ಶ್ರೇಯಸ್ ಹಾಡಿದ ಹಾಡಿಗೆ ಮಡದಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಶಾರ್ದೂಲ್; ವಿಡಿಯೋ

Shardul Thakur Wedding: ಮೊದಮೊದಲು ಇಬ್ಬರೂ ಜೊತೆಗೆ ಹಾಡುತ್ತಿದ್ದರು. ಆ ಬಳಿಕ ವೇದಿಕೆಯಿಂದ ಕೆಳಗಿಳಿದ ಶಾರ್ದೂಲ್, ಶ್ರೇಯಸ್ ಹಾಡಿದ ಹಾಡಿಗೆ ಭಾವಿ ಪತ್ನಿಯೊಂದಿಗೆ ಹೆಜ್ಜೆಹಾಕಿದರು.

ಶ್ರೇಯಸ್ ಹಾಡಿದ ಹಾಡಿಗೆ ಮಡದಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಶಾರ್ದೂಲ್; ವಿಡಿಯೋ
ಮದುವೆ ಸಂಭ್ರಮದಲ್ಲಿ ಶಾರ್ದೂಲ್ ಠಾಕೂರ್
Follow us
ಪೃಥ್ವಿಶಂಕರ
|

Updated on:Feb 27, 2023 | 11:53 AM

ಟೀಂ ಇಂಡಿಯಾದ (Team India) ಮತ್ತೊಬ್ಬ ಬ್ಯಾಚುಲರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಂದು ಭಾರತ ತಂಡದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ತಮ್ಮ ಬಹುದಿನಗಳ ಗೆಳತಿಯೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ವಿವಾಹ ಆಚರಣೆಗಳು ಪ್ರಾರಂಭವಾಗಿದ್ದು, ಕೆಲವು ಆಚರಣೆಗಳ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಎಲ್ಲರ ಗಮನ ಸೆಳೆದಿರುವ ಆ ವೀಡಿಯೋಗಳಲ್ಲಿ ಶಾರ್ದೂಲ್ ಅವರ ಮದುವೆಯ ಸಂಗೀತ ಸಮಾರಂಭದ ವಿಡಿಯೋ ಕೂಡ ಒಂದಾಗಿದೆ. ಈ ವಿಡಿಯೋದ ಇನ್ನೊಂದು ವಿಶೇಷವೆಂದರೆ ಇದರಲ್ಲಿ ಟೀಂ ಇಂಡಿಯಾದ ಆಟಗಾರು ಹಾಡು ಹಾಡುವುದರೊಂದಿಗೆ, ಮದುಮಗನೊಂದಿಗೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದಾರೆ. ಆ ಆಟಗಾರ ಮತ್ತ್ಯಾರು ಅಲ್ಲ. ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer).

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಇನ್ನೂ ಸಮಯವಿದ್ದು, ಟೀಂ ಇಂಡಿಯಾದ ಕೆಲ ಆಟಗಾರರು ಶಾರ್ದೂಲ್ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಇವರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರಾಗಿದ್ದು, ಹಾಡು ಹಾಡುವುದರೊಂದಿಗೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದಾರೆ.

‘ಆಯ್ಕೆ ಸಮಿತಿಯ ಮುಖ್ಯಸ್ಥನಾಗಬೇಕೆಂದರೆ’..! ಬಿಸಿಸಿಐ ಮುಂದೆ ಬಹುದೊಡ್ಡ ಬೇಡಿಕೆಯಿಟ್ಟ ಟರ್ಬನೇಟರ್

ಶ್ರೇಯಸ್ ಹಾಡು, ಶಾರ್ದೂಲ್ ಡಾನ್ಸ್

ವಾಸ್ತವವಾಗಿ, ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್ ಹಾಡಿದ ಹಾಡಿಗೆ ಡಾನ್ಸ್ ಮಾಡುವುದನ್ನು ಕಾಣಬಹುದಾಗಿದೆ. ಮೊದಮೊದಲು ಇಬ್ಬರೂ ಜೊತೆಗೆ ಹಾಡುತ್ತಿದ್ದರು. ಆ ಬಳಿಕ ವೇದಿಕೆಯಿಂದ ಕೆಳಗಿಳಿದ ಶಾರ್ದೂಲ್, ಶ್ರೇಯಸ್ ಹಾಡಿದ ಹಾಡಿಗೆ ಭಾವಿ ಪತ್ನಿಯೊಂದಿಗೆ ಹೆಜ್ಜೆಹಾಕಿದರು. ಇದೀಗ ಶ್ರೇಯಸ್ ಅಯ್ಯರ್ ಹಾಡಿದ ಹಾಡಿನಲ್ಲಿ ಶಾರ್ದೂಲ್ ತಮ್ಮ ಭಾವಿ ಪತ್ನಿಯೊಂದಿಗೆ ಮಾಡಿದ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಅದ್ಧೂರಿಯಾಗಿ ನಡೆದ ಮೆಹೆಂದಿ ಸಮಾರಂಭ

ಅಂದಹಾಗೆ, ಇದಕ್ಕೂ ಮೊದಲು, ಶಾರ್ದೂಲ್ ಠಾಕೂರ್ ಅವರ ಮೆಹಂದಿ ಸಮಾರಂಭದ ವೀಡಿಯೊ ಕೂಡ ವೈರಲ್ ಆಗಿತ್ತು, ಅದರಲ್ಲಿ ಅವರು ಹಳದಿ ಕುರ್ತಾದಲ್ಲಿ ಜಿಂಗಾಟ್ ಹಾಡಿಗೆ ಡಾನ್ಸ್ ಮಾಡುವುದನ್ನು ಕಾಣಬಹುದಾಗಿದೆ.

ಟೀಂ ಇಂಡಿಯಾದ ಆಲ್​ ರೌಂಡರ್​ ಶಾರ್ದೂಲ್, ಇಂದು ತಮ್ಮ ಬಹುದಿನಗಳ ಗೆಳತಿ ಮಿಥಾಲಿ ಪಾರುಲ್ಕರ್ ಅವರೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ. ಮಿಥಾಲಿ ಮತ್ತು ಶಾರ್ದೂಲ್ ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕ ಗೋವಾದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಪ್ರಯಾಣ ತೊಂದರೆಗಳಿಂದಾಗಿ ಮದುವೆ ಸ್ಥಳವನ್ನು ಬದಲಿಸಬೇಕಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Mon, 27 February 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ