ರಿಂಕು ಸಿಂಗ್ ಮದುವೆಗೆ ಮುಹೂರ್ತ ಫಿಕ್ಸ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ವಿವಾಹದ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ದಂಪತಿಗಳ ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಸಮಾರಂಭ ಮತ್ತು ವಿವಾಹದ ದಿನಾಂಕಗಳನ್ನು ಸಹ ಅಂತಿಮಗೊಳಿಸಲಾಗಿದೆ. ಅದರಂತೆ ತಾರಾ ಜೋಡಿ ಈ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಂಕು ಸಿಂಗ್ ಮತ್ತು ಮಚ್ಲಿಶಹರ್ ಸಂಸದೆ ಪ್ರಿಯಾ ಸರೋಜ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿರುವುದು ಮದುವೆ ವಿಷಯದಿಂದ. ಹೌದು, ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ವಿವಾಹಕ್ಕೆ ದಿನಾಂಕ ನಿಗದಿಯಾಗಿದ್ದು, ನವೆಂಬರ್ 18 ರಂದು ಈ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.
ರಿಂಕು-ಪ್ರಿಯಾ ಸರೋಜ್ ಮದುವೆ ಫಿಕ್ಸ್!
ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ಉಂಗುರ ಸಮಾರಂಭ ಜೂನ್ 8 ರಂದು ಲಕ್ನೋದ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ನಡೆಯಲಿದೆ. ಅಲ್ಲದೆ ನವೆಂಬರ್ 18 ರಂದು ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ವಿವಾಹ ನಡೆಸಲು ತೀರ್ಮಾನಿಸಲಾಗಿದೆ.
ಈ ವಿವಾಹ ಸಮಾರಂಭದಲ್ಲಿ ಅನೇಕ ದೊಡ್ಡ ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ. ಏಕೆಂದರೆ ಇತ್ತ ರಿಂಕು ಸಿಂಗ್ ಕ್ರಿಕೆಟಿಗನಾದರೆ, ಅತ್ತ ಪ್ರಿಯಾ ಅವರದ್ದು ರಾಜಕೀಯ ಕುಟುಂಬ. ಅವರ ತಂದೆ ಸಮಾಜವಾದಿ ಪಾರ್ಟಿ ಶಾಸಕರಾದರೆ, ಪ್ರಿಯಾ ಸರೋಜ್ ಸಂಸದೆ. ಹೀಗಾಗಿ ಮದುವೆ ಕಾರ್ಯಕ್ರಮಗಳಲ್ಲಿ ಕ್ರಿಕೆಟಿಗರೊಂದಿಗೆ ರಾಜಕಾರಣಿಗಳು ಸಹ ಕಾಣಿಸಿಕೊಳ್ಳಲಿದ್ದಾರೆ.
ರಿಂಕು ಸಿಂಗ್ ಕ್ರಿಕೆಟ್‌ನ ಭವಿಷ್ಯ:
ಭಾರತ ಟಿ20 ತಂಡದ ಆಟಗಾರನಾಗಿರುವ ರಿಂಕು ಸಿಂಗ್ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಖಾಯಂ ಸದಸ್ಯ. ಇದಾಗ್ಯೂ ಈ ಬಾರಿಯ ಟೂರ್ನಿಯಲ್ಲಿ ರಿಂಕು ಸಿಂಗ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದೀಗ ನವೆಂಬರ್ನಲ್ಲಿ ಮದುವೆ ನಿಗದಿಯಾಗಿರುವ ಕಾರಣ ಅವರು ಆ ಅವಧಿಯಲ್ಲಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.
ಇದನ್ನೂ ಓದಿ: IPL 2025: ಈ ಬಾರಿ ಕಪ್ ಗೆಲ್ಲೋರು ಇವರೇ ಎಂದ ಡೇವಿಡ್ ವಾರ್ನರ್
ಇನ್ನು ಪ್ರಿಯಾ ಸರೋಜ್ ಬಗ್ಗೆ ಹೇಳುವುದಾದರೆ, ಅವರು ಸಮಾಜವಾದಿ ಪಕ್ಷದ ಅತ್ಯಂತ ಕಿರಿಯ ಸಂಸದೆ. ಸರೋಜ ತಂದೆಯ ಹೆಸರು ತೂಫಾನಿ ಸರೋಜ್. ತೂಫಾನಿ ಅವರು ಮೂರು ಬಾರಿ ಸಂಸದರಾಗಿದ್ದಾರೆ. ತೂಫಾನಿ ಸರೋಜ್ ಪ್ರಸ್ತುತ ಕೆರಕಟ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಶಾಸಕರಾಗಿದ್ದಾರೆ.
Published On - 12:56 pm, Sun, 1 June 25
