U19 World Cup 2024: ಭಾರತ- ಆಸೀಸ್ ವಿಶ್ವಕಪ್ ಫೈನಲ್ ಪಂದ್ಯ ಯಾವ ಚಾನೆಲ್ನಲ್ಲಿ ಎಷ್ಟು ಗಂಟೆಗೆ ಆರಂಭ?
U19 World Cup 2024: ವಿಶ್ವಕಪ್ ಇತಿಹಾಸದಲ್ಲಿ ಭಾರತದ 9ನೇ ಫೈನಲ್ ಪಂದ್ಯಾವಾಗಿದೆ. ಅದರಲ್ಲಿ 5 ಬಾರಿ ಪ್ರಶಸ್ತಿ ಗೆದ್ದಿರುವ ಭಾರತ, ದಾಖಲೆಯ ಆರನೇ ಬಾರಿ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿದೆ.
ಭಾರತ ಯುವ ಪಡೆ ಇದೇ ಭಾನುವಾರದಂದು 19 ವರ್ಷದೊಳಗಿನವರ ಏಕದಿನ ವಿಶ್ವಕಪ್ (Under-19 World Cup 2024) ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದ (Australia vs India) ವಿರುದ್ಧ ಕಣಕ್ಕಿಳಿಯುತ್ತಿದೆ. ಇದು ವಿಶ್ವಕಪ್ ಇತಿಹಾಸದಲ್ಲಿ ಭಾರತದ 9ನೇ ಫೈನಲ್ ಪಂದ್ಯಾವಾಗಿದೆ. ಅದರಲ್ಲಿ 5 ಬಾರಿ ಪ್ರಶಸ್ತಿ ಗೆದ್ದಿರುವ ಭಾರತ ದಾಖಲೆಯ ಆರನೇ ಬಾರಿ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿದೆ. ಅಲ್ಲದೆ ಕಳೆದ ನವೆಂಬರ್ 19ರಂದು ನಡೆದ ಹಿರಿಯ ವಿಶ್ವಕಪ್ (ODI World Cup 2023) ಫೈನಲ್ನಲ್ಲಿ ಭಾರತವನ್ನು ಮಣಿಸಿ ವಿಶ್ವಕಪ್ ಗೆದ್ದಿದ್ದ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶವೂ ಕಿರಿಯರ ತಂಡಕ್ಕೆ ಬಂದೊದಗಿದೆ.
2016ರ ನಂತರ ಭಾರತ ಎಲ್ಲಾ ಫೈನಲ್‌ಗಳನ್ನು ಆಡಿದೆ
ಭಾರತ ಅಂಡರ್-19 ತಂಡವು 2016 ರಿಂದ ಎಲ್ಲಾ ಫೈನಲ್‌ಗಳನ್ನು ಆಡಿದೆ, 2016 ಮತ್ತು 2020 ರಲ್ಲಿ ಸೋತರೆ, 2018 ಮತ್ತು 2022 ಆವೃತ್ತಿಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ. 2008 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಟ್ರೋಫಿಯನ್ನು ಗೆದ್ದುಕೊಂಡಿತು. ಆ ನಂತರ 19 ವರ್ಷದೊಳಗಿನವರ ವಿಶ್ವಕಪ್ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತು. ಲೈವ್ ಟಿವಿ ಕವರೇಜ್ ಮತ್ತು ‘ಸ್ಟ್ರೀಮಿಂಗ್’ ನಿಂದಾಗಿ ಅದರತ್ತ ಕುತೂಹಲವೂ ಹೆಚ್ಚಿದೆ. ಅಂಡರ್-19 ವಿಶ್ವಕಪ್ ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಸುರೇಶ್ ರೈನಾ, ಶಿಖರ್ ಧವನ್, ರೋಹಿತ್ ಶರ್ಮಾ, ಕೊಹ್ಲಿ, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರಿಷಭ್ ಪಂತ್, ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಸ್ಟಾರ್ ಕ್ರಿಕೆಟಿಗರನ್ನು ನಿರ್ಮಿಸಿದೆ. ಆದರೆ ‘ಸ್ಟಾರ್‌ಡಮ್’ ಗಳಿಸಿ ಉನ್ನತ ಹಂತ ತಲುಪಲು ವಿಫಲರಾದ ಆಟಗಾರರ ಪಟ್ಟಿ ಇನ್ನೂ ದೊಡ್ಡದಿದೆ.
ಕಿರಿಯರ ವಿಶ್ವಕಪ್ ಫೈನಲ್ಗಳಲ್ಲಿ ಭಾರತ ಯುವ ಪಡೆಯ ಪ್ರದರ್ಶನ ಹೇಗಿದೆ ಗೊತ್ತಾ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಯಾವಾಗ ನಡೆಯಲ್ಲಿದೆ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಫೆಬ್ರವರಿ 11 ರ ಭಾನುವಾರದಂದು ನಡೆಯಲ್ಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಎಲ್ಲಿ ನಡೆಯಲ್ಲಿದೆ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲ್ಲಿದೆ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದ ನೇರ ಪ್ರಸಾರ ಎಲ್ಲಿ?
ಅಂಡರ್ 19 ವಿಶ್ವಕಪ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಹಾಗೆಯೇ ಮೊಬೈಲ್‌ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
ತಂಡಗಳು ಈ ಕೆಳಗಿನಂತಿವೆ
ಭಾರತ: ಉದಯ್ ಸಹರನ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರಾವಳಿ ಅವನೀಶ್ ರಾವ್ (ವಿಕೆಟ್ ಕೀಪರ್), ಸೌಮ್ಯ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
ಆಸ್ಟ್ರೇಲಿಯಾ: ಹಗ್ ವೆಗೆನ್ (ಕ್ಯಾಪ್ಟನ್), ಲಾಚ್ಲಾನ್ ಐಟ್ಕೆನ್, ಚಾರ್ಲಿ ಆಂಡರ್ಸನ್, ಹರ್ಕಿರತ್ ಬಾಜ್ವಾ, ಮಹಾಲಿ ಬಿಯರ್ಡ್‌ಮನ್, ಟಾಮ್ ಕ್ಯಾಂಪ್‌ಬೆಲ್, ಹ್ಯಾರಿ ಡಿಕ್ಸನ್, ರಿಯಾನ್ ಹಿಕ್ಸ್ (ವಿಕೆಟ್ ಕೀಪರ್), ಸ್ಯಾಮ್ ಕಾನ್ಸ್ಟಾಸ್, ರಾಫೆಲ್ ಮೆಕ್‌ಮಿಲನ್, ಏಡನ್ ಓ’ಕಾನರ್, ಹರ್ಜಾಸ್ ಸಿಂಗ್, ಟಾಮ್ ಸ್ಟ್ರಾಕರ್, ಕ್ಯಾಲಮ್ ವಿಡ್ಲರ್ ಮತ್ತು ಒಲ್ಲಿ ಪೀಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ