AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Test 20: ಹೇಗಿರಲಿದೆ ಟೆಸ್ಟ್ 20 ಟೂರ್ನಿ?

Test Twenty Format: ಶೀಘ್ರದಲ್ಲೇ ಕ್ರಿಕೆಟ್ ಅಂಗಳಕ್ಕೆ ಹೊಸ ಲೀಗ್​ ಎಂಟ್ರಿ ಕೊಡಲಿದೆ. ಅದು ಸಹ ಟಿ20 ಮಾದರಿಯ ಟೆಸ್ಟ್ ಕ್ರಿಕೆಟ್. ಅಂದರೆ ಟೆಸ್ಟ್ ಕ್ರಿಕೆಟ್​ ಮಾದರಿಯಲ್ಲಿ ಟಿ20 ಟೂರ್ನಿ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿದೆ. ಜನವರಿಯಲ್ಲಿ ಶುರುವಾಗಲಿರುವ ಈ ಟೂರ್ನಿಯ ನಿಯಮಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

Test 20: ಹೇಗಿರಲಿದೆ ಟೆಸ್ಟ್ 20 ಟೂರ್ನಿ?
Test 20
ಝಾಹಿರ್ ಯೂಸುಫ್
|

Updated on: Oct 18, 2025 | 8:56 AM

Share

ಕ್ರಿಕೆಟ್… ಟೆಸ್ಟ್ ಕ್ರಿಕೆಟ್ ಆಯ್ತು…ಬಳಿಕ ಏಕದಿನ ಕ್ರಿಕೆಟ್ ಪರಿಚಯವಾಯ್ತು…ಇದಾದ ಬಳಿಕ ಟಿ20 ಕ್ರಿಕೆಟ್ ಶುರುವಾಯ್ತು…ಇದರ ಬೆನ್ನಲ್ಲೇ ಟಿ10 ಕ್ರಿಕೆಟ್ ಕೂಡ ಸದ್ದು ಮಾಡಿತು…ಮುಂದೇನು ಎಂಬ ಪ್ರಶ್ನೆಗೆ ಸದ್ಯದ ಉತ್ತರ ಟೆಸ್ಟ್ 20. ಹೌದು, ಕ್ರಿಕೆಟ್ ಜಗತ್ತಿಗೆ ಮತ್ತೊಂದು ಹೊಸ ಲೀಗ್ ಸೇರ್ಪಡೆಯಾಗಲಿದೆ. ಈ ಟೂರ್ನಿಯು ಟಿ20 ಸ್ವರೂಪವನ್ನು ಹೋಲುತ್ತಿದ್ದರೂ, ನಿಯಮಗಳು ಟೆಸ್ಟ್ ಕ್ರಿಕೆಟಿನದ್ದು ಎಂಬುದು ವಿಶೇಷ.

ಏನಿದು ಟೆಸ್ಟ್ ಟಿ20?

ಹೆಸರೇ ಸೂಚಿಸುವಂತೆ ಟೆಸ್ಟ್ ಮಾದರಿಯಲ್ಲಿ ನಡೆಸಲಾಗುವ ಟಿ20. ಅಂದರೆ ಇಲ್ಲಿ ನಾಲ್ಕು ಇನಿಂಗ್ಸ್​ಗಳ ಮೂಲಕ ಟಿ20 ಪಂದ್ಯವನ್ನು ಆಯೋಜಿಸಲಾಗುತ್ತದೆ. ಹೀಗಾಗಿಯೇ ಇದನ್ನು ಟೆಸ್ಟ್ ಟ್ವೆಂಟಿ ಎಂದು ಕರೆಯಲಾಗುತ್ತದೆ.

ಹೇಗಿರಲಿದೆ ಟೆಸ್ಟ್ ಟಿ20?

ಟೆಸ್ಟ್ 20 ಪಂದ್ಯಗಳಲ್ಲಿ ಒಟ್ಟು ನಾಲ್ಕು ಇನಿಂಗ್ಸ್​ ಇರಲಿದೆ. ಪ್ರತಿ ಇನಿಂಗ್ಸ್​ನಲ್ಲಿ 20 ಓವರ್​ಗಳನ್ನು ಆಡಲಾಗುತ್ತದೆ. ಅಂದರೆ ಒಂದು ತಂಡವು 2 ಇನಿಂಗ್ಸ್​ಗಳ ಮೂಲಕ ಒಟ್ಟು 40 ಓವರ್​ಗಳನ್ನು ಆಡಲಿದ್ದಾರೆ. ಇಲ್ಲಿ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಮೊದಲ ಇನಿಂಗ್ಸ್ ಬಳಿಕ ದ್ವಿತೀಯ ಇನಿಂಗ್ಸ್ ಶುರುವಾಗಲಿದೆ.

ಟೆಸ್ಟ್ ಟಿ20 ನಿಯಮಗಳೇನು?

  1. ಪವರ್‌ಪ್ಲೇ:  ಟಿ20 ಕ್ರಿಕೆಟ್​ನಂತೆ ಇಲ್ಲೂ ಕೂಡ ಪವರ್​ಪ್ಲೇ ಇರಲಿದೆ. ಟಿ20 ಕ್ರಿಕೆಟ್​ನಲ್ಲಿ 6 ಓವರ್​ಗಳ ಪವರ್​ಪ್ಲೇ ಇದ್ದರೆ, ಟೆಸ್ಟ್ ಟಿ20 ನಲ್ಲಿ ಪವರ್​ಪ್ಲೇ ಅನ್ನು 4 ಓವರ್​ಗಳಿಗೆ ಸೀಮಿತಗೊಳಿಸಲಾಗಿದೆ.
  2. ಪವರ್​ಪ್ಲೇ ಆಯ್ಕೆ: ಪವರ್​ಪ್ಲೇ ಅನ್ನು 1 ರಿಂದ 4 ಓವರ್​​ಗಳ ನಡುವೆ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಎರಡನೇ ಇನ್ನಿಂಗ್ಸ್‌ನ 7 ಮತ್ತು 10 ಓವರ್‌ಗಳ ನಡುವೆ ಪವರ್​ಪ್ಲೇ ಅನ್ನು ಬಳಸಿಕೊಳ್ಳಬಹುದು.
  3. ಫಾಲೋ-ಆನ್: ಮೊದಲ ಇನ್ನಿಂಗ್ಸ್ ನಂತರ ಎರಡನೇ ಬ್ಯಾಟಿಂಗ್ ಮಾಡುವ ತಂಡವು 75+ ರನ್‌ಗಳ ಹಿನ್ನಡೆಯಲ್ಲಿದ್ದರೆ ಫಾಲೋ-ಆನ್ ಜಾರಿಗೊಳಿಸಬಹುದು.
  4. ಡ್ರಾಗೂ ಅವಕಾಶ: ಟೆಸ್ಟ್ ಟಿ20 ಪಂದ್ಯದಲ್ಲಿ ಜಯ, ಸೋಲು ಹಾಗೂ ಡ್ರಾ ಫಲಿತಾಂಶವನ್ನು ಎದುರು ನೋಡಬಹುದು. ಅಂದರೆ ಕೊನೆಯ ಇನಿಂಗ್ಸ್ ಆಡುವ ತಂಡವು ರನ್ ಚೇಸ್ ಮಾಡಲು ಸಾಧ್ಯವಾಗದೇ ಇದ್ದರೆ, ಆಲೌಟ್ ಆಗದೇ ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದು.
  5. ಒನ್​ಡೇ ಪಂದ್ಯ: ಟೆಸ್ಟ್​ 20 ಸ್ವರೂಪವು ಟೆಸ್ಟ್ ಕ್ರಿಕೆಟ್​ ಅನ್ನು ಹೋಲುತ್ತಿದ್ದರೂ ಈ ಪಂದ್ಯವನ್ನು ಒಂದೇ ದಿನದಲ್ಲಿ ಆಯೋಜಿಸಲಾಗುತ್ತದೆ. ಅಂದರೆ 80 ಓವರ್​ಗಳನ್ನು ಒಂದೇ ದಿನದಲ್ಲಿ ಆಡಿಸಲಾಗುತ್ತದೆ.
  6. ಆರಂಭಿಕ ಆಘಾತ: ಒಂದು ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಿಗಿಂತ ಮೊದಲು ಆಲೌಟ್ ಆಗಿದ್ದರೆ, ಎದುರಾಳಿ ತಂಡಕ್ಕೆ ಮೂರು ಹೆಚ್ಚುವರಿ ಓವರ್‌ಗಳು ನೀಡಲಾಗುತ್ತದೆ. ಅಂದರೆ ದ್ವಿತೀಯ ಇನಿಂಗ್ಸ್ ಆಡುವ ತಂಡವು 23 ಓವರ್​ಗಳನ್ನು ಪಡೆಯಲಿದೆ.
  7. ಬೌಲಿಂಗ್ ನಿರ್ಬಂಧಗಳು: ಕೇವಲ ಐದು ಬೌಲರ್‌ಗಳನ್ನು ಮಾತ್ರ ಬಳಸಿಕೊಳ್ಳಬಹುದು. ಅಲ್ಲದೆ ಒಬ್ಬ ಬೌಲರ್​​ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು ಎಂಟು ಓವರ್‌ಗಳವರೆಗೆ ಬೌಲಿಂಗ್ ಮಾಡಬಹುದು.
  8. ವೈಡ್‌-ನೋ-ಬಾಲ್‌ ನಿಯಮ: ವೈಡ್ ಮತ್ತು ನೋಬಾಲ್​ಗಳಿಗೆ ಪ್ರಮಾಣಿತ ಟಿ20 ನಿಯಮಗಳು ಅನ್ವಯಿಸುತ್ತವೆ. ಆದರೆ ಒಂದು ಓವರ್‌ನಲ್ಲಿ ಮೂರು ಅಥವಾ ಹೆಚ್ಚಿನ ವೈಡ್ ಅಥವಾ ನೋ ಬಾಲ್ ಮೂಡಿಬಂದರೆ ಮೂರು ರನ್‌ಗಳ ದಂಡವನ್ನು ವಿಧಿಸಲಾಗುತ್ತದೆ. ಅಂದರೆ ಎದುರಾಳಿ ತಂಡಕ್ಕೆ ಹೆಚ್ಚುವರಿ 3 ರನ್​ಗಳು ಸಿಗಲಿದೆ.
  9. ಓವರ್-ರೇಟ್ ಪೆನಾಲ್ಟಿ: ನಿಧಾನಗತಿಯ ಓವರ್-ರೇಟ್‌ಗಳಿಂದಾಗಿ ಐದು ರನ್‌ಗಳ ಪೆನಾಲ್ಟಿ ವಿಧಿಸಲಾಗುತ್ತದೆ. ಇದರಿಂದ ಎದುರಾಳಿ ತಂಡಕ್ಕೆ ಹೆಚ್ಚುವರಿ 5 ರನ್​ಗಳು ದೊರೆಯಲಿದೆ.
  10. ಸೂಪರ್ ಸೆಷನ್: ಪಂದ್ಯವು ಟೈ ಆದಲ್ಲಿ, ಸೂಪರ್ ಓವರ್ ನಡೆಯಲಿದೆ. ಸೂಪರ್ ಓವರ್ ಕೂಡ ಸಮಬಲಗೊಂಡರೆ ಹೆಚ್ಚು ಬೌಂಡರಿಗಳನ್ನು ಗಳಿಸಿದ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ಎಷ್ಟು ತಂಡಗಳಿಗೆ ಅವಕಾಶ?

ಟೆಸ್ಟ್ ಟಿ20 ಟೂರ್ನಿಯಲ್ಲಿ ಒಟ್ಟು 6 ತಂಡಗಳನ್ನು ಕಣಕ್ಕಿಳಿಸಲಾಗುತ್ತದೆ. ಈ ಆರು ತಂಡಗಳಲ್ಲಿ ಮೂರು ಫ್ರಾಂಚೈಸಿಗಳು ಭಾರತದ ನಗರವನ್ನು ಪ್ರತಿನಿಧಿಸಲಿದೆ. ಇನ್ನು ದುಬೈ, ಲಂಡನ್ ಹಾಗೂ ಅಮೆರಿಕ ನಗರವನ್ನು ಪ್ರತಿನಿಧಿಸುವ ಫ್ರಾಂಚೈಸಿಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ.

ಇದನ್ನೂ ಓದಿ: ಪಾಕಿಸ್ತಾನ್ ದಾಳಿಗೆ ಮೂವರು ಅಫ್ಘಾನಿಸ್ತಾನ್ ಕ್ರಿಕೆಟಿಗರು ಮೃತ್ಯು..!

ಟೆಸ್ಟ್ ಟಿ20 ಯಾವಾಗ ಶುರು?

ಟೆಸ್ಟ್ ಟಿ20 ಟೂರ್ನಿಯನ್ನು ಜನವರಿ 2026 ರಲ್ಲಿ ಶುರು ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಈಗಲೇ ಸಿದ್ಧತೆಗಳನ್ನು ಆರಂಭಿಸಿರುವುದಾಗಿ ದಿ ಒನ್ ಒನ್ ಸಿಕ್ಸ್ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕ್ರೀಡಾ ಉದ್ಯಮಿ ಗೌರವ್ ಬಹಿರ್ವಾನಿ ಅವರು ತಿಳಿಸಿದ್ದಾರೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ