AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: 2024ರ ಟಿ20 ವಿಶ್ವಕಪ್ ಮತ್ತಷ್ಟು ರೋಚಕ; 20 ತಂಡಗಳು ಕಣಕ್ಕೆ.. ಅರ್ಹತಾ ಸುತ್ತಿಗೆ ಬ್ರೇಕ್!

T20 World Cup: ಆತಿಥೇಯರಾಗಿರುವುದರಿಂದ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ತಂಡಗಳು ನೇರವಾಗಿ ಪಂದ್ಯಾವಳಿಗೆ ಅರ್ಹತೆ ಪಡೆಯುತ್ತವೆ. ಈ 20 ತಂಡಗಳ ಪಂದ್ಯಾವಳಿಯನ್ನು ನಾಕ್‌ಔಟ್‌ ಸುತ್ತಿಗೂ ಮೊದಲು ಎರಡು ಹಂತಗಳಲ್ಲಿ ಆಡಲಾಗುತ್ತದೆ.

T20 World Cup: 2024ರ ಟಿ20 ವಿಶ್ವಕಪ್ ಮತ್ತಷ್ಟು ರೋಚಕ; 20 ತಂಡಗಳು ಕಣಕ್ಕೆ.. ಅರ್ಹತಾ ಸುತ್ತಿಗೆ ಬ್ರೇಕ್!
team india
TV9 Web
| Edited By: |

Updated on:Nov 22, 2022 | 12:21 PM

Share

ಹಲವು ರೋಚಕತೆಯೊಂದಿಗೆ ಈ ಬಾರಿಯ ಟಿ20 ವಿಶ್ವಕಪ್‌ಗೆ (T20 World Cup 2022) ಅದ್ಧೂರಿ ತೆರೆ ಬಿದ್ದಿದೆ. ಬಲಿಷ್ಠ ಇಂಗ್ಲೆಂಡ್ ಫೈನಲ್​ನಲ್ಲಿ ಪಾಕಿಸ್ತಾನವನ್ನು ಮಣಿಸುವುದರೊಂದಿಗೆ ಎರಡನೇ ಬಾರಿಗೆ ಕಪ್ ಎತ್ತಿಹಿಡಿದಿತ್ತು. 16 ತಂಡಗಳ ನಡುವೆ ನಡೆದ ಕದನದಲ್ಲಿ ಹಲವು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿದ್ದವು. ಅಲ್ಲದೆ ಅಭಿಮಾನಿಗಳ ಮನರಂಜನೆಗೆ ಯಾವುದೇ ಕೊರೆತ ಕೂಡ ಇರಲಿಲ್ಲ. ಹೀಗಾಗಿ ಮುಂದಿನ ಟಿ20 ವಿಶ್ವಕಪ್​ನಲ್ಲಿ ಮತ್ತಷ್ಟು ರೋಚಕತೆಯನ್ನು ಹೆಚ್ಚಿಸಲು ಮುಂದಾಗಿರುವ ಐಸಿಸಿ (ICC), 2024 ರ ವಿಶ್ವಕಪ್‌ನಲ್ಲಿ (T20 World Cup 2024) 16 ತಂಡಗಳ ಬದಲು 20 ತಂಡಗಳನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದೆ. 2024 ರ ಟಿ20 ವಿಶ್ವಕಪ್ ಆತಿಥ್ಯವನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್​ ಹೊತ್ತುಕೊಂಡಿವೆ. ಇದರ ಜೊತೆಗೆ ಮುಂದಿನ ಆವೃತ್ತಿಯಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ಈ ಮಿನಿ ವಿಶ್ವಸಮರದಲ್ಲಿ 20 ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಅಷ್ಟೇ ಅಲ್ಲ, ಮುಂದಿನ ಸೀಸನ್​ನಲ್ಲಿ ಅರ್ಹತಾ ಸುತ್ತು ಇರುವುದಿಲ್ಲ. ಹಾಗೆಯೇ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಇಷ್ಟು ದೊಡ್ಡ ಕ್ರಿಕೆಟ್‌ ಕಾರ್ಯಕ್ರಮ ಆಯೋಜಿಸಲಾಗಿದೆ.

ಆತಿಥೇಯರಾಗಿರುವುದರಿಂದ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ತಂಡಗಳು ನೇರವಾಗಿ ಪಂದ್ಯಾವಳಿಗೆ ಅರ್ಹತೆ ಪಡೆಯುತ್ತವೆ. ಈ 20 ತಂಡಗಳ ಪಂದ್ಯಾವಳಿಯನ್ನು ನಾಕ್‌ಔಟ್‌ ಸುತ್ತಿಗೂ ಮೊದಲು ಎರಡು ಹಂತಗಳಲ್ಲಿ ಆಡಲಾಗುತ್ತದೆ. ಆದರೆ ಈ ಹಂತವು 2021 ಮತ್ತು 2022 ರಲ್ಲಿ ಆಡಿದ ಮೊದಲ ಸುತ್ತು ಅಥವಾ ಸೂಪರ್ 12 ಸ್ವರೂಪಕ್ಕಿಂತ ಭಿನ್ನವಾಗಿರುತ್ತದೆ. ಎಲ್ಲಾ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನಲ್ಲಿ ತಲಾ 5 ತಂಡಗಳು ಇರುತ್ತವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್ 8 ಸುತ್ತಿಗೆ ಪ್ರವೇಶಿಸುತ್ತವೆ. ಅಲ್ಲಿ ಎಲ್ಲಾ ತಂಡಗಳನ್ನು ತಲಾ 4 ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಬಳಿಕ ಎರಡೂ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ತಂಡಗಳು ಹೇಗೆ ಅರ್ಹತೆ ಪಡೆಯುತ್ತವೆ?

ಟಿ20 ವಿಶ್ವಕಪ್ 2024 ರ ಆರಂಭಿಕ 2 ಸ್ಥಾನಗಳನ್ನು ಈಗಾಗಲೇ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ತಂಡಗಳಿಗಾಗಿ ಕಾಯ್ದಿರಿಸಲಾಗಿದೆ. ಇದಾದ ಬಳಿಕ 2022ರ ವಿಶ್ವಕಪ್ ಹಾಗೂ ನವೆಂಬರ್ 14ರವರೆಗೆ ಐಸಿಸಿ ಟಿ20 ಶ್ರೇಯಾಂಕದ ಪ್ರದರ್ಶನದ ಆಧಾರದ ಮೇಲೆ ಮುಂದಿನ 10 ತಂಡಗಳನ್ನು ನಿರ್ಧರಿಸಲಾಗುತ್ತದೆ. ಅಂದರೆ ಈಗಾಗಲೇ 10 ತಂಡಗಳನ್ನು ನಿರ್ಧರಿಸಲಾಗಿದೆ.

ತಂಡ

ಅರ್ಹತಾ ವಿಧಾನ

ವೆಸ್ಟ್ ಇಂಡೀಸ್

ಹೋಸ್ಟ್
ಯುಎಸ್

ಹೋಸ್ಟ್

ಇಂಗ್ಲೆಂಡ್

ಈ ಬಾರಿಯ ಚಾಂಪಿಯನ್
ಪಾಕಿಸ್ತಾನ

ಈ ಬಾರಿಯ ರನ್ನರ್ ಅಪ್

ನ್ಯೂಜಿಲೆಂಡ್

ಈ ವಿಶ್ವಕಪ್​ನ ಸೆಮಿಫೈನಲಿಸ್ಟ್‌
ಭಾರತ

ಈ ವಿಶ್ವಕಪ್​ನ ಸೆಮಿಫೈನಲಿಸ್ಟ್‌

ಆಸ್ಟ್ರೇಲಿಯಾ

ಈ ವಿಶ್ವಕಪ್​ನಲ್ಲಿ ಅಗ್ರ 8ನೇ ಸ್ಥಾನ
ನೆದರ್ಲ್ಯಾಂಡ್ಸ್

ಈ ವಿಶ್ವಕಪ್​ನಲ್ಲಿ ಅಗ್ರ 8ನೇ ಸ್ಥಾನ

ದಕ್ಷಿಣ ಆಫ್ರಿಕಾ

ಈ ವಿಶ್ವಕಪ್​ನಲ್ಲಿ ಅಗ್ರ 8ನೇ ಸ್ಥಾನ

ಶ್ರೀಲಂಕಾ

ಈ ವಿಶ್ವಕಪ್​ನಲ್ಲಿ ಅಗ್ರ 8ನೇ ಸ್ಥಾನ
ಅಫ್ಘಾನಿಸ್ತಾನ

ನವೆಂಬರ್ 14ರವರೆಗಿನ ಟಿ20 ಶ್ರೇಯಾಂಕದಲ್ಲಿ ಉತ್ತಮ ಸ್ಥಾನ

ಬಾಂಗ್ಲಾದೇಶ

ನವೆಂಬರ್ 14ರವರೆಗಿನ ಟಿ20 ಶ್ರೇಯಾಂಕದಲ್ಲಿ ಉತ್ತಮ ಸ್ಥಾನ
ಇತರೆ 8 ತಂಡಗಳು

ಪ್ರಾದೇಶಿಕ ಅರ್ಹತೆಯ ಆಧಾರದ ಮೇಲೆ

ಇದಲ್ಲದೆ, 2024 ರ ಟಿ20 ವಿಶ್ವಕಪ್‌ನ ಉಳಿದ 8 ತಂಡಗಳನ್ನು ಪ್ರಾದೇಶಿಕ ಅರ್ಹತೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆಫ್ರಿಕಾ, ಏಷ್ಯಾ ಮತ್ತು ಯುರೋಪ್ ತಲಾ ಎರಡು ಅರ್ಹತಾ ಸ್ಥಾನಗಳನ್ನು ಹೊಂದಿದ್ದರೆ, ಅಮೆರಿಕ ಮತ್ತು ಪೂರ್ವ ಏಷ್ಯಾ ಪೆಸಿಫಿಕ್ ತಲಾ ಒಂದು ಸ್ಥಾನವನ್ನು ಹೊಂದಿವೆ. ಪ್ರಾದೇಶಿಕ ಅರ್ಹತೆ ಗೆಲ್ಲುವ ತಂಡ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನದಂತಹ ತಂಡಗಳ ಗುಂಪಿನಲ್ಲಿ ಸ್ಥಾನ ಪಡೆಯುತ್ತದೆ.

Published On - 12:17 pm, Tue, 22 November 22

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ