T20 World Cup 2021: ನ್ಯೂಜಿಲೆಂಡ್ ತಂಡದಲ್ಲಿಲ್ಲ ಸ್ಥಾನ: ಹೊಸ ತಂಡ ಸೇರಿಕೊಂಡ ರಾಸ್ ಟೇಲರ್

T20 World Cup 2021: 2020ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ರಾಸ್ ಟೇಲರ್ ಕೊನೆಯ ಬಾರಿ ಟಿ20 ಪಂದ್ಯವನ್ನಾಡಿದ್ದರು. ಕಳಪೆ ಫಾರ್ಮ್​ ಕಾರಣ ತಂಡದಿಂದ ಹೊರಬಿದ್ದಿದ್ದ ಟೇಲರ್ ಆ ಬಳಿಕ ಕಂಬ್ಯಾಕ್ ಮಾಡಲು ಸಾಧ್ಯವಾಗಿಲ್ಲ.

T20 World Cup 2021: ನ್ಯೂಜಿಲೆಂಡ್ ತಂಡದಲ್ಲಿಲ್ಲ ಸ್ಥಾನ: ಹೊಸ ತಂಡ ಸೇರಿಕೊಂಡ ರಾಸ್ ಟೇಲರ್
Ross Taylor

7ನೇ ಟಿ20 ವಿಶ್ವಕಪ್ (T20 World Cup 2021)​ ಓಮಾನ್​ನಲ್ಲಿ ಶುರುವಾಗಿದೆ. ಈ ಬಾರಿಯ ಚುಟುಕು ಕ್ರಿಕೆಟ್​ ಕದನ ಓಮಾನ್ ಮತ್ತು ಯುಎಇನಲ್ಲಿ ನಡೆಯಲಿದ್ದು, ಈಗಾಗಲೇ ಎಲ್ಲಾ ಪ್ರಮುಖ ತಂಡಗಳು ಯುಎಇಗೆ ಬಂದಿಳಿದಿದೆ. ಇತ್ತ ನ್ಯೂಜಿಲೆಂಡ್ ತಂಡ ಕೂಡ 18 ಸದಸ್ಯರೊಂದಿಗೆ ಮರಳುಗಾಡಿನ ಮೈದಾನದಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಆದರೆ ಈ ತಂಡದಲ್ಲಿ ನ್ಯೂಜಿಲೆಂಡ್​ನ ಸ್ಪೋಟಕ ಬ್ಯಾಟರ್​ ರಾಸ್ ಟೇಲರ್​ ಅವರು ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಇದಾಗ್ಯೂ ಟೇಲರ್ ಟಿ20 ವಿಶ್ವಕಪ್​ಗಾಗಿ ಓಮಾನ್​ಗೆ ಬಂದಿಳಿದಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ. ಬದಲಾಗಿ ಹೊಸ ತಂಡವೊಂದರ ಮೆಂಟರ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಹೌದು, ಇದೇ ಮೊದಲ ಬಾರಿ ಐಸಿಸಿ ಟೂರ್ನಿಯಲ್ಲಿ ಆಡುತ್ತಿರುವ ಪಪುವಾ ನ್ಯೂಗಿನಿಯಾ ತಂಡದ ಮಾರ್ಗದರ್ಶಕರಾಗಲು ರಾಸ್ ಟೇಲರ್ ನಿರ್ಧರಿಸಿದ್ದಾರೆ. ಅದರಂತೆ ಟಿ20 ವಿಶ್ವಕಪ್​ ವೇಳೆ ಪಪುವಾ ನ್ಯೂಗಿನಿಯಾ ತಂಡ ಮೆಂಟರ್ ಆಗಿ ರಾಸ್ ಟೇಲರ್ ಕಾರ್ಯ ನಿರ್ವಹಿಸಲಿದ್ದಾರೆ.

2020ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ರಾಸ್ ಟೇಲರ್ ಕೊನೆಯ ಬಾರಿ ಟಿ20 ಪಂದ್ಯವನ್ನಾಡಿದ್ದರು. ಕಳಪೆ ಫಾರ್ಮ್​ ಕಾರಣ ತಂಡದಿಂದ ಹೊರಬಿದ್ದಿದ್ದ ಟೇಲರ್ ಆ ಬಳಿಕ ಕಂಬ್ಯಾಕ್ ಮಾಡಲು ಸಾಧ್ಯವಾಗಿಲ್ಲ. ಇದಾಗ್ಯೂ ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯರಾಗಿರುವ ಟೇಲರ್ ಈ ಬಾರಿ ಟಿ20 ವಿಶ್ವಕಪ್ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಆ ನಿರೀಕ್ಷೆ ತಂಡದ ಆಯ್ಕೆ ವೇಳೆ ಹುಸಿಯಾಯಿತು. ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್​ ಈ ಬಾರಿ ಯುವ ಆಟಗಾರರಿಗೆ ಮಣೆ ಹಾಕಿದ್ದರು.

ಟೇಲರ್ ತನ್ನ ವೃತ್ತಿಜೀವನದಲ್ಲಿ ಇದುವರೆಗೆ 102 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅನುಭವವು PNG ತಂಡಕ್ಕೆ ಉಪಯೋಗಕ್ಕೆ ಬರಲಿದೆ. ಅದರಂತೆ ರಾಸ್ ಟೇಲರ್ ಮಾರ್ಗದರ್ಶನದಲ್ಲಿ ಪಪುವಾ ನ್ಯೂಗಿನಿಯಾ ಎಂಬ ಹೊಸ ತಂಡ ಈ ಬಾರಿ ಅಬ್ಬರಿಸಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್​ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?

ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ

(T20 World Cup 2021: Ross Taylor to mentor tournament debutants Papua New Guinea)

Click on your DTH Provider to Add TV9 Kannada