WPL 2023: ಚೊಚ್ಚಲ ಆವೃತ್ತಿಗೆ ಹೊಸ ಜೆರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್; ಫೋಟೋ ನೋಡಿ
WPL 2023: ಮಹಿಳಾ ತಂಡದ ಜೆರ್ಸಿಗೂ, ಪುರುಷರ ತಂಡದ ಜೆರ್ಸಿಗೂ ಸಾಕಷ್ಟು ಸಾಮ್ಯತೆ ಇದೆ. ಈ ಜೆರ್ಸಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮುಂಬೈ ತಂಡ ಮಾಹಿತಿ ಹಂಚಿಕೊಂಡಿದೆ.

ಭಾರತದಲ್ಲಿ ಮೊದಲ ಬಾರಿಗೆ ಆಯೋಜನೆಯಾಗುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ಗೆ (Women’s Premier League) ದಿನಗಣನೆ ಆರಂಭವಾಗಿದೆ. ಮಾರ್ಚ್ 4 ರಂದು ಮೊದಲ ಪಂದ್ಯ ನಡೆಯುವುದರೊಂದಿಗೆ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರ್ತಿಯರ ಮೇಲೆ ಹಣದ ಮಳೆಯನ್ನೇ ಸುರಿಸಿದವು. ಇದರೊಂದಿಗೆ ತಮ್ಮ ತಮ್ಮ ತಂಡಗಳನ್ನು ಬಲಿಷ್ಠಗೊಳಿಸಿಕೊಂಡಿದ್ದವು. ಆ ಬಳಿಕ ತಮ್ಮ ತಮ್ಮ ತಂಡಗಳಿಗೆ ನಾಯಕಿಯರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಇದೀಗ ಎಲ್ಲಾ ಫ್ರಾಂಚೈಸಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡ ತನ್ನ ಮಹಿಳಾ ತಂಡದ ಜೆರ್ಸಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಮುಂಬೈನ ಮಹಿಳಾ ತಂಡದ ಜೆರ್ಸಿ ತಿಳಿ ನೀಲಿ ಬಣ್ಣದ್ದಾಗಿದ್ದು, ಇದು ಬದಿಯಲ್ಲಿ ಕಿತ್ತಳೆ ಬಣ್ಣ ಮತ್ತು ಗೋಲ್ಡನ್ ಬಣ್ಣದ ಗೆರೆಗಳನ್ನು ಹೊಂದಿದೆ. ಮಹಿಳಾ ತಂಡದ ಜೆರ್ಸಿಗೂ, ಪುರುಷರ ತಂಡದ ಜೆರ್ಸಿಗೂ ಸಾಕಷ್ಟು ಸಾಮ್ಯತೆ ಇದೆ. ಈ ಜೆರ್ಸಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮುಂಬೈ ತಂಡ ಮಾಹಿತಿ ಹಂಚಿಕೊಂಡಿದೆ.
?- here’s to sun, the sea, the blue-and-gold of Mumbai. Here’s to our first-ever #WPL jersey and all she brings. ?#OneFamily #MumbaiIndians #AaliRe pic.twitter.com/mOmNg0d9hO
— Mumbai Indians (@mipaltan) February 25, 2023
ಪುರುಷರ ತಂಡದಂತೆ ಯಶಸ್ವಿಯಾಗುತ್ತಾ?
ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಯಶಸ್ವಿ ತಂಡಗಳ ಬಗ್ಗೆ ಮಾತನಾಡುವುದಾದರೆ, ಅದರಲ್ಲಿ ಮುಂಬೈ ಇಂಡಿಯನ್ಸ್ ತಂಡ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಈ ತಂಡ ಇದುವರೆಗೆ ಅತಿ ಹೆಚ್ಚು ಬಾರಿ ಅಂದರೆ, ಐದು ಬಾರಿ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ತಂಡವು 2013, 2015, 2017, 2019, 2020 ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ ಕಳೆದೆರಡು ಸೀಸನ್ಗಳಲ್ಲಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಯಾವ ಸಮಯದಲ್ಲಾದರೂ ಪಂದ್ಯದ ಗತಿ ಬದಲಿಸುವ ಸಾಮಥ್ಯ್ರ ಈ ತಂಡದ ಆಟಗಾರರಲ್ಲಿದೆ. ಹೀಗಾಗಿ ಪುರುಷರ ತಂಡದಂತೆಯೇ ಮಹಿಳಾ ತಂಡವೂ ಈ ಲೀಗ್ನಲ್ಲಿ ಯಶಸ್ವಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕೆ ಪೂರಕವಾಗಿ ಈ ತಿಂಗಳು ನಡೆದ ಹರಾಜಿನಲ್ಲಿ ಹಲವು ಪ್ರಮುಖ ಆಟಗಾರ್ತಿಯರನ್ನು ಫ್ರಾಂಚೈಸಿ ಖರೀದಿಸಿತ್ತು. ಇದರಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಸೇರಿದ್ದಾರೆ.
WPL 2023: ಆರ್ಸಿಬಿ ಮಹಿಳಾ ತಂಡಕ್ಕೆ ನಾಯಕಿಯಾಗಿ ಸ್ಮೃತಿ ಮಂಧಾನ ಆಯ್ಕೆ..!
ಮೊದಲ ಪಂದ್ಯದಲ್ಲಿ ಗುಜರಾತ್ ಎದುರಾಳಿ
ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಎರಡೂ ತಂಡಗಳು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ಆಡಲಿವೆ. ಇದರ ನಂತರ, ಮಾರ್ಚ್ 6 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ. ಹಾಗೆಯೇ ಮಾರ್ಚ್ 9 ರಂದು ದೆಹಲಿಯನ್ನು ಎದುರಿಸಲಿದೆ. ನಂತರ ಮಾರ್ಚ್ 12 ರಂದು ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಮಾರ್ಚ್ 14 ರಂದು ಮುಂಬೈ ಮತ್ತು ಗುಜರಾತ್ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಮಾರ್ಚ್ 18 ರಂದು ಮುಂಬೈ ಮತ್ತು ಯುಪಿ ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 20 ರಂದು ಮುಂಬೈ ಮತ್ತು ದೆಹಲಿ ಮತ್ತೆ ಮುಖಾಮುಖಿಯಾಗಲಿದ್ದು, ಮಾರ್ಚ್ 21 ರಂದು ಬೆಂಗಳೂರು ಮತ್ತು ಮುಂಬೈ ಮತ್ತೆ ಆಡಲಿವೆ.
ಮುಂಬೈ ಮಹಿಳಾ ತಂಡ
ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸಿವರ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸಾಬೆಲ್ಲೆ ವಾಂಗ್, ಅಮನ್ಜೋತ್ ಕೌರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹೇಯ್ಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ, ಸೋನಮ್ ಯಾದವ್, ನೀಲಂ ಬಿಶ್ತ್, ಜಿತುಮೋನಿ ಕಲಿತಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Sat, 25 February 23
