ಭಾರತದ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ? ಇಲ್ಲಿದೆ ಮಾಹಿತಿ

ಟೀಮ್ ಇಂಡಿಯಾ ಈ ತಿಂಗಳಾಂತ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡಲಿದೆ. ಅಂದರೆ ಒಂದೆಡೆ ಭಾರತ ತಂಡ ಜಪಾನ್‌ನಲ್ಲಿ ಕಣಕ್ಕಿಳಿಯಲಿದ್ದರೆ, ಮತ್ತೊಂದೆಡೆ ಭಾರತದಲ್ಲೇ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಹೀಗಾಗಿ ಒಂದೇ ಅವಧಿಯಲ್ಲಿ ಭಾರತದ ಟಿ20 ಹಾಗೂ ಏಕದಿನ ತಂಡಗಳು ಏಕಕಾಲಕ್ಕೆ ಪಂದ್ಯಗಳನ್ನಾಡಲಿವೆ.

ಭಾರತದ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ? ಇಲ್ಲಿದೆ ಮಾಹಿತಿ
ಟೀಮ್ ಇಂಡಿಯಾ
Image Credit source: BCCI

Updated on: Sep 20, 2026 | 8:30 AM

ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯನ್ನು ಗೆದ್ದು ಬೀಗಿರುವ ಟೀಮ್ ಇಂಡಿಯಾ, ಇದೀಗ ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ವಿಶೇಷವೆಂದರೆ, ಈ ಸರಣಿಯ ನಡುವೆಯೇ ಭಾರತ ತಂಡವು ಮತ್ತೊಂದು ಪ್ರತ್ಯೇಕ ಟಿ20 ಪಂದ್ಯ ಹಾಗೂ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಲಿದೆ. ಅಂದರೆ, ಒಂದೆಡೆ ವೆಸ್ಟ್ ಇಂಡೀಸ್ ವಿರುದ್ಧ ದ್ವಿಪಕ್ಷೀಯ ಸರಣಿ ನಡೆಯುತ್ತಿದ್ದರೆ, ಮತ್ತೊಂದೆಡೆ ಜಪಾನ್ ವಿರುದ್ಧದ ಏಕೈಕ ಪಂದ್ಯ ಹಾಗೂ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಹೀಗಾಗಿ, ಈ ತಿಂಗಳು ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ರಸದೌತಣ ಸಿಗುವುದು ಖಚಿತ.

ಜಪಾನ್ vs ಇಂಡಿಯಾ:

ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಭಾರತ ತಂಡವು ಜಪಾನ್ ವಿರುದ್ಧ ಏಕೈಕ ಟಿ20 ಪಂದ್ಯವನ್ನು ಆಡಲಿದೆ. ಉದಯೋನ್ಮುಖ ಕ್ರಿಕೆಟ್ ರಾಷ್ಟ್ರವಾದ ಜಪಾನ್‌ಗೆ ಭಾರತದಂತಹ ಬಲಿಷ್ಠ ತಂಡದ ಎದುರು ಆಡುತ್ತಿರುವುದು ದೊಡ್ಡ ಅವಕಾಶವಾಗಿದ್ದು, ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ. ಈ ಪಂದ್ಯವು ಸೆಪ್ಟೆಂಬರ್ 22, 2026 ರಂದು ನಡೆಯಲಿದೆ.

ಇಂಡಿಯಾ vs ವಿಂಡೀಸ್:

ಜಪಾನ್ ವಿರುದ್ಧದ ಪಂದ್ಯದ ಬೆನ್ನಲ್ಲೇ ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 17, 2026 ರವರೆಗೆ ನಡೆಯಲಿರುವ ಈ ಸರಣಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಒಟ್ಟು 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ.

ಏಷ್ಯನ್ ಗೇಮ್ಸ್​ ಟೂರ್ನಿ:

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ನಡುವೆ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್​ನಲ್ಲಿ ಟಿ20 ಟೂರ್ನಿ ಆಡಲಿದೆ. ಈ ಪಂದ್ಯಗಳು ಸೆಪ್ಟೆಂಬರ್ 28 ರಿಂದ ಶುರುವಾಗಲಿದೆ. ಈ ಟಿ20 ಟೂರ್ನಿಯ ಬಳಿಕ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಐದು ಮ್ಯಾಚ್​ಗಳ ಟಿ20 ಸರಣಿ ನಡೆಯಲಿದೆ.

ಭಾರತ vs ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ:

  • ಸೆಪ್ಟೆಂಬರ್ 27: 1ನೇ ಏಕದಿನ ಪಂದ್ಯ (ತಿರುವನಂತಪುರಂ)
  • ಸೆಪ್ಟೆಂಬರ್ 30: 2ನೇ ಏಕದಿನ ಪಂದ್ಯ (ಗುವಾಹಾಟಿ)
  • ಅಕ್ಟೋಬರ್ 03: 3ನೇ ಏಕದಿನ ಪಂದ್ಯ (ಚಂಡೀಗಢ)
  • ಅಕ್ಟೋಬರ್ 06: 1ನೇ ಟಿ20 ಪಂದ್ಯ (ಲಕ್ನೋ)
  • ಅಕ್ಟೋಬರ್ 09: 2ನೇ ಟಿ20 ಪಂದ್ಯ (ರಾಂಚಿ)
  • ಅಕ್ಟೋಬರ್ 11: 3ನೇ ಟಿ20 ಪಂದ್ಯ (ಇಂದೋರ್)
  • ಅಕ್ಟೋಬರ್ 14: 4ನೇ ಟಿ20 ಪಂದ್ಯ (ಹೈದರಾಬಾದ್)
  • ಅಕ್ಟೋಬರ್ 17: 5ನೇ ಟಿ20 ಪಂದ್ಯ (ಬೆಂಗಳೂರು)

ಇದನ್ನೂ ಓದಿ: ಟೀಮ್ ಇಂಡಿಯಾವನ್ನು ಹಿಂದಿಕ್ಕಿದ ಇಂಗ್ಲೆಂಡ್!

ಭಾರತದ ಏಷ್ಯನ್ ಗೇಮ್ಸ್​​ ವೇಳಾಪಟ್ಟಿ:

  • ಸೆಪ್ಟೆಂಬರ್ 28: ಕ್ವಾರ್ಟರ್ ಫೈನಲ್
  • ಅಕ್ಟೋಬರ್ 1: ಸೆಮಿಫೈನಲ್ (ಅರ್ಹತೆ ಪಡೆದರೆ)
  • ಅಕ್ಟೋಬರ್ 3: ಫೈನಲ್ (ಅರ್ಹತೆ ಪಡೆದರೆ)

 

Loading...
Unable to load recommendations.
Follow Us