಲಕ ಪ್ರಶಸ್ತಿಯಿಂದ ವಂಚಿತವಾಗಿವೆ. ಹಾಗಾಗಿ ಈ ತಂಡಕ್ಕೆ ಚೋಕರ್ಸ್​ ಎಂಬ ಹಣೆಪಟ್ಟಿ ಕಟ್ಟಲಾಗಿದೆ.

ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ

ಒಂದು ಕಾಲದಲ್ಲಿ, ದಕ್ಷಿಣ ಆಫ್ರಿಕಾದ ಪುರುಷರ ತಂಡದಲ್ಲಿ ಸ್ಟಾರ್ ಕ್ರಿಕೆಟಿಗರ ದಂಡೆ ಇತ್ತು. ಮಿ.360 ಖ್ಯಾತಿಯ ಎಬಿ ಡಿವಿಲಿಯರ್ಸ್, ಹಾಶಿಮ್ ಆಮ್ಲಾ, ಡು ಪ್ಲೆಸಿಸ್, ಡೇವಿಡ್ ಮಿಲ್ಲರ್, ಮೊರ್ಕೆಲ್, ಡೇಲ್ ಸ್ಟೇಯ್ನ್ ಅವರ ಉಪಸ್ಥಿತಿಯ ಹೊರತಾಗಿಯೂ ಆಫ್ರಿಕನ್ ತಂಡಕ್ಕೆ ಐಸಿಸಿ ಈವೆಂಟ್​ನಲ್ಲಿ ಫೈನಲ್​ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ ಮಹಿಳಾ ತಂಡ ಈ ವರ್ಷ ಟಿ20 ವಿಶ್ವಕಪ್ ಫೈನಲ್​ಗೇರಿದ್ದು, ಕಪ್ ಗೆಲ್ಲುವ ಮೂಲಕ ತಮ್ಮ ತಂಡಕ್ಕೆ ಅಂಟಿಕೊಂಡಿರುವ ಕಳಂಕವನ್ನು ತೊಳೆಯುವಂತಹ ಅದ್ಭುತ ಅವಕಾಶ ಹೊಂದಿದೆ.

T20 World Cup 2023:ಕೇವಲ 14 ಎಸೆತಗಳಲ್ಲಿ 56 ರನ್! ಟಿ20ಯಲ್ಲಿ ಪಾಕ್ ಪರ ಸಿಡಿಯಿತು ಮೊದಲ ಶತಕ

ಆಫ್ರಿಕಾ ತಂಡ ವಿಶ್ವಕಪ್ ಎತ್ತಿಹಿಡಿಯಲು ಒಂದು ಗೆಲುವಿನ ಅಂತರದಲ್ಲಿದೆ. ಆದರೆ ಈ ಸವಾಲು ಅವರಿಗೆ ಸುಲಭವಲ್ಲ. ಏಕೆಂದರೆ ಆಸ್ಟ್ರೇಲಿಯ ತಂಡ ಬಲಿಷ್ಠವಾಗಿದ್ದು, ಕಳೆದ ಬಾರಿಯ ಮುಖಾಮುಖಿಯಲ್ಲೂ ಆಸೀಸ್ ತಂಡ ಹರಿಣಗಳಿಗೆ ಮಣ್ಣು ಮುಕ್ಕಿಸಿತ್ತು. ಇದೇ ಟೂರ್ನಿಯಲ್ಲೇ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಈ ಸವಾಲನ್ನು ಆಸ್ಟ್ರೇಲಿಯಾ 16.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು.

ಟಿ20 ವಿಶ್ವಕಪ್‌ ಇತಿಹಾದಲ್ಲಿ ಪ್ರಶಸ್ತಿ ಗೆದ್ದ ತಂಡಗಳ ವಿವರ

  1. 2009 ಇಂಗ್ಲೆಂಡ್ (ಇಂಗ್ಲೆಂಡ್ vs ನ್ಯೂಜಿಲೆಂಡ್) 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು.
  2. 2010 ಆಸ್ಟ್ರೇಲಿಯಾ (ಆಸ್ಟ್ರೇಲಿಯಾ vs ನ್ಯೂಜಿಲೆಂಡ್) 3 ರನ್‌ಗಳಿಂದ ಗೆದ್ದಿತು.
  3. 2012 ಆಸ್ಟ್ರೇಲಿಯಾ (ಆಸ್ಟ್ರೇಲಿಯಾ vs ಇಂಗ್ಲೆಂಡ್) 4 ರನ್‌ಗಳಿಂದ ಗೆದ್ದಿತು.
  4. 2014 ಆಸ್ಟ್ರೇಲಿಯಾ (ಆಸ್ಟ್ರೇಲಿಯಾ vs ಇಂಗ್ಲೆಂಡ್) 6 ವಿಕೆಟ್‌ಗಳಿಂದ ಗೆದ್ದಿತು.
  5. 2016 ವೆಸ್ಟ್ ಇಂಡೀಸ್ (ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್) 8 ವಿಕೆಟ್‌ಗಳಿಂದ ಗೆದ್ದಿತು.
  6. 2018 ಆಸ್ಟ್ರೇಲಿಯಾ (ಆಸ್ಟ್ರೇಲಿಯಾ vs ಇಂಗ್ಲೆಂಡ್) 8 ವಿಕೆಟ್‌ಗಳಿಂದ ಗೆದ್ದಿತು.
  7. 2020 ಆಸ್ಟ್ರೇಲಿಯಾ (ಆಸ್ಟ್ರೇಲಿಯಾ vs ಭಾರತ) 85 ರನ್‌ಗಳಿಂದ ಗೆದ್ದಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Sat, 25 February 23

ತಾಜಾ ಸುದ್ದಿ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ: ರಾಜಣ್ಣ
ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ: ರಾಜಣ್ಣ