AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Team India Schedule 2024: ಅಕ್ಟೋಬರ್ 16 ರಿಂದ ಮುಂದಿನ ಫೆಬ್ರವರಿವರೆಗೆ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡಲಿದೆ. ಇದರಲ್ಲಿ ಟೆಸ್ಟ್ ಸರಣಿ, ಟಿ20 ಸರಣಿ ಹಾಗೂ ಏಕದಿನ ಸರಣಿಗಳಿವೆ. ವಿಶೇಷ ಎಂದರೆ ಈ ಸರಣಿಗಳ ಮುಕ್ತಾಯದ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿ ಕೂಡ ಶುರುವಾಗಲಿದೆ.

Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Team India
ಝಾಹಿರ್ ಯೂಸುಫ್
|

Updated on: Oct 13, 2024 | 10:58 AM

Share

ಭಾರತ ಮತ್ತು ಬಾಂಗ್ಲಾದೇಶ್ ನಡುವಣ 5 ಪಂದ್ಯಗಳ ಸರಣಿ ಮುಕ್ತಾಯಗೊಂಡಿದೆ. ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಎರಡು ಸರಣಿಗಳಲ್ಲಿ ಬಾಂಗ್ಲಾ ವಿರುದ್ಧ ಪಾರುಪತ್ಯ ಮೆರೆದಿರುವ ಭಾರತ ತಂಡವು ಇದೀಗ ನ್ಯೂಝಿಲೆಂಡ್ ವಿರುದ್ಧದ ಪಂದ್ಯಗಳಿಗೆ ಸಜ್ಜಾಗಬೇಕಿದೆ.

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 16 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಟಿ20 ಸರಣಿ ನಡೆಯಲಿದೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮುಕ್ತಾಯದ ಬೆನ್ನಲ್ಲೇ ಆಸ್ಟ್ರೇಲಿಯಾ ಹಾಗೂ ಭಾರತ ನಡುವಣ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದೆ. ಈ ಎಲ್ಲಾ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ನ್ಯೂಝಿಲೆಂಡ್ ಸರಣಿ:

ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯ ವೇಳಾಪಟ್ಟಿ ಇಲ್ಲಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಬುಧವಾರ, 16 ಅಕ್ಟೋಬರ್ 2024 9:30 AM ಬೆಂಗಳೂರು
2ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಗುರುವಾರ, 24 ಅಕ್ಟೋಬರ್ 2024 9:30 AM ಪುಣೆ
3ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಶುಕ್ರವಾರ, 1 ನವೆಂಬರ್ 2024 9:30 AM ಮುಂಬೈ

ಭಾರತ vs ಸೌತ್ ಆಫ್ರಿಕಾ:

ಟಿ20 ವಿಶ್ವಕಪ್​ನ ಫೈನಲಿಸ್ಟ್​ಗಳಾದ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ನವೆಂಬರ್​ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ. 4 ಟಿ20 ಪಂದ್ಯಗಳ ಈ ಸರಣಿಗೆ ಸೌತ್ ಆಫ್ರಿಕಾ ಆತಿಥ್ಯವಹಿಸಲಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟಿ20, ಸೌತ್ ಆಫ್ರಿಕಾ vs ಭಾರತ ಶುಕ್ರವಾರ, 8 ನವೆಂಬರ್ 2024 8:30 PM ಡರ್ಬನ್
2ನೇ ಟಿ20, ಸೌತ್ ಆಫ್ರಿಕಾ vs ಭಾರತ ಭಾನುವಾರ, 10 ನವೆಂಬರ್ 2024 8:30 PM ಗ್ಕೆಬರ್ಹಾ
3ನೇ ಟಿ20, ಸೌತ್ ಆಫ್ರಿಕಾ vs ಭಾರತ ಬುಧವಾರ, 13 ನವೆಂಬರ್ 2024 8:30 PM ಸೆಂಚುರಿಯನ್
4ನೇ ಟಿ20, ಸೌತ್ ಆಫ್ರಿಕಾ vs ಭಾರತ ಶುಕ್ರವಾರ, 15 ನವೆಂಬರ್ 2024 8:30 PM ಜೋಹಾನ್ಸ್‌ಬರ್ಗ್

ಭಾರತ vs ಆಸ್ಟ್ರೇಲಿಯಾ ಸರಣಿ:

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕೊನೆಯ ಟೆಸ್ಟ್ ಸರಣಿಯನ್ನು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಕಾಂಗರೂಗಳ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 22 ನವೆಂಬರ್ 2024 7:50 AM ಪರ್ತ್
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) ಶುಕ್ರವಾರ, 6 ಡಿಸೆಂಬರ್ 2024 9:30 AM ಅಡಿಲೇಡ್
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶನಿವಾರ, 14 ಡಿಸೆಂಬರ್ 2024 5:50 AM ಬ್ರಿಸ್ಬೇನ್
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಗುರುವಾರ, 26 ಡಿಸೆಂಬರ್ 2024 5 AM ಮೆಲ್ಬೋರ್ನ್
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 3 ಜನವರಿ 2025 5 AM ಸಿಡ್ನಿ

ಭಾರತ vs ಇಂಗ್ಲೆಂಡ್ ಸರಣಿ:

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಮ್ ಇಂಡಿಯಾ ಹೊಸ ವರ್ಷಕ್ಕೆ ಕಾಲಿಡಲಿದ್ದು, 2025 ರಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟಿ20, ಭಾರತ vs ಇಂಗ್ಲೆಂಡ್ ಬುಧವಾರ, 22 ಜನವರಿ 2025 7 PM ಚೆನ್ನೈ
2ನೇ ಟಿ20, ಭಾರತ vs ಇಂಗ್ಲೆಂಡ್ ಶನಿವಾರ, 25 ಜನವರಿ 2025 7 PM ಕೋಲ್ಕತ್ತಾ
3ನೇ ಟಿ20, ಭಾರತ vs ಇಂಗ್ಲೆಂಡ್ ಮಂಗಳವಾರ, 28 ಜನವರಿ 2025 7 PM ರಾಜ್ಕೋಟ್
4ನೇ ಟಿ20, ಭಾರತ vs ಇಂಗ್ಲೆಂಡ್ ಶುಕ್ರವಾರ, 31 ಜನವರಿ 2025 7 PM ಪುಣೆ
5ನೇ ಟಿ20, ಭಾರತ vs ಇಂಗ್ಲೆಂಡ್ ಭಾನುವಾರ, 2 ಫೆಬ್ರವರಿ 2025 7 PM ಮುಂಬೈ
1ನೇ ಏಕದಿನ, ಭಾರತ vs ಇಂಗ್ಲೆಂಡ್ ಗುರುವಾರ, 6 ಫೆಬ್ರವರಿ 2025 1:30 PM ನಾಗ್ಪುರ
2ನೇ ಏಕದಿನ, ಭಾರತ vs ಇಂಗ್ಲೆಂಡ್ ಭಾನುವಾರ, 9 ಫೆಬ್ರವರಿ 2025 1:30 PM ಕಟಕ್
3ನೇ ಏಕದಿನ, ಭಾರತ vs ಇಂಗ್ಲೆಂಡ್ ಬುಧವಾರ, 12 ಫೆಬ್ರವರಿ 2025 1:30 PM ಅಹಮದಾಬಾದ್

ಇದನ್ನೂ ಓದಿ: ಸಂಜು ಸ್ಯಾಮ್ಸನ್​​ ಸುಂಟರಗಾಳಿಗೆ ಹಳೆಯ ದಾಖಲೆಗಳು ಧೂಳೀಪಟ

ಚಾಂಪಿಯನ್ಸ್ ಟ್ರೋಫಿ:

ಫೆಬ್ರವರಿ ಮೂರನೇ ವಾರದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗುವ ಸಾಧ್ಯತೆಯಿದ್ದು, ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೆ ಈ ಟೂರ್ನಿಯ ಬಳಿಕ ಭಾರತೀಯ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ