India vs New Zealand: ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?, ಎಷ್ಟು ಗಂಟೆಗೆ?: ಇಲ್ಲಿದೆ ಮಾಹಿತಿ

India tour of New Zealand, 2022: ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಅಂಗವಾಗಿ ಭಾರತ ತಂಡ ಕೆಲವೇ ದಿನಗಳಲ್ಲಿ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದೆ. ಕಿವೀಸ್ ನಾಡಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿ ಅಡಲಿದೆ.

India vs New Zealand: ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?, ಎಷ್ಟು ಗಂಟೆಗೆ?: ಇಲ್ಲಿದೆ ಮಾಹಿತಿ
India tour of New Zealand 2022
Follow us
TV9 Web
| Updated By: Vinay Bhat

Updated on:Nov 12, 2022 | 10:40 AM

ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಹೀನಾಯ ಸೋಲು ಕಾಣುವ ಮೂಲಕ ಐಸಿಸಿ ಟಿ20 ವಿಶ್ವಕಪ್​ (T20 World Cup) ಇತಿಹಾಸದಲ್ಲಿ ತೀರ ಮುಜುಗರಕ್ಕೊಳಗಾಗಿದೆ. ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್, ನಾಯಕನ ಆಟ, ಬೌಲರ್​ಗಳ ಪ್ರದರ್ಶನದ ಬಗ್ಗೆ ಅನೇಕ ಟೀಕೆಗಳು ವ್ಯಕ್ತವಾಗುತ್ತದೆ. ತವರಿಗೆ ತಲುಪಿದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಜೊತೆ ಬಿಸಿಸಿಐ ವಿಶೇಷ ಸಭೆ ನಡೆಸಲಿದ್ದು ಈ ಸೋಲಿನ ಬಗ್ಗೆ ವರದಿ ಕೇಳಲಿದೆ. ಇದರ ನಡುವೆ ಟೀಮ್ ಇಂಡಿಯಾ (Team India) ಈ ಸೋಲಿನ ಆಘಾತದಿಂದ ಹೊರಬಂದು ಮುಂದಿನ ಸರಣಿಗೆ ಸಜ್ಜಾಗಬೇಕಿದೆ. ಹಾಗಾದರೆ ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?. ಇಲ್ಲಿದೆ ನೋಡಿ ಎಲ್ಲ ಮಾಹಿತಿ.

ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಅಂಗವಾಗಿ ಭಾರತ ತಂಡ ಕೆಲವೇ ದಿನಗಳಲ್ಲಿ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದೆ. ಕಿವೀಸ್ ನಾಡಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿ ಅಡಲಿದೆ. ಕೆಲ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಟಿ20 ಸರಣಿಯನ್ನು ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುನ್ನಡೆಸಲಿದ್ದಾರೆ. ಶಿಖರ್ ಧವನ್ ಏಕದಿನ ಸರಣಿಗೆ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರಿಗೆ ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ.

ಭಾರತದ- ನ್ಯೂಜಿಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ

ಇದನ್ನೂ ಓದಿ
Image
T20 World Cup Final: ಶೇ. 95 ರಷ್ಟು ಮಳೆ: ಟಿ20 ವಿಶ್ವಕಪ್ ಫೈನಲ್ ಮೀಸಲು ದಿನ ಕೂಡ ಅನುಮಾನ: ಚಾಂಪಿಯನ್ ಯಾರು?
Image
T20 World Cup Prize Money: ಸೆಮಿ ಫೈನಲ್​ನಲ್ಲಿ ಹೊರಬಿದ್ದ ಭಾರತ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತೇ?
Image
T20 World Cup 2022: ಐಸಿಸಿ ಟೂರ್ನಿಯಲ್ಲಿ ಕ್ರಿಕೆಟ್ ದೇವರ ದಾಖಲೆ ಮುರಿದ ಕಿಂಗ್ ಕೊಹ್ಲಿ..!
Image
ಬರೋಬ್ಬರಿ 10 ಕೋಟಿ ರೂ. ಸಂಭಾವನೆ; ದ್ರಾವಿಡ್​ ಕೋಚಿಂಗ್​ನಲ್ಲಿ ಏಷ್ಯಾಕಪ್ಪು ಬರಲಿಲ್ಲ, ವಿಶ್ವಕಪ್ಪೂ ಬರಲಿಲ್ಲ..!

ಟಿ20 ಸರಣಿ: ಮಧ್ಯಾಹ್ನ 12 ಗಂಟೆಗೆ ಆರಂಭ

1ನೇ T20I – ನವೆಂಬರ್ 18, ವೆಲ್ಲಿಂಗ್ಟನ್‌

2ನೇ T20I – ನವೆಂಬರ್ 20, ಮೌಂಟ್ ಮೌಂಗನು

3ನೇ T20I – ನವೆಂಬರ್ 22, ನೇಪಿಯರ್‌

ಏಕದಿನ ಸರಣಿ: ಬೆಳಗ್ಗೆ 7 ಗಂಟೆಗೆ ಆರಂಭ

ಮೊದಲ ODI – ನವೆಂಬರ್ 25, ಆಕ್ಲೆಂಡ್‌

ಎರಡನೇ ODI – ನವೆಂಬರ್ 27, ಹ್ಯಾಮಿಲ್ಟನ್‌

ಮೂರನೇ ODI – ನವೆಂಬರ್ 30, ಕ್ರೈಸ್ಟ್‌ಚರ್ಚ್‌

ಕೋಚ್ ದ್ರಾವಿಡ್​ಗೆ ವಿಶ್ರಾಂತಿ:

ಟಿ20 ವಿಶ್ವಕಪ್ ಸೋತ ಬೆನ್ನಲ್ಲೇ ರಾಹುಲ್ ದ್ರಾವಿಡ್​ ವಿಶ್ರಾಂತಿ ಬಯಸಿದ್ದಾರೆ ಎನ್ನಲಾಗಿದೆ. ಮುಂಬರುವ ನ್ಯೂಜಿಲೆಂಡ್​ ವಿರುದ್ಧದ ಸರಣಿಗೆ ರಾಹುಲ್ ದ್ರಾವಿಡ್​ಗೆ ವಿಶ್ರಾಂತಿ ನೀಡಿ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ವಿವಿಎಸ್​ ಲಕ್ಷ್ಮಣ್​ಗೆ ಮುಖ್ಯ ಕೋಚ್ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ. ಇವರ ಜೊತೆಗೆ ಟಿ20 ವಿಶ್ವಕಪ್​​ನಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ಸಿಬ್ಬಂದಿಗೂ ವಿಶ್ರಾಂತಿ ನೀಡಲಾಗಿದೆ. ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್) ಮತ್ತು ಸಾಯಿರಾಜ್ ಬಹುತುಲೆ (ಬೌಲಿಂಗ್) ಸೇರಿದಂತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ನೇತೃತ್ವದ ತಂಡವು ನ್ಯೂಜಿಲೆಂಡ್​ ಪ್ರವಾಸಕ್ಕೆ ಸೇರಿಕೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಲಕ್ಷ್ಮಣ್ ಭಾರತ ತಂಡದ ಉಸ್ತುವಾರಿ ವಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜಿಂಬಾಬ್ವೆ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಏಕದಿನ ಸರಣಿಗಳಲ್ಲಿ ಭಾರತಕ್ಕೆ ತರಬೇತಿ ನೀಡಿದ್ದರು.

ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್‌), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ವಾಷಿಂಗ್ಟನ್‌ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

ಏಕದಿನ ಸರಣಿಗೆ ಭಾರತ ತಂಡ: ಶಿಖರ್ ಧವನ್ (ನಾಯಕ), ರಿಷಭ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್‌), ಶುಭಮನ್ ಗಿಲ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಶಹಬಾಝ್ ಅಹ್ಮದ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ದೀಪಕ್ ಚಹರ್, ಕುಲ್ದೀಪ್ ಸೇನ್, ಉಮ್ರಾನ್ ಮಲಿಕ್.

Published On - 10:40 am, Sat, 12 November 22