7ನೇ ಟಿ20 ವಿಶ್ವಕಪ್ (T20 World Cup 2021) ಓಮಾನ್ನಲ್ಲಿ ಶುರುವಾಗಿದೆ. ಈ ಬಾರಿಯ ಚುಟುಕು ಕ್ರಿಕೆಟ್ ಕದನ ಓಮಾನ್ ಮತ್ತು ಯುಎಇನಲ್ಲಿ ನಡೆಯಲಿದ್ದು, ಈಗಾಗಲೇ ಎಲ್ಲಾ ಪ್ರಮುಖ ತಂಡಗಳು ಯುಎಇಗೆ ಬಂದಿಳಿದಿದೆ. ಇತ್ತ ನ್ಯೂಜಿಲೆಂಡ್ ತಂಡ ಕೂಡ 18 ಸದಸ್ಯರೊಂದಿಗೆ ಮರಳುಗಾಡಿನ ಮೈದಾನದಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಆದರೆ ಈ ತಂಡದಲ್ಲಿ ನ್ಯೂಜಿಲೆಂಡ್ನ ಸ್ಪೋಟಕ ಬ್ಯಾಟರ್ ರಾಸ್ ಟೇಲರ್ ಅವರು ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಇದಾಗ್ಯೂ ಟೇಲರ್ ಟಿ20 ವಿಶ್ವಕಪ್ಗಾಗಿ ಓಮಾನ್ಗೆ ಬಂದಿಳಿದಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ. ಬದಲಾಗಿ ಹೊಸ ತಂಡವೊಂದರ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಹೌದು, ಇದೇ ಮೊದಲ ಬಾರಿ ಐಸಿಸಿ ಟೂರ್ನಿಯಲ್ಲಿ ಆಡುತ್ತಿರುವ ಪಪುವಾ ನ್ಯೂಗಿನಿಯಾ ತಂಡದ ಮಾರ್ಗದರ್ಶಕರಾಗಲು ರಾಸ್ ಟೇಲರ್ ನಿರ್ಧರಿಸಿದ್ದಾರೆ. ಅದರಂತೆ ಟಿ20 ವಿಶ್ವಕಪ್ ವೇಳೆ ಪಪುವಾ ನ್ಯೂಗಿನಿಯಾ ತಂಡ ಮೆಂಟರ್ ಆಗಿ ರಾಸ್ ಟೇಲರ್ ಕಾರ್ಯ ನಿರ್ವಹಿಸಲಿದ್ದಾರೆ.
2020ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ರಾಸ್ ಟೇಲರ್ ಕೊನೆಯ ಬಾರಿ ಟಿ20 ಪಂದ್ಯವನ್ನಾಡಿದ್ದರು. ಕಳಪೆ ಫಾರ್ಮ್ ಕಾರಣ ತಂಡದಿಂದ ಹೊರಬಿದ್ದಿದ್ದ ಟೇಲರ್ ಆ ಬಳಿಕ ಕಂಬ್ಯಾಕ್ ಮಾಡಲು ಸಾಧ್ಯವಾಗಿಲ್ಲ. ಇದಾಗ್ಯೂ ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯರಾಗಿರುವ ಟೇಲರ್ ಈ ಬಾರಿ ಟಿ20 ವಿಶ್ವಕಪ್ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಆ ನಿರೀಕ್ಷೆ ತಂಡದ ಆಯ್ಕೆ ವೇಳೆ ಹುಸಿಯಾಯಿತು. ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಈ ಬಾರಿ ಯುವ ಆಟಗಾರರಿಗೆ ಮಣೆ ಹಾಕಿದ್ದರು.
ಟೇಲರ್ ತನ್ನ ವೃತ್ತಿಜೀವನದಲ್ಲಿ ಇದುವರೆಗೆ 102 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅನುಭವವು PNG ತಂಡಕ್ಕೆ ಉಪಯೋಗಕ್ಕೆ ಬರಲಿದೆ. ಅದರಂತೆ ರಾಸ್ ಟೇಲರ್ ಮಾರ್ಗದರ್ಶನದಲ್ಲಿ ಪಪುವಾ ನ್ಯೂಗಿನಿಯಾ ಎಂಬ ಹೊಸ ತಂಡ ಈ ಬಾರಿ ಅಬ್ಬರಿಸಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ
ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?
ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ
(T20 World Cup 2021: Ross Taylor to mentor tournament debutants Papua New Guinea)