IPL 2021: ವನಿಂದು ಹಸರಂಗ vs ಟಿಮ್ ಡೇವಿಡ್: ಯಾರಿಗೆ ಸಿಗಲಿದೆ ಚೊಚ್ಚಲ ಚಾನ್ಸ್
Tim David vs Wanindu Hasaranga: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವ್ದೀಪ್ ಸೈನಿ, ಆಕಾಶ್ ದೀಪ್ , ಯುಜ್ವೇಂದ್ರ ಚಹಲ್, ಸಚಿನ್ ಬೇಬಿ,

IPL 2021 ರ ದ್ವಿತಿಯಾರ್ಧದಲ್ಲಿ ಆರ್ಸಿಬಿ (RCB) ತಂಡದಲ್ಲಿ ನಾಲ್ಕು ಪ್ರಮುಖ ಬದಲಾವಣೆ ಆಗಿದೆ. ಅದರಂತೆ ತಂಡಕ್ಕೆ ವನಿಂದು ಹಸರಂಗ, ಟಿಮ್ ಡೇವಿಡ್, ದುಷ್ಮಂತ ಚಮೀರಾ ಹಾಗೂ ಜಾರ್ಜ್ ಗಾರ್ಟನ್ ಆಗಮನವಾಗಿದೆ. ಸೆಪ್ಟೆಂಬರ್ 20 ರಂದು ಆರ್ಸಿಬಿ ಮೊದಲ ಪಂದ್ಯವನ್ನಾಡಲಿದ್ದು, ಈ ಪಂದ್ಯದಲ್ಲಿ ಯಾವ ವಿದೇಶಿ ಆಟಗಾರನಿಗೆ ಚಾನ್ಸ್ ಸಿಗಲಿದೆ ಎಂಬುದು ಈಗ ಕುತೂಹಲ. ಏಕೆಂದರೆ ತಂಡದಲ್ಲಿ ಈಗಾಗಲೇ ಖಾಯಂ ಸದಸ್ಯರಾಗಿ ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಇದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಕೈಲ್ ಜೇಮಿಸನ್ ಸ್ಥಾನ ಪಡೆಯುವುದು ಖಚಿತ. ಇದಾಗ್ಯೂ ನಾಲ್ಕನೇ ವಿದೇಶಿ ಆಟಗಾರನಾಗಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಒಂದೆಡೆ ಅದ್ಭುತ ಫಾರ್ಮ್ನಲ್ಲಿರುವ ಟಿಮ್ ಡೇವಿಡ್ ಇದ್ದರೆ, ಇನ್ನೊಂದೆಡೆ ಸ್ಪಿನ್ ಮೋಡಿ ಮಾಡುವ ವನಿಂದು ಹಸರಂಗ ಇದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರನ್ನು ಮೊದಲ ಪಂದ್ಯಕ್ಕೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಅದರಲ್ಲೂ ಟಿಮ್ ಡೇವಿಡ್ ಅವರನ್ನು ಆಯ್ಕೆ ಮಾಡಿಕೊಂಡರೆ 6ನೇ ಕ್ರಮಾಂಕದಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಡೇವಿಡ್ ಡೆತ್ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಆರ್ಸಿಬಿ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದೆ. ಇದಾಗ್ಯೂ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾದರೆ ವನಿಂದು ಹಸರಂಗಗೆ ಚಾನ್ಸ್ ನೀಡಬಹುದು. ಏಕೆಂದರೆ ಅಬುಧಾಬಿ ಪಿಚ್ನಲ್ಲಿ ಆಡಲಾದ ಕೊನೆಯ ಪಂದ್ಯದಲ್ಲಿ ಬೌಲರುಗಳು ಯಶಸ್ಸು ಸಾಧಿಸಿದ್ದರು.
ಇದಾಗ್ಯೂ ಈ ಪಿಚ್ ಬೌಲರುಗಳಿಗೆ ಮತ್ತು ಬ್ಯಾಟ್ಸ್ಮನ್ಗಳಿಗೆ ಸಹಕಾರಿ ಎಂಬುದು ವಿಶೇಷ. ಇನ್ನು ಈ ಪಿಚ್ನ ಅವರೇಜ್ ಸ್ಕೋರ್ 150 ರಿಂದ 170 ರನ್. ಆದರೆ ಇಲ್ಲಿ ಆಡಲಾದ 53 ಪಂದ್ಯಗಳಲ್ಲಿ 14 ಬಾರಿ 150 ಕ್ಕಿಂತ ಕಡಿಮೆ ಮೊತ್ತ ಮೂಡಿಬಂದಿತ್ತು. ಹಾಗಾಗಿ ಆರ್ಸಿಬಿ ಕೂಡ ಬೌಲರ್ಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಅದರಂತೆ ವನಿಂದು ಹಸರಂಗಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು ಎನ್ನಬಹುದು.
ಆರ್ಸಿಬಿ ಸಂಪೂರ್ಣ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವ್ದೀಪ್ ಸೈನಿ, ಆಕಾಶ್ ದೀಪ್ , ಯುಜ್ವೇಂದ್ರ ಚಹಲ್, ಸಚಿನ್ ಬೇಬಿ, ಹರ್ಷಲ್ ಪಟೇಲ್, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೇಮಿಸನ್, ಶ್ರೀಕರ್ ಭರತ್, ಸುಯೇಶ್ ಪ್ರಭುದೇಸಾಯ್, ಡೆನಿಯಲ್ ಕ್ರಿಸ್ಟಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ದುಷ್ಮಂತ ಚಮೀರಾ, ಟಿಮ್ ಡೇವಿಡ್.
ಇದನ್ನೂ ಓದಿ: RCB ತಂಡದ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ರಾಜೀನಾಮೆ ನೀಡಲಿದ್ದಾರೆ..!
ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು
ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್
ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್ ಸ್ಪೀಕರ್
(Tim David vs Wanindu Hasaranga: Who will Make Debut in Virat Kohli-Led RCB)
