Team India Jersey: ಟೀಮ್ ಇಂಡಿಯಾ ಜೆರ್ಸಿ ಮೇಲೆ ಸೌಂಡ್ವೇವ್ ವಿನ್ಯಾಸ ಯಾಕಿದೆ ಗೊತ್ತಾ?
T20 World Cup 2021: ಅಕ್ಟೋಬರ್ 13 ರಂದು ಬಿಲಿಯನ್ ಚಿಯರ್ಸ್ ಜೆರ್ಸಿ ಎಂಬ ಟ್ಯಾಗ್ ಲೈನ್ನೊಂದಿಗೆ ಬಿಸಿಸಿಐ ಭಾರತ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿತ್ತು.
ಟಿ20 ವಿಶ್ವಕಪ್ಗಾಗಿ (T20 World Cup 2021) ಟೀಮ್ ಇಂಡಿಯಾ (Team India) ಎಲ್ಲಾ ರೀತಿಯಲ್ಲೂ ಸಜ್ಜಾಗಿ ನಿಂತಿದೆ. ಅದರಲ್ಲೂ ಅಕ್ಟೋಬರ್ 24 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ದದ ಮೊದಲ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ದದ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವುದು ವಿಶೇಷ. ಹೀಗಾಗಿಯೇ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಈ 2 ಕಾರಣದಿಂದ ಮೊದಲ ಪಂದ್ಯ ವಿಶೇಷ.
ಅಕ್ಟೋಬರ್ 13 ರಂದು ಬಿಲಿಯನ್ ಚಿಯರ್ಸ್ ಜೆರ್ಸಿ ಎಂಬ ಟ್ಯಾಗ್ ಲೈನ್ನೊಂದಿಗೆ ಬಿಸಿಸಿಐ ಭಾರತ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿತ್ತು. ಆದರೆ ಬಿಲಿಯನ್ ಚಿಯರ್ಸ್ ಜೆರ್ಸಿ ಎನ್ನುವ ಟ್ಯಾಗ್ ಲೈನ್ ಯಾಕೆ ಎಂಬುದನ್ನು ಎಲ್ಲೂ ಸ್ಪಷ್ಟಪಡಿಸಿರಲಿಲ್ಲ. ಇದೀಗ ಹೊಸ ಜೆರ್ಸಿಯ ವಿನ್ಯಾಸದ ಹಿಂದಿರುವ ಒಂದೊಂದೇ ಸಿಕ್ರೇಟ್ಗಳು ಹೊರಬರುತ್ತಿವೆ.
ಟೀಮ್ ಇಂಡಿಯಾ ನೂತನ ಜೆರ್ಸಿಯನ್ನು ತನ್ನ ಫ್ಯಾನ್ಸ್ಗಾಗಿಯೇ ವಿನ್ಯಾಸಗೊಳಿಸಿದೆ. ಹೀಗಾಗಿಯೇ ಬಿಲಿಯನ್ ಫ್ಯಾನ್ಸ್ ಹೊಂದಿರುವ ಭಾರತ ತಂಡದ ಜೆರ್ಸಿಗೆ ಬಿಲಿಯನ್ ಚಿಯರ್ಸ್ ಜೆರ್ಸಿ ಎಂದು ಶೀರ್ಷಿಕೆ ನೀಡಲಾಗಿದೆ. ಅಂದರೆ ಕ್ರೀಡಾಂಗಣದಲ್ಲಿ ಇಂಡಿಯಾ…ಇಂಡಿಯಾ ಎಂದು ಹುರಿದುಂಬಿಸುತ್ತಿರುವ ಅಭಿಮಾನಿಗಳಿಗೆ ಗೌರವ ಸೂಚಿಸಿ ಚಿಯರ್ಸ್ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ.
ಅದರಲ್ಲೂ ಈ ಜೆರ್ಸಿಯ ವಿನ್ಯಾಸದಲ್ಲಿ ಶಬ್ಧ ತರಂಗದ (ಸೌಂಡ್ವೇವ್) ಮಾದರಿಗಳನ್ನು ಬಳಸಿರುವುದು ವಿಶೇಷ. ಅಂದರೆ ಇಲ್ಲಿ ಬಳಸಲಾಗಿರುವ ಶಬ್ದ ತರಂಗದ ಮಾದರಿಯು ಇಂಡಿಯಾ….ಇಂಡಿಯಾ…ಎಂಬ ಅಭಿಮಾನಿಗಳ ಹುರಿದುಂಬಿಸುವಿಕೆ ಧ್ವನಿ ತರಂಗಗಳಾಗಿವೆ. ಆ ತರಂಗಗಳ ವಿನ್ಯಾಸವನ್ನೇ ಭಾರತ ತಂಡದ ಜೆರ್ಸಿಯ ಮೇಲೆ ಚಿತ್ರಿಸಲಾಗಿದೆ. ಈ ಮೂಲಕ ಎಲ್ಲಾ ರೀತಿಯಲ್ಲೂ ನೂತನ ಜೆರ್ಸಿಯನ್ನು ಟೀಮ್ ಇಂಡಿಯಾ ತನ್ನ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಈ ಎಲ್ಲಾ ಕಾರಣದಿಂದ ಟೀಮ್ ಇಂಡಿಯಾ ನೂತನ ಜೆರ್ಸಿಗೆ ಬಿಲಿಯನ್ ಚಿಯರ್ಸ್ ಜೆರ್ಸಿ ಎಂಬ ಟ್ಯಾಗ್ ಲೈನ್ ನೀಡಲಾಗಿದೆ.
ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ
ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?
ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ
(What Is The Soundwave Pattern On India’s Jersey For 2021 T20 WC ?)