3ನೇ ಟಿ20ಗೆ ಗಿಲ್-ಸಂಜು ಪೈಕಿ ಯಾರಿಗೆ ಅವಕಾಶ?- ಸಮೀಕ್ಷೆಯಲ್ಲಿ ಹೊರಹೊಮ್ಮಿದ ಅಪರೂಪದ ಅಭಿಪ್ರಾಯ ಇಲ್ಲಿದೆ ನೋಡಿ

TV9 kannada Digital Poll: ಟಿವಿ9 ಕನ್ನಡ ಡಿಜಿಟಲ್ ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ತೃತೀಯ ಟಿ20 ಪಂದ್ಯಕ್ಕೆ ಸಂಜು ಸ್ಯಾಮ್ಸನ್ (Sanju Samson) ಅಥವಾ ಶುಭ್​ಮನ್ ಗಿಲ್ (Shubhman Gill) ಪೈಕಿ ಯಾರಿಗೆ ಅವಕಾಶ ನೀಡಬೇಕು ಎಂಬ ಪ್ರಶ್ನೆಯನ್ನಿಟ್ಟಿತ್ತು. ಇದಕ್ಕೆ ಸಾವಿರಾರೂ ಜನ ಕಮೆಂಟ್ ಮಾಡಿದ್ದಾರೆ.

3ನೇ ಟಿ20ಗೆ ಗಿಲ್-ಸಂಜು ಪೈಕಿ ಯಾರಿಗೆ ಅವಕಾಶ?- ಸಮೀಕ್ಷೆಯಲ್ಲಿ ಹೊರಹೊಮ್ಮಿದ ಅಪರೂಪದ ಅಭಿಪ್ರಾಯ ಇಲ್ಲಿದೆ ನೋಡಿ
Tv9 Kannada Poll
TV9kannada Web Team

| Edited By: Vinay Bhat

Nov 22, 2022 | 12:00 PM

ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್​ನಲ್ಲಿ ಸೋತ ಬಳಿಕ ಭಾರತ ಕ್ರಿಕೆಟ್ ತಂಡ ಇದೀಗ ನ್ಯೂಜಿಲೆಂಡ್ (India vs New Zealand) ಪ್ರವಾಸದಲ್ಲಿದೆ. ಮೂರು ಪಂದ್ಯಗಳ ಟಿ20 ಸರಣಿ ಆಡುತ್ತಿದ್ದು, ಇಂದು ಅಂತಿಮ ಕದನ ನಡೆಯುತ್ತಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾದರೆ, ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 65 ರನ್​ಗಳ ಭರ್ಜರಿ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿತ್ತು. ಇದೀಗ ಮೂರನೇ ಟಿ20 ಪಂದ್ಯದ ಮೇಲೆ ಎಲ್ಲರ ಕಣ್ಣಿದೆ. ಉಭಯ ತಂಡಗಳು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ. ಇದಕ್ಕೂ ಮುನ್ನ ಟಿವಿ9 ಕನ್ನಡ ಡಿಜಿಟಲ್ ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ತೃತೀಯ ಟಿ20 ಪಂದ್ಯಕ್ಕೆ ಸಂಜು ಸ್ಯಾಮ್ಸನ್ (Sanju Samson) ಅಥವಾ ಶುಭ್​ಮನ್ ಗಿಲ್ (Shubhman Gill) ಪೈಕಿ ಯಾರಿಗೆ ಅವಕಾಶ ನೀಡಬೇಕು ಎಂಬ ಪ್ರಶ್ನೆಯನ್ನಿಟ್ಟಿತ್ತು. ಇದಕ್ಕೆ ಸಾವಿರಾರೂ ಜನ ಕಮೆಂಟ್ ಮಾಡಿದ್ದಾರೆ.

ಟಿವಿ9 ಕನ್ನಡ ಡಿಜಿಟಲ್ ನಡೆಸಿದ  ಸಮೀಕ್ಷೆಯಲ್ಲಿ ಅನೇಕ ಜನರು ಸೋಶಿಯಲ್  ಮೀಡಿಯಾದ ಮೂಲಕ ಭಾಗವಹಿಸಿದರು. ಹೆಚ್ಚಿನ ಜನರು ಸಂಜು ಸ್ಯಾಮ್ಸನ್ ಅವರನ್ನು ಆಡಿಸಬೇಕು ಎಂದಿದ್ದಾರೆ ಹಾಗೂ ಒಂದಿಷ್ಟು ಜನ ಶುಭ್​ಮನ್​ ಗಿಲ್ ಬೇಡ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಪುರುಷರು  

ಸಾಮಾಜಿಕ ಜಾಲತಾಣಗಳು ಸಂಜು ಸ್ಯಾಮ್ಸನ್ ಶುಭ್​ಮನ್ ಗಿಲ್
ಫೇಸ್ಬುಕ್ : ಪುರುಷರು – 95 ಶೇಕಡಾ

ಮಹಿಳೆಯರು -2ಶೇಕಡಾ 

ಪುರುಷರು– 2ಶೇಕಡಾ

ಮಹಿಳೆಯರು -1ಶೇಕಡಾ

ಇನ್ಸ್ಟಾಗ್ರಾಮ್ ಪುರುಷರು – 80 ಶೇಕಡಾ

ಮಹಿಳೆಯರು -10 ಶೇಕಡಾ

ಪುರುಷರು– 7 ಶೇಕಡಾ

ಮಹಿಳೆಯರು -3 ಶೇಕಡಾ

ಟ್ವಿಟರ್ : ಪುರುಷರು– 70 ಶೇಕಡಾ

ಮಹಿಳೆಯರು -30 ಶೇಕಡಾ

ಪುರುಷರು

ಮಹಿಳೆಯರು

ಯೂಟ್ಯಬ್ ಪುರುಷರು– 73 ಶೇಕಡಾ

ಮಹಿಳೆಯರು -10 ಶೇಕಡಾ

ಪುರುಷರು– 10 ಶೇಕಡಾ

ಮಹಿಳೆಯರು -7 ಶೇಕಡಾ

ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ:

ಇದನ್ನೂ ಓದಿ

  • ಸಂಜು ಸ್ಯಾಮ್ಸನ್ ಅವರಿಗೆ ಓಪನರ್ ಆಗಿ ಆಡುವ ಅವಕಾಶ ಕೊಡಬೇಕು. ಅವರು ಒಬ್ಬ ಅದ್ಬುತ ಆಟಗಾರ ಎಂಬುದರಲ್ಲಿ ಸಂಶಯವಿಲ್ಲ – ಶಿವು ಎ.
  • ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಬೇಕು. ಅವರು ಸೂರ್ಯಕುಮಾರ್ ಯಾದವ್ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ – ಶಶಿಧರ್.
  • ಇನ್ನೂ ಕೆಲವು ಭಾರತದ ಓಪನಿಂಗ್ ಜೋಡಿ ಬದಲಾಗಬೇಕಿರುವ ಕಾರಣ ಶುಭ್​ಮನ್ ಗಿಲ್​ಗೆ ಅವಕಾಶ ನೀಡಬೇಕು ಎಂದಿದ್ದಾರೆ.
  • ಆದರ, ಹೆಚ್ಚಿನ ಜನರ ಆಯ್ಕೆ ಸಂಜು ಸ್ಯಾಮ್ಸನ್ ಅವರೇ ಆಗಿದ್ದು, ಸ್ಯಾಮ್ಸನ್ ಅನೇಕ ಸಮಯದಿಂದ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರು ಪ್ಲೇಯಿಂಗ್ ಇಲೆವೆನ್​ನಲ್ಲಿರಲು ಅರ್ಹರು ಎಂದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada